25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಫೆ.14: ಕರಂಬಾರು ಬೊಟ್ಯೆಲ್ಮಾರಿನಲ್ಲಿ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವ

ಕರಂಬಾರು: ಬೊಟ್ಯಾಲ್ಮಾರುನಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ನೇಮೋತ್ಸವವು ಫೆ.14 ರಂದು ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಪ್ರಸನ್ನ ಹೆಗ್ಡೆ ಕರಂಬಾರುಗುತ್ತು ತಿಳಿಸಿರುತ್ತಾರೆ.

ಸಂಜೆ ಕರಂಬಾರುಗುತ್ತು ಮನೆಯಿಂದ ಭವ್ಯ ಮೆರವಣಿಗೆಯಲ್ಲಿ ದೈವಗಳ ಭಂಡಾರ ಬರುವುದು. ರಾತ್ರಿ ಕರಂಬಾರು ಗ್ರಾಮ ಮತ್ತು ತಾರಿದೊಟ್ಟು ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಸಾರ್ವಜನಿಕ ಅನ್ನಸಂತರ್ಪಣೆ, ಮಹಮ್ಮಾಯಿ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ‘ಓಂಕಾರ’ ತುಳು ನಾಟಕ ಜರುಗಲಿರುವುದು.

ಜಾತ್ರೋತ್ಸವದ ದಿನದಂದು ಮಹಿಳೆಯರಿಗೆ ಹೂ ಕಟ್ಟುವ ಸ್ಪರ್ಧೆ ಇದ್ದು ಹೂಮಾಲೆಯನ್ನು ಮನೆಯಲ್ಲೇ ಕಟ್ಟಿ ರಾತ್ರಿ ೮ರ ಒಳಗೆ ದೈವಸ್ಥಾನಕ್ಕೆ ತಂದು ಒಪ್ಪಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಪಿಲಿಚಾಮುಂಡಿಕಲ್ಲು ಮತ್ತು ಗುರುವಾಯನಕೆರೆ ಶಾಲೆ ಬಳಿ ಟ್ರಾಫಿಕ್ ಪೊಲೀಸ್ ನಿಯೋಜಿಸಿ: ಕುವೆಟ್ಟು ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಒತ್ತಾಯ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಮಹಾ ರಥೋತ್ಸವ, ತೆಪ್ಪೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ

Suddi Udaya

ಉಜಿರೆ ಅನುಗ್ರಹ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮ

Suddi Udaya

ಶಾಸಕ ಪೂಂಜರ ಕಚೇರಿ ಶ್ರಮಿಕಕ್ಕೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿ

Suddi Udaya

ಬೂಡುಮುಗೇರು ಶ್ರೀದುರ್ಗಾಪರಮೇಶ್ವರಿದೇವರಬ್ರಹ್ಮಕಲಶಾಭಿಷೇಕ

Suddi Udaya
error: Content is protected !!