37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಎಂ.ಡಿ.ಎಂ.ಎ. ಮಾದಕ ವಸ್ತು ಮಾರಾಟ: ಆರೋಪಿ ಕೊಕ್ಕಡ ನಿವಾಸಿ ಯಹ್ಯಾ ಬಂಧನ

ಬೆಳ್ತಂಗಡಿ : ಉಪ್ಪಿನಂಗಡಿ ಗ್ರಾಮದ ಪಂಜಳ ಪ್ರದೇಶದಲ್ಲಿ ಹಗಲು ರೌಂಡ್ಸ್ ವೇಳೆ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಎಂ.ಡಿ.ಎಂ.ಎ. ಮಾದಕ ವಸ್ತು ಪತ್ತೆಯಾಗಿದೆ.

ಬಂಧಿತ ವ್ಯಕ್ತಿಯನ್ನು ಕೊಕ್ಕಡ ನಿವಾಸಿ ಯಹ್ಯಾ (48) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಆತನು ಮಾರಾಟ ಉದ್ದೇಶದಿಂದ ಎಂ.ಡಿ.ಎಂ.ಎ. ಹೊಂದಿರುವುದಾಗಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಜರಿನಲ್ಲಿ ಆರೋಪಿಯಿಂದ ಒಟ್ಟು 2.16 ಗ್ರಾಂ. ಎಂ.ಡಿ.ಎಂ.ಎ. (ಅಂದಾಜು ಮೌಲ್ಯ ರೂ.3,000/-), ಒಂದು ಐಫೋನ್ (ಅಂದಾಜು ಮೌಲ್ಯ ರೂ.45,000/-) ಹಾಗೂ ಒಂದು ಸ್ಯಾಮ್ಸ್ಂಗ್ ಕೀ-ಪ್ಯಾಡ್ ಮೊಬೈಲ್ (ಅಂದಾಜು ಮೌಲ್ಯ ರೂ.1,000/-) ವಶಪಡಿಸಿಕೊಳ್ಳಲಾಗಿದೆ. ಒಟ್ಟು ರೂ.49,000/- ಮೌಲ್ಯದ ಸೊತ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

Related posts

ಕೊಲೆ ಸಮರ್ಥನಿಯವೂ ಅಲ್ಲ, ಅನುಕರಣೀಯವೂ ಅಲ್ಲ: ರಕ್ಷಿತ್ ಶಿವರಾಂ

Suddi Udaya

ಯಕ್ಷಭಾರತಿ ಕನ್ಯಾಡಿ ಸಂಸ್ಥೆಯು ಪುರಸ್ಕರಿಸುವ ಯಕ್ಷಭಾರತಿ ಪ್ರಶಸ್ತಿಗೆ ಮೂಡಬಿದರೆಯ ಕೆ ಶ್ರೀಪತಿ ಭಟ್ ಆಯ್ಕೆ

Suddi Udaya

ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್‌ನಲ್ಲಿ ‘ಸಂಕ್ರಾಂತಿಗೆ ಸ್ವರ್ಣಾರಂಭ’: ಜ.9ರಿಂದ 20ರ ವರೆಗೆ ವಿಶೇಷ ಉತ್ಸವ

Suddi Udaya

ಕನ್ಯಾಡಿ: ಶ್ರೀ ರಾಮ‌ ನಾಮ ಸಪ್ತಾಹದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಭಜನಾ ಸೇವೆ

Suddi Udaya

ಅನೈತಿಕ ಚಟುವಟಿಕೆ ನಡೆಯುತ್ತಿರುವ ದೂರುಗಳ ಹಿನ್ನಲೆ: ಉಜಿರೆಯ ಲಾಡ್ಜ್‌ ಗಳ ಮೇಲೆ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ದಾಳಿ

Suddi Udaya

ರಾಜ್ಯ ಸರಕಾರದ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ

Suddi Udaya
error: Content is protected !!