ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ,ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಎಸ್ ಡಿ ಎಂ ಕಲಾಭವನ ಸಂತೆಕಟ್ಟೆ ಬೆಳ್ತಂಗಡಿ ಇಲ್ಲಿ 2025-26 ನೇ ಸಾಲಿನ ಜಿಲ್ಲಾ ಮಟ್ಟದ ತೃತೀಯ ಚರಣ ಕಬ್ ಮತ್ತು ಸುವರ್ಣ ಗರಿ ಬುಲ್ ಬುಲ್ ಪರೀಕ್ಷಾ ಶಿಬಿರದ ಮೂರನೇ ಹಂತದ ಪರೀಕ್ಷಾ ಶಿಬಿರವು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀಮತಿ ತಾರಕೇಸರಿ ಉದ್ಘಾಟಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀ ಪ್ರತೀಮ್ ಕುಮಾರ್,ಬೆಳ್ತಂಗಡಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಪೂಜಾರಿ HWB(F),ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀ ಭರತ್ ರಾಜ್ ಕೆ,ಕಬ್ ವಿಭಾಗದ ನಾಯಕಿ ಶ್ರೀಮತಿ ಹೇಮಾವತಿ ನಾಗರಾಜ್ ಜೈನ್, ಬುಲ್ ಬುಲ್ ವಿಭಾಗದ ನಾಯಕಿ ಶ್ರೀಮತಿ ಸೇವಂತಿ ಬಿ Pre ALT (F)ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪರೀಕ್ಷಾ ಶಿಬಿರ ಸಹಾಯಕರಾಗಿ ಕಬ್ ವಿಭಾಗದಲ್ಲಿ ವೀಣಾ, ಖುರ್ಷಿದ್, ಮಮತಾ ಎಲ್, ರವೀನಾ ಮಿಲ್ಮ್ ಪಿರೇರಾ, ಯೋಗಿನಿ, ಕಾದಂಬರಿ ಸಂದೀಪ್, ಬುಲ್ ಬುಲ್ ವಿಭಾಗದ ಸಹಾಯಕರಾಗಿ ಚಿತ್ರ, ನಿಶ್ಮಿತಾ, ಚೇತನಾ, ಸೌಮ್ಯ ಎಂ, ಪದ್ಮಶ್ರೀ ಆರ್ ಜೈನ್, ವಸಂತಿ, ಸಂಧ್ಯಾ ಸಹಕರಿಸಿದರು.
ಶಿಬಿರದಲ್ಲಿ 141 ಕಬ್ಸ್,143ಬುಲ್ ಬುಲ್ಸ್ ಒಟ್ಟು 284 ಶಿಬಿರಾರ್ಥಿಗಳು ಭಾಗವಹಿಸಿದರು. ಪರೀಕ್ಷಾ ಶಿಬಿರದ ನಿರೂಪಣೆ , ದನ್ಯವಾದ ವನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭರತ್ ರಾಜ್ ಕೆ ನಿರ್ವಹಿಸಿದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಪ್ರಮೀಳಾ ಪೂಜಾರಿ ಕಾರ್ಯಕ್ರಮವನ್ನು ಸಂಘಟಿಸಿದರು.











