32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಫೆ 16: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರೋತ್ಸವ,ಫೆ 19 ಭೈರವಕಲ್ಲಿನ ಪುರುಷರಾಯ ಜಾತ್ರೆ

ಶಿರ್ಲಾಲು: ಇತಿಹಾಸ ಪ್ರಸಿದ್ದ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಫೆ 16ರಂದು ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೊಸಲಾಯಿ ತಿಳಿಸಿದರು.

ಬೆಳಿಗ್ಗೆ ತೋರಣ ಮುಹೂರ್ತ,ಏಕದಶಿ ರುದ್ರಾಭಿಷೇಕ, ಕಾಯಿ ಪೂಜೆ, ಮಹಾಪೂಜೆ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ರಂಗಪೂಜೆ ನಡೆಯಲಿದೆ.ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ ನಡೆಯಲಿದೆ.ರಾತ್ರಿ ದೈವಗಳ ಭಂಢಾರ ಬಂದು ಉಳ್ಳಾಲ್ತಿ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದರು.

ಫೆ 19 ಭೈರವಕಲ್ಲಿನ ಪುರುಷರಾಯ ಜಾತ್ರೆ:
ಮಧ್ಯಾಹ್ನ ಗಂಟೆ 2ರಿಂದ ಬೊಂಟ್ರಾಡೆಯಿಂದ ಭಂಡಾರ ಬಂದು ಹಗಲು ನೇಮೋತ್ಸವ ನಡೆಯಲಿದೆ.ರಾತ್ರಿ 7 ರಿಂದ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋಧಾವಳಿಗಳು ನಡೆಯಲಿದೆ. ನಂತರ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.ಬಳಿಕ ಸಾಮಾಜಿಕ ನಾಟಕ ಕಾಶಿತೀರ್ಥ ಪ್ರದರ್ಶನಗೊಳ್ಳಲಿದೆ.ರಾತ್ರಿ 1ಗಂಟೆಯಿಂದ ಪುರುಷರಾಯ ಮತ್ತು ಪರಿವಾರದ ದೈವಗಳ ನೇಮೋತ್ಸವ ನಡೆಯಲಿದೆ.

ಧಾರ್ಮಿಕ ಬಂಧುತ್ವ ಸಭೆ: ಕಾರ್ಯಕ್ರಮದ ವಿಶೇಷವಾಗಿ ದಾರ್ಮಿಕ ಬಂಧುತ್ವ ಸಭೆಯು ಫೆ 19ರಂದು ನಡೆಯಲಿದೆ. ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್,ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ, ಪ್ರಮುಖರಾದ ಶೇಖರ್ ಕುಕ್ಕೇಡಿ ,ಡಾ.ಶಶಿಧರ ಡೋಂಗ್ರೆ, ಕೃಷ್ಣಪ್ಪ ಗೌಡ ದೇವಸ ಸವಣಾಲು, ಸಂಜೀವ ಪೂಜಾರಿ ಕೊಡಂಗೆ, ಜಯಶೀಲ ಕುಶಾಲಪ್ಪ ಗೌಡ,ಕೆ.ಸುನೀಲ್ ಕುಮಾರ್ ಜೈನ್, ಚಿದಾನಂದ ಪೂಜಾರಿ ಎಲ್ದಕ್ಕ ಭಾಗವಹಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೊಸಲಾಯಿ ವಹಿಸಲಿದ್ದಾರೆ.

ಫೆ 20, ಕೂಟೆಕ್ಕಿನಡೆ ದೊಂಪದ ಬಲಿ,ಫೆ 24 ರಾತ್ರಿ ರಂಗಪೂಜೆ ನಡೆಯಲಿದೆ. ಸಾರ್ವಜನಿಕ ಅನ್ನಸಂತರ್ಪಣೆ,ಅಂಗಣ ಪಂಜುರ್ಲಿ ನೇಮೋತ್ಸವ ನಡೆಯಲಿದೆ.

Related posts

ಮರೋಡಿ-ಪೆರಾಡಿ ಗ್ರಾಮಗಳಲ್ಲಿ ಮಹಾಮಳೆಗೆ ಅನಾಹುತ, ಅಗತ್ಯ ಕ್ರಮ ಕೈಗೊಂಡ ಪಂಚಾಯತ್ ಆಡಳಿತ

Suddi Udaya

ಉಪ್ಪಿನಂಗಡಿ: ಯುವತಿ ನಾಪತ್ತೆ: ಠಾಣೆಗೆ ದೂರು

Suddi Udaya

ನಾಲ್ಕೂರು: ಸೂಳಬೆಟ್ಟು ಡೆಪ್ಪುಣಿ ಬಸ್ ತಂಗುದಾನದ ಬಳಿ ವಾಮಾಚಾರ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ

Suddi Udaya

ಪ್ರೇಕ್ಷಕರ ಮನಸ್ಸಲ್ಲಿ ಸಹಿ ಹಾಕಲು ರೆಡಿಯಾದ ದಸ್ಕತ್

Suddi Udaya

ಮಂಗಳೂರುನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗಾಗಿ ವಕೀಲರ ಸಂಘದಿಂದ ಸಮಾಲೋಚನಾ ಸಭೆ: ಮಂಗಳೂರಿನಲ್ಲಿ ನಮಗೆ ಬೇಕು ಹೈಕೋರ್ಟ್ ಪೀಠ: ಧನಂಜಯ್ ರಾವ್

Suddi Udaya
error: Content is protected !!