25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನ-ರೂ 2ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬೊಳ್ಳಾಜೆ- ಡೆಂಜೋಲಿ-ಪಡಂಗಡಿ ರಸ್ತೆ ಕಾಮಗಾರಿಗೆ ಚಾಲನೆ

ಬಳಂಜ: ಬೊಳ್ಳಾಜೆ-ಡೆಂಜೋಲಿ- ಗರ್ಡಾಡಿ ರಸ್ತೆಯು ರೂ 2.00 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದ್ದು ಶಾಸಕ ಹರೀಶ್ ಪೂಂಜರವರು ಕಾಮಗಾರಿಯನ್ನು ಫೆ 16ರಂದು ವೀಕ್ಷಿಸಿದರು.

ಬಳಿಕ ಮಾತನಾಡಿದ ಶಾಸಕರು ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಈ ರಸ್ತೆಯ ಕಾಮಗಾರಿ ಪ್ರಾರಂಭಗೊಂಡಿದೆ.ಐದೂವರೆ ಮೀಟರ್ ಅಗಲದ ವ್ಯವಸ್ಥಿತ ರಸ್ತೆ ನಿರ್ಮಾಣವಾಗಲಿದ್ದು ಶೀಘ್ರದಲ್ಲಿ ಉದ್ಘಾಟನೆ ನಡೆಸಲಾಗುವುದು ಎಂದರು.

ಕಳೆದ ಹಲವು ವರ್ಷಗಳಿಂದ ಈ ರಸ್ತೆಯು ತೀರ ಹದಗೆಟ್ಟಿದ್ದು ಇದನ್ನು ದುರಸ್ತಿಗೊಳಿಸಬೇಕೆಂಬುದು ಸ್ಥಳೀಯರ ಬಹುದಿನದ ಬೇಡಿಕೆಯಾಗಿತ್ತು. ಈ ಭಾಗದಲ್ಲಿ ನೂರಾರು ಮನೆಗಳಿದ್ದು ದಿನನಿತ್ಯ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಕೃಷಿಕರು ಬೇರೆ ಕಡೆಗೆ ತೆರಳಲು ಈ ರಸ್ತೆಯನ್ನೇ ಅವಲಂಬಿಸಿದ್ದರು. ಇದೀಗ ರಸ್ತೆ ಕೆಲಸ ಪ್ರಾರಂಭಗೊಂಡಿದ್ದರಿಂದ ಈ ಪ್ರದೇಶದ ಜನರಿಗೆ ಪ್ರಯೋಜನವಾಗಲಿದೆ ಎಂದರು.

ಈ‌ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಕರುಣಾಕರ ಹೆಗ್ಡೆ,ಬೂತ್ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ ಜೈಮಾತ,ಬಳಂಜ ಗ್ರಾ.ಪಂ ನಿಕಟಪೂರ್ವಾಧ್ಯಕ್ಷೆ ಶೋಭಾ ಕುಲಾಲ್, ಗ್ರಾ‌ಪಂ ಮಾಜಿ‌ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಯೈಕುರಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ದಿನೇಶ್ ಪೂಜಾರಿ,ಪಡಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಅಂತೋನಿ ಫೆರ್ನಾಂಡೀಸ್, ಗರ್ಡಾಡಿ ಶಕ್ತಿಕೇಂದ್ರದ ಅಧ್ಯಕ್ಷ ದಿನಕರ ಕುಲಾಲ್, ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ, ರಂಜಿತ್ ಪೂಜಾರಿ ಮಜಲಡ್ಡ,ವಸಂತ ಶೆಟ್ಟಿ ರಾಮನಗರ, ಹರೀಶ್ ವೈ,ಕೃಷ್ಣಪ್ಪ ಪೂಜಾರಿ ಗರ್ಡಾಡಿ, ಸಂದೇಶ್ ಪೊನ್ನೆದಕಲ, ದಿನೇಶ್ ಕೋಟ್ಯಾನ್ ಕುದ್ರೋಟ್ಟು,ವಸಂತ ಪೂಜಾರಿ,ಪದ್ಮನಾಭ ಕುಲಾಲ್,ಸುದೀಶ್ ಅಂತರ,ಪ್ರಣೀತ್ ಹೇರ ಮೊದಲಾದವರು ಉಪಸ್ಥಿತರಿದ್ದರು.

Related posts

ಸೆ.28 : ತಾಲೂಕು ಮಟ್ಟದ ದಸರಾ ಕ್ರೀಡಾ ಕೂಟ

Suddi Udaya

ಸಂಕಷ್ಟದಲ್ಲಿರುವ ಹೆಂಚು ಉದ್ಯಮ ಸೂಕ್ತ ಪರಿಹಾರ ಕ್ರಮಕ್ಕಾಗಿ ಪರಿಷತ್ ನಲ್ಲಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಅನಾರು ಸ.ಉ.ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಬೆಳ್ತಂಗಡಿ ಹಾಗೂ ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ: ಬೆಳ್ತಂಗಡಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

Suddi Udaya

ತೋಟತ್ತಾಡಿ ಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಮಹಿಳಾ ಬಿಲ್ಲವ ವೇದಿಕೆಯ ನೂತನ ಸಮಿತಿ ರಚನೆ

Suddi Udaya

ಮಚ್ಚಿನ ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya
error: Content is protected !!