32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿವರದಿ

ಉಜಿರೆಯ ಐಕಾನ್ ಗೆ ಪ್ಲಾಟಿನಂ ಸೆಂಟರ್ ಅವಾರ್ಡ್ ಸೇರಿ ಅನೇಕ ಗೌರವಗಳು

ಉಜಿರೆ: ಗುಣಮಟ್ಟದ ಕಂಪ್ಯೂಟರ್ ಶಿಕ್ಷಣವನ್ನು ನಿರಂತರವಾಗಿ ನೀಡುತ್ತಾ ಬಂದಿರುವ ಉಜಿರೆಯ ಐಕಾನ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆ ತನ್ನ 4 ವರ್ಷದ ಯಶಸ್ವಿ ಶಿಕ್ಷಣಯಾತ್ರೆಯಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದು ಶಿಕ್ಷಣ ಕ್ಷೇತ್ರದಲ್ಲಿ ಗಮನ ಸೆಳೆದಿದೆ. ಇತ್ತೀಚೆಗೆ National Board of Computer Education (NBCE) ವತಿಯಿಂದ ಐಕಾನ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ ಪ್ಲಾಟಿನಂ ಸೆಂಟರ್ ಅವಾರ್ಡ್ – 2026 ಪ್ರದಾನ ಮಾಡಲಾಗಿದೆ.

ಈ ಗೌರವವು ಸಂಸ್ಥೆಯ ಶಿಕ್ಷಣ ಗುಣಮಟ್ಟ, ವಿದ್ಯಾರ್ಥಿ ಸಾಧನೆ ಹಾಗೂ ನಿರ್ವಹಣಾ ಶ್ರೇಷ್ಠತೆಯನ್ನು ಗುರುತಿಸಿ ನೀಡಲ್ಪಟ್ಟ ಮಹತ್ವದ ಪ್ರಶಸ್ತಿಯಾಗಿದೆ. ಜೊತೆಗೆ ಸಂಸ್ಥೆ Best of Karnataka Award (3rd Position) ಪಡೆದು, ಕರ್ನಾಟಕದ ಶ್ರೇಷ್ಠ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳ ಪೈಕಿ ಒಂದಾಗಿ ಗುರುತಿಸಿಕೊಂಡಿದೆ.ಇದಲ್ಲದೆ National Board of Computer Education (NBCE) ವತಿಯಿಂದ ಲಭಿಸಿದ Star of NBCE Award ಹಾಗೂ ಮುಂಚಿತವಾಗಿ ಪಡೆದ Silver Centre Award ಗಳು ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ನಿರಂತರ ಸಾಧನೆಯನ್ನು ಮತ್ತಷ್ಟು ಬಲಪಡಿಸಿವೆ.

ಇದುವರೆಗೆ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವ iCON Computer Education, DCA, DDO, DCAA, DFA, Tally, Graphic Design, Interior Design, Mechanical CAD ಸೇರಿದಂತೆ ಉದ್ಯೋಗಮುಖಿ ಕೋರ್ಸ್‌ಗಳ ಮೂಲಕ ಅನೇಕ ಯುವಕರಿಗೆ ಉತ್ತಮ ವೃತ್ತಿಜೀವನ ರೂಪಿಸಲು ನೆರವಾಗುತ್ತಿದೆ.ಸಂಸ್ಥೆಯ ಮುಖ್ಯಸ್ಥರು ಮಾತನಾಡಿ,“ಈ ಎಲ್ಲಾ ಗೌರವಗಳು ನಮ್ಮ ವಿದ್ಯಾರ್ಥಿಗಳ ನಂಬಿಕೆ, ಶಿಕ್ಷಕರ ಸಮರ್ಪಣೆ ಹಾಗೂ ಪೋಷಕರ ಬೆಂಬಲದ ಫಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನವೀನ ಹಾಗೂ ಕೈಗಾರಿಕಾ ಅವಶ್ಯಕತೆಗಳಿಗೆ ತಕ್ಕ ಶಿಕ್ಷಣ ನೀಡಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಉಜಿರೆ ಹಾಗೂ ಸುತ್ತಮುತ್ತಲಿನ ಪ್ರದೇಶದ ವಿದ್ಯಾರ್ಥಿಗಳಲ್ಲಿ iCON Computer Education ಇಂದು ಗುಣಮಟ್ಟದ ಕಂಪ್ಯೂಟರ್ ಶಿಕ್ಷಣದ ನಂಬಿಗಸ್ತ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಈ ಸಾಧನೆಗಳು ಸಂಸ್ಥೆಯ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸುತ್ತಿವೆ.

Related posts

ಸುದ್ದಿ ಜನಾಂದೋಲನ ವೇದಿಕೆಯ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ: ಡಾ. ಶಿವಾನಂದ

Suddi Udaya

ನಾಲ್ಕೂರು: ಭಾರಿ ಮಳೆಗೆ ಕುರೆಲ್ಯ ರಾಜೇಂದ್ರ ಶೆಟ್ಟಿಯವರ ಮನೆಗೆ ಬರೆ ಕುಸಿದು ಹಾನಿ: ಬಿಜೆಪಿ ಬೆಳ್ತಂಗಡಿ ಮಂಡಲದಿಂದ ಭೇಟಿ

Suddi Udaya

ಬೆಳ್ತಂಗಡಿ: ಡಾ. ಯೂಸುಫ್ ಕುಂಬ್ಲೆ ಅವರ ಫಾತಿಮಾ ಹೆಲ್ತ್ ಫೌಂಡೇಶನ್ ವತಿಯಿಂದ 35 ಕುಟುಂಬಕ್ಕೆ ಆಹಾರದ ಕಿಟ್ ವಿತರಣೆ

Suddi Udaya

ಹಿಂದುಳಿದ ವರ್ಗಗಳ ಮೋರ್ಚಾದ ತಾಲೂಕು ಅಧ್ಯಕ್ಷ ರತ್ನಾಕರ ಬುಣ್ಣನ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಥಮ ಪೂರ್ಣಪ್ರಮಾಣದ ಸಭೆ

Suddi Udaya

ಜುಲೈ 12: ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್‌,: ರಾಜಿ ಸಂದಾನದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶ

Suddi Udaya

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಾಜ್ಯದ ಸಂಸದರನ್ನು ಅಭಿನಂದಿಸಿದ ಶಾಸಕ ಹರೀಶ್ ಪೂಂಜ

Suddi Udaya
error: Content is protected !!