ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ಸ್ಕೌಟ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಮಹಾಶಿವರಾತ್ರಿಯ ಪ್ರಯುಕ್ತ ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತವೃಂದಕ್ಕೆ ತಾವೇ ತಯಾರಿಸಿದ ತಂಪು ಪಾನೀಯವನ್ನು ಶಾಲಾ ಆವರಣದ ಮುಂಭಾಗದಲ್ಲಿ ವಿತರಿಸಿ ಆಗಮಿಸಿದ ಭಕ್ತವೃಂದಕ್ಕೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಸಲ್ಲಿಸಿದರು.






