23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಆರಂಭ: ತೋರಣ ಮುಹೂರ್ತ, ಧ್ವಜಾರೋಹಣ

ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.12ರಿಂದ ಪ್ರಾರಂಭಗೊಂಡು ಫೆ.21 ರವರೆಗೆ ಕ್ಷೇತ್ರದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಇಂದು(ಫೆ.12) ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರ ಸಮುಚ್ಚಯದ ಭ| ಶ್ರೀ ಶಾಂತಿನಾಥ ಸ್ವಾಮಿ, ಭ| ಶ್ರೀ ಅನಂತನಾಥ ಸ್ವಾಮಿ, ಭ| ಶ್ರೀ ಚಂದ್ರನಾಥ ಸ್ವಾಮಿ, ಭ| ಶ್ರೀ ಪಾರ್ಶ್ವನಾಥ ಸ್ವಾಮಿ ದೇವರಿಗೆ “ಕ್ಷೀರಾಭೀಷೇಕ” ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ಹಾಗೂ ಬ್ರಹ್ಮದೇವರಿಗೆ “ಮಹಾಪೂಜೆ” ನಡೆಯಿತು. ಬೆಳಿಗ್ಗೆ ಪ್ರಶ್ನಾಚಿಂತನ, ಗೊನೆ ಮುಹೂರ್ತ, ತೋರಣ ಮುಹೂರ್ತ, ನವಕ ಕಲಶ, ಧ್ವಜರೋಹಣ ಬಳಿಕ ಪ್ರಸನ್ನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ರಂಗಪೂಜೆ ನಡೆಯಲಿದೆ.

ಈ ಸಂದರ್ಭದಲ್ಲಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಜಯವರ್ಮರಾಜ ಬಳ್ಳಾಲ್ ಕೆಲ್ಲಗುತ್ತು ಸಬ್ರಬೈಲು , ರಾಜವರ್ಮ ಬಲ್ಲಾಳ್, ಬಲ್ಲಾಳ್ ಕುಟುಂಬಸ್ಥರು, ಅರ್ಚಕರು, ಹಾಗೂ ಊರವರು ಉಪಸ್ಥಿತರಿದ್ದರು.

ಫೆ.13ರಂದು ಮಧ್ಯಾಹ್ನ ಪ್ರಸನ್ನ ಪೂಜೆ, ಅನ್ನಸಂತರ್ಪಣೆ. ಫೆ.14ರಂದು ಬೆಳಿಗ್ಗೆ ಸಾಮೂಹಿಕ ಕಲ್ಪೋಕ್ತ ಶನಿಪೂಜೆ ಬಳಿಕ ಪ್ರಸನ್ನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಶ್ರೀ ಶಿವಪ್ರದೋಷ ಕಲ್ಪೋಕ್ತ ಪೂಜೆ ಮತ್ತು ಪ್ರಸನ್ನ ಪೂಜೆ ಬಳಿಕ ರಾತ್ರಿ ಬಂಡಿಕ್ಕು ಸನ್ನಿಧಾನದಲ್ಲಿ ದೈವಗಳಿಗೆ “ನೇಮೋತ್ಸವ”. ಫೆ.15ರಂದು(ಮಹಾ ಶಿವರಾತ್ರಿ) ಏಕಾದಶಾ ರುದ್ರಾಭಿಷೇಕ, ಸಂಜೆ ಉಗ್ರಾಣ ಪೂಜೆ, ಬಯ್ಯದ ಬಲಿ ಪೂಜೆ, ಯಮಾ ಪೂಜೆ, ಮಹಾ ರಂಗಪೂಜೆ, ಆಹೋ ರಾತ್ರಿ ಭಜನಾ ಕಾರ್ಯಕ್ರಮ. ಫೆ.16 ರಂದು ಗಣಹೋಮ, ಶತರುದ್ರಾಭಿಷೇಕ, ಮಧ್ಯಾಹ್ನ ಪ್ರಸನ್ನ ಪೂಜೆ, ಸಂಜೆ ನಾಗ ತನುತರ್ಪಣ ಬಳಿಕ ಮಹಾಪೂಜೆ ಹಾಗೂ ರಾತ್ರಿ ಉಪಾಹಾರ, ದೇವರ ಉತ್ಸವ, ವಸಂತಕಟ್ಟೆ ಪೂಜೆ ಬಳಿಕ ಪ್ರಸನ್ನ ಪೂಜೆ. ಫೆ.17 ರಂದು ಬೆಳಿಗ್ಗೆ ಸಾಮೂಹಿಕ ಪೂರ್ಣ ನವಗ್ರಹ ಶಾಂತಿ ಹೋಮ, ಮಧ್ಯಾಹ್ನ ಪ್ರಸನ್ನ ಪೂಜೆ, ಸಂಜೆ ದೇವರ ಉತ್ಸವ, ಕೆರೆಕಟ್ಟೆ ಪೂಜೆ ಬಳಿಕ ಪ್ರಸನ್ನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ. ಫೆ.18 ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವದ ವರ್ಧಂತಿ ಬಗ್ಗೆ ಬೆಳಿಗ್ಗೆ ಗಣಹೋಮ ಬಳಿಕ ಪ್ರಸನ್ನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ದೇವರ ಉತ್ಸವ, ಪಲ್ಲಕ್ಕಿ ಉತ್ಸವ, ಚಂದ್ರಮAಡಲೋತ್ಸವ, ಅಶ್ವತಕಟ್ಟೆ ಪೂಜೆ ಬಳಿಕ ಪ್ರಸನ್ನ ಪೂಜೆ. ಫೆ.19 ರಂದು ಬೆಳಿಗ್ಗೆ ದೇವರ ಉತ್ಸವ, ದರ್ಶನ ಬಲಿ, ಪ್ರಸನ್ನ ಪೂಜೆ, ಗಣಹೋಮ ಬಳಿಕ ಅನ್ನಸಂತರ್ಪಣೆ, ಸಂಜೆ ಭಗನಾನ್ ಶಿರಡಿ ಶಯಿ ಸತ್ಯಸಾಯಿ ಸೇವಾಕ್ಷೇತ್ರ, ಹಳೆಕೋಟೆ ಇವರಿಂದ “ಭಜನೆ”, ರಾತ್ರಿ ಮಕ್ಕಿಮನೆ ಕಲಾವೃಂದ ಮಂಗಳೂರು ಬಳಗದ ಸಹಯೋಗದಲ್ಲಿ “ಸಾಂಸ್ಕೃತಿಕ ಕಲರವ” ಬಳಿಕ ದೇವರ ಉತ್ಸವ, ಶ್ರೀ ಮನ್ಮಹಾರಥೋತ್ಸವ, ಭೂತಬಲಿ, ಕವಾಟ ಬಂಧನ. ಫೆ.20ರಂದು ಬೆಳಗ್ಗೆ ಕವಾಟೋದ್ಘಾಟನೆ ಬಳಿಕ ಪ್ರಸನ್ನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ: ದೇವರ ಬೀದಿ ಸವಾರಿ, ಕಟ್ಟೆ ಪೂಜೆಗಳು, ಅವಕೃತ ಸ್ನಾನ, ಧ್ವಜಾವರೋಹಣ, ದೈವಗಳಿಗೆ ಅಂಗಣ ನೇಮ, ದೇವಸ್ಥಾನದಿಂದ ಧರ್ಮದೈವಗಳ ಭಂಡಾರವು ಕೆಲ್ಲಗುತ್ತುಗೆ ನಿರ್ಗಮನ. ಫೆ.21ರಂದು ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಮಹಾಪೂಜೆ, ರಾತ್ರಿ ಕಲ್ಕುಡ ಕಲ್ಲುರ್ಟಿ ದೈವಗಳಿಗೆ ನೇಮ ನಡೆಯಲಿದೆ.

Related posts

ಕುವೆಟ್ಟು: ಕರ್ತವ್ಯ ಲೋಪ ಎಸಗಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ: ಸಾಮಾನ್ಯ ಸಭೆ ಬಹಿಷ್ಕರಿಸಿದ ಸದಸ್ಯರು

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಭಾರತೀಯ ಜನತಾ ಪಾರ್ಟಿ ಕಳಿಯ – ನ್ಯಾಯತರ್ಪು ವತಿಯಿಂದ ವಿಶೇಷ ಪೂಜೆ

Suddi Udaya

ಬಳಂಜ ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುರೇಶ್ ಪೂಜಾರಿ ಹೇವ

Suddi Udaya

ನೆರಿಯ: ಗಂಡಿಬಾಗಿಲು ಸಂತ ತೋಮಸರ ಸಭಾಭವನದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ

Suddi Udaya

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಹಾಸಭೆ ಮತ್ತು ಮಾಹಿತಿ ಕಾರ್ಯಗಾರ

Suddi Udaya
error: Content is protected !!