September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

ನಾರಾವಿ: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.10ರಂದು ಗ್ರಾ.ಪಂ. ಅಧ್ಯಕ್ಷ ರಾಜವರ್ಮ ಜೈನ್ ರವರ ಅಧ್ಯಕ್ಷತೆಯಲ್ಲಿ ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ರವರು ಗ್ರಾಮ ಸಭೆಯನ್ನು ಮುನ್ನಡೆಸಿದರು.

ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದ್ದು ಜನ ಸಾಮಾನ್ಯರಿಗೆ ಓಡಾಡುವುದಕ್ಕೆ ಕಷ್ಟಕರವಾಗಿದೆ. ಕಾವಲಿಗುಡ್ಡೆಯ ಟಿಸಿಯಲ್ಲಿ ವಾಲ್ಟೇಜ್ ಇಲ್ಲ. ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಅರ್ಬಿ ಫಾಲ್ಸ್ ನ್ನೂ ಪ್ರವಾಸೋದ್ಯಮವಾಗಿ ಮಾಡಬೇಕು ಎಂದು ಪಂಚಾಯತ್ ಸದಸ್ಯರು ಅರಣ್ಯ ಇಲಾಖೆಗೆ ತಿಳಿಸಿದರು. ಸರಕಾರಿ ಭೂಮಿಯಲ್ಲಿದ್ದ ಮರಗಳನ್ನು ಕಡಿದು, ಅಕ್ರಮವಾಗಿ ಸ್ಥಳವನ್ನು ಸಮತಟ್ಟು ಮಾಡಲಾಗಿದೆ ಎಂದು ವಿಜಯ ಆರೋಪಿಸಿದರು.

ಆರಕ್ಷಣ ಠಾಣೆ ವತಿಯಿಂದ ಸೈಬರ್ ಕ್ರೈಮ್ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಲಾಯಿತು. ಬೀಟ್ ಪೊಲೀಸರು ಬೀಟ್ ಮಾಡುವ ಸಮಯ ತಿಂಗಳಿಗೊಮ್ಮೆ ಗ್ರಾಮದ ಜನರನ್ನು ಒಟ್ಟುಗೂಡಿಸಿ ಸಭೆಯನ್ನು ನಡೆಸಬೇಕು. ಫೇಕ್ ಐಡಿ ಮೂಲಕ ಮಾನಹಾನಿಕರ ಪೋಸ್ಟ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕಿನಾದ್ಯಂತ ಚಿರತೆಯ ಹಾವಳಿ ಹೆಚ್ಚಾಗಿದ್ದು, ಅತ್ಯಡ್ಕದಲ್ಲಿ ಸಾಕು ನಾಯಿ ಹಾಗೂ ಹಲವಾರು ಕೋಳಿಗಳನ್ನು ತಿಂದು ಹೋಗಿರುತ್ತದೆ. ರೈತರು ಬೆಳೆದಂತಹ ಕೃಷಿಯನ್ನು ಹಂದಿ, ಮುಳ್ಳಂದಿ, ಕಾಡುಕೋಣ ನಾಶಗೊಳಿಸುತ್ತಿದೆ, ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತಾ, ಸದಸ್ಯರಾದ ಆಶಾಲತಾ, ಯಶೋಧ, ಸರಿತಾ, ನಾರಾಯಣ ಪೂಜಾರಿ, ಮಮತಾ, ಸುದರ್ಶನ್ ಜಿ.ಹೆಗ್ಡೆ, ಮೀನಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಕೃಷಿ ಪತ್ತಿನ ಸಹಕಾರಿ ಸಂಘದ ಸುಧಾಕರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಸ್ವಾಗತಿಸಿದರು. ಗ್ರಾಮ ಪಂಚಾಯತಿ ಸಿಬ್ಬಂದಿ ಸತೀಶ್ ರವರು ಅನುಪಾಲನಾ ವರದಿ ವಾಚಿಸಿ ವಂದಿಸಿದರು.

ಪ್ರಾಮಾಣಿಕ ಕೆಲಸಗಳು ನಡೆದಿದೆ: ನಮ್ಮ ಆಡಳಿತ ಅವಧಿಯಲ್ಲಿ ಪ್ರಾಮಾಣಿಕ ಕೆಲಸಗಳನ್ನು ನಡೆಸಿದ್ದು ಮುಂದಿನ ದಿನಗಳಲ್ಲಿ ಪಂಚಾಯತ್ ಉತ್ತಮವಾಗಿ ನಡೆಯಲಿ. ಗ್ರಾಮಸ್ಥರು ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಆಡಳಿತ ಮಂಡಳಿಯನ್ನು ನೇಮಕ ಮಾಡುವ ಹೊಣೆಗಾರಿಕೆ ಹೊಂದಿರುತ್ತೀರಿ. ರಾಜವರ್ಮ ಜೈನ್ ಅಧ್ಯಕ್ಷರು, ಗ್ರಾ.ಪಂ. ನಾರಾವಿ

Related posts

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

Suddi Udaya

ಉಜಿರೆಯಲ್ಲಿ ವಿಶ್ವಕರ್ಮ ಬ್ಯಾಂಕ್‌ನಿಂದ ಸ್ವಚ್ಛತಾ ಅಭಿಯಾನ

Suddi Udaya

ಪುಂಜಾಲಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ

Suddi Udaya

ಮುಂಡಾಜೆ ಪ.ಪೂ. ಕಾಲೇಜು ಪ್ರಾರಂಭೋತ್ಸವ

Suddi Udaya

ಬೆಳ್ತಂಗಡಿ:ವಿಧಾನ ಪರಿಷತ್ ಮಾಜಿ ಸದಸ್ಯ ಹರೀಶ್ ಕುಮಾರ್ ಅವರ 15ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಗೊಂಡ ಮುಗುಳಿ -ಬ್ರಹ್ಮಯಕ್ಷ ಬಸದಿ ರಸ್ತೆ ಉದ್ಘಾಟನೆ

Suddi Udaya

ಜ.20: ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ

Suddi Udaya
error: Content is protected !!