ಬೆಳ್ತಂಗಡಿ: ಫೆ. 10 ರಂದು ರಾತ್ರಿ ವೇಳೆ, ಜಿತೇಶ್ ಎಂಬ ಯುವಕನು ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ. ಆ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಶಾಸಕರಾದ ಹರೀಶ್ ಪೂಂಜಾ ಅವರು ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ, ಗಾಯಗೊಂಡ ಜಿತೇಶ್‌ನ ಸ್ಥಿತಿಯನ್ನು ಪರಿಶೀಲಿಸಿ, ಯಾವುದೇ ವಿಳಂಬವಿಲ್ಲದೆ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸುವ ಮೂಲಕ ಮಾನವೀಯತೆ ಹಾಗೂ ತುರ್ತು ಸ್ಪಂದನೆಯನ್ನು ತೋರಿಸಿದ್ದಾರೆ.
ಕೆಲವರು ಈ ಘಟನೆಯನ್ನು “ಪಬ್ಲಿಸಿಟಿ ಗಿಮಿಕ್” ಎಂದು ತಪ್ಪಾಗಿ ಚಿತ್ರಿಸುವುದು ನಿಜಕ್ಕೂ ನೋವಿನ ಸಂಗತಿ. ಸಂಕಷ್ಟದ ಸಮಯದಲ್ಲಿ ತೋರಿದ ಮಾನವೀಯತೆಯನ್ನು ಕೆಟ್ಟ ರೀತಿಯಲ್ಲಿ ಬಿಂಬಿಸುವುದು ಸರಿಯಲ್ಲ. ಸಮಾಜ ಸೇವಕ ಕಿರಣ್ ಚಂದ್ರ ಪುಷ್ಪಗಿರಿ ಅವರು ಜಿತೇಶ್‌ನ ಮನೆಗೆ ಸ್ವತಃ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿ, ಜಿತೇಶ್‌ನ ಆರೋಗ್ಯ ವಿಚಾರಿಸಿ, ಅವನ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ತಾವೇ ಭರಿಸಿದ್ದಾರೆ. ಇದು ಮಾನವೀಯತೆ, ಕಾಳಜಿ ಮತ್ತು ಸಾಮಾಜಿಕ ಜವಾಬ್ದಾರಿಯ ಪ್ರತೀಕ. ನಮ್ಮ ಪ್ರದೇಶಕ್ಕೆ ಇಂತಹ ಜನನಾಯಕರು ದೊರೆತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.
ಇವರ ಸೇವಾಭಾವ ಇನ್ನೂ ಅನೇಕ ಜೀವಗಳಿಗೆ ಬೆಳಕಾಗಲಿ ಎಂದು ಹಾರೈಸೋಣ. ಜಿತೇಶ್ ನ ಸಂಕಷ್ಟದ ಸಮಯದಲ್ಲಿ ಸಹಾಯಸ್ತ ಕೊಟ್ಟವರು ಈ ಇಬ್ಬರು ನಾಯಕರು, ಸಾಧ್ಯವಾದರೆ ಜನರ ಸಂಕಷ್ಟಕ್ಕೆ ನೇರವಾಗಿ ಸ್ಪಂದಿಸೋಣ ? ವಿನಾಕಾರಣ ಆರೋಪ ಮಾಡಿ ವಿಷದ ಬೀಜ ಬಿತ್ತುವ ಪ್ರಯತ್ನಗಳನ್ನು ದೂರವಿರಿಸೋಣ.
-ಕರುಣಾಕರ ಉಜಿರೆ ಟೀಮ್ ಪುಷ್ಪಗಿರಿ











