23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಬೆಳ್ತಂಗಡಿ : KAF ಕ್ರಿಯೇಟಿವ್ ಶಾಪ್ ನಲ್ಲಿ ಹಿಲಿಯಂ ಗ್ಯಾಸ್ ಬ್ಲಾಸ್ಟ್ : ಬೆಂಕಿ ಕೆನ್ನಾ ‌ಲಿಗೆ ಸುಟ್ಟು ಭಸ್ಮವಾದ ವಸ್ತುಗಳು

ಬೆಳ್ತಂಗಡಿ : ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬ್ಲಾಸ್ಟ್ ಆಗಿ ಉಂಟಾದ ಬೆಂಕಿಯಿಂದ ಅಂಗಡಿ ಸುಟ್ಟು ಭಸ್ಮವಾದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ನಗರದ ಸಂತೆಕಟ್ಟೆಯಲ್ಲಿರುವ ಹೇರಾಜೆ ಕಾಂಪ್ಲೆಕ್ಸ್ ನಲ್ಲಿ ಮೊದಲ ಮಹಡಿಯ ಮೊಹಮ್ಮದ್ ಸಮೀಲ್ ಎಂಬವರ ಮಾಲೀಕತ್ವದ KAF ಕ್ರಿಯೇಟಿವ್ ಅರ್ಟ್ & ಕ್ರಾಫ್ಟ್ ಸ್ಟೋರ್ ನಲ್ಲಿ ಇಬ್ಬರು ಕೆಲಸದವರು ಫೆ.14 ರಂದು ಬೆಳಗ್ಗೆ 7:30 ಕ್ಕೆ ಕಾರ್ಯಕ್ರಮವೊಂದಕ್ಕೆ ಬಲೂನ್ ಗಳಿಗೆ ಗ್ಯಾಸ್ ತುಂಬಿಸುವಾಗ ಹೀಲಿಯಂ ಗ್ಯಾಸ್ ಸೋರಿಕೆಯಾಗಿ ಬ್ಲಾಸ್ಟ್ ಆಗಿ ಬೆಂಕಿ ಉಂಟಾಗಿ ಸಂಪೂರ್ಣ ಸುಟ್ಟು ಹೋಗಿದೆ.

ಘಟನೆ ವೇಳೆ ಅಂಗಡಿಯೊಳಗೆ ಇಬ್ಬರು ಕೆಲಸದವರು ಇದ್ದು ತಕ್ಷಣ ಹೊರಗಡೆ ಓಡಿ ಬಂದಿದ್ದಾರೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿ ಕೆನ್ನಲಿಗೆ ಅಕ್ಕಪಕ್ಕದ ಶಾಪ್ ಗಳಿಗೂ ಹಾನಿಯಾಗಿದೆ. ಗ್ಯಾಸ್ ಸೋರಿಕೆಯಿಂದ ಯಾವುದೇ ಬಹು ದೊಡ್ಡ ಅನಾಹುತ ಉಂಟಾಗಿಲ್ಲ.

ಘಟನೆಯನ್ನು ನೋಡಲು ನೂರಾರು ಮಂದಿ ಜಾಮಾಯಿಸಿದ್ದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು ತಕ್ಷಣ ಬೆಳ್ತಂಗಡಿ ಪೊಲೀಸರು ಮತ್ತು ಸಂಚಾರಿ ಪೊಲೀಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದೆ ವೇಳೆ ಬೆಂಕಿ ಹೊತ್ತುವ ಘಟನೆಯನ್ನು ನೋಡುತ್ತಿದ್ದ ಶಾಪ್ ಕೆಲಸದಾಕೆ ಮೂರ್ಛೆ ಹೋದ ಘಟನೆ ನಡೆಯಿತು ಬಳಿಕ ಸ್ಥಳೀಯರೆಲ್ಲ ಸೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Related posts

ಇಂದಬೆಟ್ಟು ಸ. ಹಿ. ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಪಣಕಜೆ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದ ಸಮಿತಿ ರಚನೆ

Suddi Udaya

ಕಣಿಯೂರು ಗ್ರಾಮ ಪಂಚಾಯತ್‌ ಗ್ರಾಮ ಸಭೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಭಜನಾ ಸಪ್ತಾಹದ ಧಾರ್ಮಿಕ ಸಭೆ

Suddi Udaya

ಮಂಗಳೂರು ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಕೊಕ್ರಾಡಿ ಹರಿಶ್ವoದ್ರ ಆಚಾರ್ಯ ರವರಿಗೆ ಸನ್ಮಾನ

Suddi Udaya

ಉಜಿರೆಯಲ್ಲಿ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಭೆ : ಕೆ.ಪಿ.ಸಿ.ಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ಭಾಗಿ

Suddi Udaya
error: Content is protected !!