30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕುಂಟಾಲಪಲ್ಕೆ ಶ್ರೀ ಸರಸ್ವತಿ ಭಜನಾ ಮಂಡಳಿಯ ಬೆಳ್ಳಿ ಹಬ್ಬ ಸಂಭ್ರಮ-ಭಜನಾ ಕಮ್ಮಟೋತ್ಸವ


ಬಂದಾರು: ಶ್ರೀ ಸರಸ್ವತಿ ಭಜನಾ ಮಂಡಳಿ ಕುಂಟಾಲಪಲ್ಕೆಯ ಬೆಳ್ಳಿಹಬ್ಬ ಸಂಭ್ರಮ ಮತ್ತು ಭಜನಾ ಕಮ್ಮಟೋತ್ಸವವು ಫೆ. 14 ರಂದು ನಡೆಯಿತು.

ಬೆಳಗ್ಗೆ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕರಾದ ದಿನೇಶ್ ಡಿ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಹಿರಿಯರ ಶ್ರಮ, ಶ್ರದ್ಧೆ, ಭಕ್ತಿಯಿಂದ ಪ್ರಾರಂಭಿಸಿದ ಈ ಮಂಡಳಿಯನ್ನು ಈಗಿನ ಕಿರಿಯರು ಅಭಿವೃದ್ಧಿ ಪಡಿಸಿಕೊಂಡು ರಜತ ಸಂಭ್ರಮ ವನ್ನು ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕೆಲಸ. ಎಳೆಯ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕಾರ್ಯದ ಜೊತೆಗೆ ಊರಿನ ಅಭಿವೃದ್ಧಿಗೂ ಪ್ರೇರಣೆಯಾಗಿ ನಿಲ್ಲಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಿವೃತ್ತ ಮುಖ್ಯೋಪಾಧ್ಯಾಯರಾದ ಅನಂತರಾಮ ಶಬರಾಯ ಮಾತನಾಡಿ,’ ಭಜನೆಗೊಂದು ಶಕ್ತಿಯಿದೆ,ಜನ ಸಾಮಾನ್ಯರಿಗೆ ಸರಳವಾಗಿ ದೇವರನ್ನು ಒಲಿಸಿಕೊಳ್ಳಲು ಭಜನೆ ಉತ್ತಮ ದಾರಿ’ ಎಂದರು.ಧಾರ್ಮಿಕ ಮುಖಂಡರಾದ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡಿ,’ಧಾರ್ಮಿಕತೆ ಗ್ರಂಥ ಓದುವುದರಿಂದ, ಯಾರದೋ ಉಪದೇಶದಿಂದ ಬರುವುದಲ್ಲ, ನಮ್ಮೊಳಗೆ ಅಳವಡಿಸಿಕೊಂಡಾಗ ಮಾತ್ರ ನಮ್ಮದಾಗುತ್ತದೆ.ಪ್ರಕೃತಿಯನ್ನು ಆರಾಧಿಸುವ ಸಂಸ್ಕೃತಿ ನಮ್ಮದು.ಹಿರಿಯರಿಂದ ಬಂದಂತಹ ಆಚಾರ ವಿಚಾರಗಳು, ಪದ್ದತಿಗಳು ಇಂದಿನ ಯುವ ಪೀಳಿಗೆ ಗೌರವಿಸಿ ಮುಂದುವರಿಸಿಕೊಂಡು ಹೋಗಬೇಕು. ಭಜನಾ ಮಂಡಳಿಯ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.

ನಿವೃತ್ತ ಯೋಧರಾದ ರಮೇಶ್ ಕೊಂಕನೊಟ್ಟು, ಬಂದಾರು ಗ್ರಾ.ಪಂ.ಅಧ್ಯಕ್ಷರಾದ ದಿನೇಶ್ ಖಂಡಿಗ,ಕುಂಟಾಲಪಲ್ಕೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಾಯತ್ರಿ ಕೆ, ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಬಾಲಕೃಷ್ಣ ಗೌಡ ನೆಲ್ಲಿಗೇರು, ಮಹಮ್ಮಾಯಿ ಗುಡಿಯ ಅಧ್ಯಕ್ಷರಾದ ಧರ್ಣಪ್ಪಗೌಡ ಕೋಡ್ಯೇಲು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಕಲ್ಲಿಮಾರು ಉಪಸ್ಥಿತರಿದ್ದರು. ಭಜನಾ ಮಂಡಳಿಯ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕಜೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಪುಲ್ವಾಮ ದಾಳಿಯ ಹುತಾತ್ಮರಿಗೆ ‘ಯೋಧ ನಮನ’ ಸಲ್ಲಿಸಲಾಯಿತು. ಅಗಲಿದ ಭಜನಾ ಮಂಡಳಿಯ ಪದಾಧಿಕಾರಿಗಳಿಗೆ ಮೌನ ಪ್ರಾರ್ಥನೆ ಮಾಡಲಾಯಿತು. ಭಜನಾ ಮಂಡಳಿಯ ರಜತ ಸಂಭ್ರಮಕ್ಕೆ ವಿವಿಧ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಗೌರವಿಸಲಾಯಿತು. ಶಾಲಾ ಮಕ್ಕಳಾದ ಸುಸ್ಮಿತ,ಕಾವ್ಯ ಮತ್ತು ಸುಭಿಕ್ಷಾ ಪ್ರಾರ್ಥನೆ ನೇರವೆರಿಸಿದರು.ಮಂಡಳಿಯ ಸದಸ್ಯರಾದ ನಿತಿನ್ ಕೋಡ್ಯೇಲು ಸ್ವಾಗತಿಸಿ, ಶಿಕ್ಷಕರಾದ ಸುರೇಶ್ ಮಾಚಾರ್ ನಿರೂಪಿಸಿದರು. ಸದಸ್ಯರಾದ ಶ್ರವಣ್ ನೆಲ್ಲಿಗೇರು ವಂದಿಸಿದರು‌. ಕಾರ್ಯದರ್ಶಿಗಳಾದ ಸುರೇಶ್ ನಡುಮಜಲು, ಕೋಶಾಧಿಕಾರಿ ಸತೀಶ್ ಕೋಡ್ಯೇಲು, ಉಪಾಧ್ಯಕ್ಷರಾದ ಕೃಷ್ಣಪ್ಪ ಗೌಡ, ಸದಸ್ಯರು ಸಹಕರಿಸಿದರು. ಅಂಗನವಾಡಿ ಮಕ್ಕಳಿಂದ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

ಸಂಜೆ ಕುಣಿತಾ ಭಜನಾ ಗುರುಗಳಾದ ನಾಗೇಶ್ ಬಿ.ನೆರಿಯ ಸಾರಥ್ಯದಲ್ಲಿ ನಡೆದ ಭಜನಾ ಕಮ್ಮಟೋತ್ಸವದಲ್ಲಿ ತಾಲೂಕಿನ ಸುಮಾರು 21 ಭಜನಾ ತಂಡಗಳು ಏಕಕಾಲದಲ್ಲಿ ಆಕರ್ಷಕ ಕುಣಿತ ಭಜನೆಯ ಮೂಲಕ ಮನಸೆಳೆದರು. ಶಾಸಕರಾದ ಹರೀಶ್ ಪೂಂಜ ಪಾಲ್ಗೊಂಡು ಶುಭ ಹಾರೈಸಿದರು.ರಾತ್ರಿ ಗಯಾಪದ ಕಲಾವಿದೆರ್ ಉಬಾರ್ ಅಭಿನಯಿಸಿದ ‘ನಾಗಮಾಣಿಕ್ಯ’ ನಾಟಕ ಪ್ರದರ್ಶನ ನಡೆಯಿತು.

Related posts

ಮಚ್ಚಿನ ಬೂತ್ ಸಂಖ್ಯೆ 181, 182, 183ರ ಮತಗಟ್ಟೆಗೆ ಆರ್‌ಎಸ್‌ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಭೇಟಿ

Suddi Udaya

ನಾರಾವಿ ಆದಿತ್ಯ ಫ್ಯಾಶನ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಈ ಆಫರ್ ಆಗಷ್ಟ್ 10 ರಿಂದ 20 ರವರೆಗೆ ಮಾತ್ರ

Suddi Udaya

ಬೆಳ್ತಂಗಡಿ: 1867 ಮದ್ಯವರ್ಜನ ಶಿಬಿರ ಉದ್ಘಾಟನಾ ಕಾರ್ಯಕ್ರಮ

Suddi Udaya

ಭರತನಾಟ್ಯದಲ್ಲಿ ಅಂಡಿಂಜೆಯ ಸಾನ್ವಿ ಸಾಲಿಯಾನ್‌ಗೆ ಡಿಸ್ಟಿಂಕ್ಷನ್

Suddi Udaya

ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ನಡೆದ 19ನೇ ವರ್ಷದ ಮೊಸರು ಕುಡಿಕೆ ಉತ್ಸವ: ಶ್ರೀ ಕೃಷ್ಣ ಅತ್ಯಂತ ಶ್ರೇಷ್ಠ ಮನಶಾಸ್ತ್ರಜ್ಞ: ಪ್ರತಾಪ್ ಸಿಂಹ ನಾಯಕ್

Suddi Udaya

ದೀಪಾವಳಿ ಗೋ ಪೂಜೆ ಪ್ರಯುಕ್ತ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿಯಿಂದ ಗೋವುಗಳಿಗೆ ಉಪಾಹಾರ

Suddi Udaya
error: Content is protected !!