25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಅಳದಂಗಡಿ ಸ.ಪ್ರೌ. ಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ

ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜಸೇವಾ ಸಂಘಟನೆಯಿಂದ ಸರಕಾರಿ ಪ್ರೌಢಶಾಲೆ ಅಳದಂಗಡಿಯಲ್ಲಿ ಎಸ್ ಎಸ್ ಎಲ್ ಸಿ ನಂತರ ಮುಂದೇನು ಎಂಬುದಕ್ಕೆ “ವೃತ್ತಿ ಮಾರ್ಗದರ್ಶನ ಫೆ.14 ರಂದು ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಕಳ ಜ್ಞಾನಸುಧಾ ಕಾಲೇಜು ಉಪನ್ಯಾಸಕ ಸಂದೀಪ್ ಮತ್ತು ಸರಕಾರಿ ಪ್ರೌಢಶಾಲೆ ಗುರುವಾಯನಕೆರೆ ಶಿಕ್ಷಕರಾದ ಜಗನ್ನಾಥ್ ಮಾರ್ಗದರ್ಶನ ನೀಡಿದರು.


ಕಾರ್ಯಕ್ರಮದಲ್ಲಿ ಸಂಘಟನೆಯ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲರು ಶಾಲಾ ಮಕ್ಕಳಿಗೆ ಮಾರ್ಗದರ್ಶನಕ್ಕೆ ಪೂರಕವಾಗಿ ಪುಸ್ತಕ ಮತ್ತು ಪೆನ್ ನ್ನು ನೀಡಿ ಶುಭ ನುಡಿಯನ್ನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಾಂತಿ ಮರಿಯಾ ಸಲ್ಡಾನ್ಹ , ಜ್ಞಾನಸುಧಾ ಕಾಲೇಜು ಉಪನ್ಯಾಸಕಿ ಸೌಜನ್ಯ ಹೆಗ್ಡೆ ಮತ್ತು ನಿವೃತ ಸೈನಿಕ ಮೋಹನ್ ಕುಲಾಲ್, ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಅಧ್ಯಕ್ಷ ದೇವದಾಸ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮರಿಯಾ ಸಲ್ಡಾನ್ಹ ಸ್ವಾಗತಿಸಿದರು. ಚಂದ್ರಶೇಖರ ಧನ್ಯವಾದ ಸಲ್ಲಿಸಿದರು.

Related posts

ಬಣಕಲ್ ಸಾಯಿಕೃಷ್ಣ ಹೆಲ್ತ್ ಸೆಂಟರ್ ನಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ನೇತ್ರ ತಪಾಸಣೆ ಶಿಬಿರ

Suddi Udaya

ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷರಾಗಿ ಸತೀಶ್ ಕಾಶಿಪಟ್ಣಅವಿರೋಧ ಆಯ್ಕೆ

Suddi Udaya

ನಾರಾವಿಯಲ್ಲಿ ನಿರ್ಮಿಸಲಾದ ಚೆಕ್ ಪೋಸ್ಟ್ ಗೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ, ಪರಿಶೀಲನೆ

Suddi Udaya

ಕಲ್ಮಂಜ ಗ್ರಾಮ ಪಂಚಾಯತ್ ವತಿಯಿಂದ ನಿಡಿಗಲ್ ಪರಿಸರದ ಚರಂಡಿಗಳ ಸ್ವಚ್ಛತೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಶಂಕರ್ ರಾವ್ ಜೆಸಿ ಭಾರತದ ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆ

Suddi Udaya

ಬೈಲಂಗಡಿ ಶ್ರೀ ಸೋಮನಾಥೇಶ್ವರ ಭಜನಾ ತಂಡದಿಂದ ಧಾರ್ಮಿಕ ಕ್ಷೇತ್ರಗಳ ಪ್ರವಾಸ

Suddi Udaya
error: Content is protected !!