September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯ ಎಸ್‌ಡಿಎಂ ಕಲಾ ಕೇಂದ್ರಕ್ಕೆ ಅಮೇರಿಕಾದ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿ ಭೇಟಿ- ಸಂಸ್ಥೆಗೆ ಒಂದು ಲಕ್ಷ ಧನ ಸಹಾಯ ಹಸ್ತಾಂತರ- ವಿದ್ಯಾರ್ಥಿಗಳ ಪ್ರತಿಭೆ ಮತ್ತು ಪರಿಶ್ರಮಕ್ಕೆ ಮೆಚ್ಚುಗೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಲಾ ಕೇಂದ್ರಕ್ಕೆ ಅಮೆರಿಕದ ಖ್ಯಾತ ಹೃದಯ ಹಾಗೂ ಹೊರಾಸಿಕ್ ಶಸ್ತ್ರಚಿಕಿತ್ಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಯು. ರಾಮಯ್ಯ ಗೌಡ ಹಾಗೂ ಅವರ ಪತ್ನಿ, ಅಮೇರಿಕಾದ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕಿ ಕಾನಿ ಗೌಡ ಭೇಟಿ ನೀಡಿದರು.

1939ರಲ್ಲಿ ಜನಿಸಿದ ಡಾ. ರಾಮಯ್ಯ ಗೌಡರು ಬೆಳ್ತಂಗಡಿಯ ವಳಂಬ್ರ ಕುಟುಂಬಕ್ಕೆ ಸೇರಿದವರು. ಕಡಿರುದ್ಯಾವರ ಸರ್ಕಾರಿ ಶಾಲೆ ಹಾಗೂ ಉಜಿರೆಯ ಎಸ್‌ಡಿಎಂ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿ, ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ಮತ್ತು ಮೈಸೂರಿನಲ್ಲಿ ಎಂ.ಬಿ.ಬಿ.ಎಸ್.ಪದವಿ ಪಡೆದಿದ್ದಾರೆ. 1965ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ ಹೃದಯ ಮತ್ತು ಥೊರಾಸಿಕ್ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಪಡೆದು ನ್ಯೂಯಾರ್ಕ್ ಹಾಗೂ ಗ್ರಹಾಂ ಮೆಡಿಕಲ್ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರವೂ ಯಾವುದೇ ಸಂಬಳವಿಲ್ಲದೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಸ್ವದೇಶಕ್ಕೆ ಆಗಮಿಸದ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ವಿಶೇಷ.

ಭೇಟಿಯ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಮತ್ತು ಡಾ. ಹೇಮಾವತಿ ವೀ. ಹೆಗ್ಗಡೆಯವರ ಕನಸಿನ ಕೂಸು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕಲಾಕೇಂದ್ರ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಕಲೆಯ ಅಭಿರುಚಿಯನ್ನು ಇಮ್ಮಡಿಗೊಳಿಸುವ ಸಲುವಾಗಿ ಇದನ್ನು ಸ್ಥಾಪಿಸಲಾಗಿದೆ. ಇಲ್ಲಿ ಯಕ್ಷಗಾನ ಕೇಂದ್ರ, ರಂಗ ತರಬೇತಿ ಕೇಂದ್ರ ಮತ್ತು ನೃತ್ಯ ಹಾಗೂ ಸಂಗೀತ ಸೇರಿದಂತೆ ವಿವಿಧ ವಿಭಾಗಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಎಸ್.ಡಿ.ಎಂ ಕಲಾ ಕೇಂದ್ರದ ಸಂಯೋಜಕ ತೃಪ್ತ ಕುಮಾರ್ ಜೈನ್ ಅತಿಥಿಗಳಿಗೆ ಕಲಾಕೇಂದ್ರವನ್ನು ಪರಿಚಯಿಸಿದರು.

ಬಳಿಕ ಉಜಿರೆಯ ಎಸ್.ಡಿ.ಎಂ ಕಾಲೇಜು ಮತ್ತು ಕಲಾಕೇಂದ್ರದ ವತಿಯಿಂದ ಅಮೇರಿಕಾದ ಹೃದ್ರೋಗ ತಜ್ಞ ಡಾ. ರಾಮಯ್ಯ ಗೌಡ ದಂಪತಿಗಳಿಗೆ ಕಾಲೇಜಿನ ವಸತಿ ನಿಲಯಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಯುವರಾಜ್ ಪೂವಣಿ ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಲಾ ಕೇಂದ್ರ ವಿಭಾಗದ ಸಂಯೋಜಕ ತೃಪ್ತ ಕುಮಾರ್ ಜೈನ್, ತರಬೇತುದಾರರಾದ ಯಶವಂತ್ ಬೆಳ್ತಂಗಡಿ, ಚೈತ್ರ, ಅರುಣ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಸ್ಥೆಗೆ ಒಂದು ಲಕ್ಷ ಧನ ಸಹಾಯ ಹಸ್ತಾಂತರ :ಭೇಟಿಗೂ ಮುನ್ನ ಎಸ್.ಡಿ.ಎಂ ಕಾಲೇಜಿನ ಕಲಾ ಕೇಂದ್ರ ವಿದ್ಯಾರ್ಥಿಗಳ ಬೆಳ್ತಂಗಡಿಯ ವಳಂಬ್ರದಲ್ಲಿ ನಡೆದ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಅತೀವ ಮೆಚ್ಚುಗೆಯನ್ನು ‌ವ್ಯಕ್ತಪಡಿಸಿದರು. ಬಳಿಕ ಸ್ವ ಇಚ್ಛೆಯಿಂದ ಕಾಲೇಜಿನ ದಂಪತಿಗಳು ಕಲಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಡನೆ ಸಂಭಾಷಣೆ ನಡೆಸಿ, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಪಠ್ಯೇತರವಾಗಿನ ಈ ಪರಿಶ್ರಮಕ್ಕೆ ಅಭಿನಂದಿಸಿದರು. ಈ ವೇಳೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಲಕ್ಷ ಮೊತ್ತದ ಚೆಕ್ ಅನ್ನು ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.

Related posts

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಡಂತ್ಯಾರಿನಲ್ಲಿ ಉಚಿತ ಯೋಗ ಶಿಕ್ಷಣ ಶಿಬಿರ

Suddi Udaya

ಗುರುವಾಯನಕೆರೆ: ವರಕಬೆ ಬಳಿ ಕಾರುಗಳು ಹಾಗೂ ಬೈಕ್ ನಡುವೆ ಸರಣಿ ಅಪಘಾತ

Suddi Udaya

ಬೆಳ್ತಂಗಡಿ ರೋಟರೀ ಕ್ಲಬ್ ನಿಂದ ರೂ. 40 ಲಕ್ಷ ಮೌಲ್ಯದ ಕೊಡುಗೆ

Suddi Udaya

ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಕ್ಕಿಮನೆ ಕಲಾವೃಂದ ಬಳಗದಿಂದ ಸಾಂಸ್ಕೃತಿಕ ವೈಭವ

Suddi Udaya

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಮಲೆಕುಡಿಯರಿಗೆ ಅವಕಾಶ ನೀಡದೆ ಇದ್ದಲ್ಲಿ ಕ್ಷೇತ್ರದಲ್ಲಿ ಚಾಕರಿ ಕೆಲಸ ಮತ್ತು ರಥ ಕಟ್ಟುವ ಕೆಲಸವನ್ನು ನಿಲ್ಲಿಸ ಬೇಕಾದೀತು: ಜಿಲ್ಲಾ ಮಲೆಕುಡಿಯ ಸಂಘ

Suddi Udaya

ಬೆಳಾಲು ಪ್ಯಾಕ್ಸ್: ಆರ್ಥಿಕ ಅವ್ಯವಹಾರ ಪ್ರಕರಣಎರಡನೇ ಆರೋಪಿ ಪ್ರಶಾಂತ್ ಬಂಧನ

Suddi Udaya
error: Content is protected !!