27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವ ನಮಸ್ಕಾರ

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಕೇಂದ್ರ ಕಛೇರಿ ತುಮಕೂರು, ನೇತ್ರಾವತಿ ವಲಯ‌, ಮಂಗಳೂರು ಹಾಗೂ ಶ್ರೀ ಕ್ಷೇತ್ರ ಸದಾಶಿವ ರುದ್ರ ದೇವಸ್ಥಾನ ಸುರ್ಯ ಇವರ ಸಹಯೋಗದಲ್ಲಿ ಶ್ರೀ ಸದಾಶಿವ ರುದ್ರ ದೇವಸ್ಥಾನದ ಸನ್ನಿಧಾನದಲ್ಲಿ ಬೆಳ್ತಂಗಡಿಯ ಯೋಗಬಂಧುಗಳು ಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 15 ರಿಂದ ಫೆ. 16 ರ ಮುಂಜಾನೆ 6 ಗಂಟೆಯವರೆಗೆ ಶಿವ ಭಜನೆ, ಶಿವ ಅಷ್ಟೋತ್ತರ ಶತನಾಮಾವಳಿ ಪಠಣ, 108 ಬಾರಿ ಮೃತ್ಯುಂಜಯ ಮಂತ್ರಜಪ‌, 1008 ಬಾರಿ ಶಿವಪಂಚಾಕ್ಷರಿ ಜಪ ಹಾಗೂ 4 ಆವೃತ್ತಿಯಲ್ಲಿ 11 ಬಾರಿ ಯೋಗ ಶಿವ ನಮಸ್ಕಾರ ಕಾರ್ಯಕ್ರಮವು ನಡೆಯಿತು.

ನೂರಾರು ಯೋಗ ಹಾಗೂ ಯೋಗೇತರ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೃತಾರ್ಥರಾದರು‌.
ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಸತೀಶ್ಚಂದ್ರ ಸುರ್ಯಗುತ್ತು ಇವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ ಹಾಗೂ ಸಂಗ್ರಾಮ್ ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ಪ್ರಾಂತ ಸಂಘಟನಾ ಪ್ರಮುಖರಾದ ಹರೀಶ್, ಜಿಲ್ಲಾ ಸಂಚಾಲಕರಾದ ನಾರಾಯಣ, ಪ್ರಾಂತ ಪ್ರಶಿಕ್ಷಣ ಪ್ರಮುಖರಾದ ಪ್ರತಾಪ್, ಜಿಲ್ಲಾ ಸಹ ಸಂಚಾಲಕ ಯೋಗೀಶ್, ಜಾಲತಾಣ ಪ್ರಮುಖರಾದ ಅನುಪಮಾ ಬೆಳ್ತಂಗಡಿ, ಶಾಖಾ ಸಂಚಾಲಕ ವಸಂತ ಕೆಂಬರ್ಜೆ ಹಾಗೂ ಕಾರ್ಯಕ್ರಮದ ಸಂಚಾಲಕ ಗಣಪತಿ ಉಪಸ್ಥಿತರಿದ್ದರು.

ವಿವರಣೆಯಲ್ಲಿ ಮಾನಸ, ಸುರೇಶ, ಸಂತೋಷ್ ಕರ್ಕೇರ, ಐಶ್ವರ್ಯ, ಕೋಮಲ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಆಶಾ, ನಾಗಶ್ರೀ, ಪುಷ್ಪಾ, ರಕ್ಷಿತಾ, ಸೌಮ್ಯ, ಆನಂದ, ಅರುಣ್, ಪ್ರಶಾಂತ‌, ಪ್ರಕಾಶ‌, ನಾಗೇಶ ಇವರುಗಳು ಜೋಡಿಸಿಕೊಂಡಿದ್ದರು.

ಶ್ರೀಮತಿ ಆಶಾ ಹಾಗೂ ರಘುನಾಥ ಶಾಂತಿ ದಂಪತಿಗಳು ಅಗ್ನಿಹೋತ್ರವನ್ನು ನಿರ್ವಹಿಸಿದರು. ಜಿಲ್ಲಾ ಸಮಿತಿಯ ಮಾರ್ಗದರ್ಶನದೊಂದಿಗೆ, ಬೆಳ್ತಂಗಡಿ ಶಾಖೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಗಣೇಶ್ ಹಾಗೂ ಶಿಕ್ಷಕರಾದ ಸಂತೋಷ್ ಕಾಪಿನಡ್ಕ ಕೋಮಲ ಪ್ರಕಾಶ್ ಇವರ ನೇತೃತ್ವದಲ್ಲಿ ಎಲ್ಲಾ ಯೋಗ ಬಂಧುಗಳ ಸಹಕರಿಸಿದರು.

Related posts

ಜು.13: ಗುರುವಾಯನಕೆರೆ ವಿದ್ಯುತ್ ನಿಲುಗಡೆ

Suddi Udaya

ಪದ್ಮುಂಜ ವಿ.ಹಿಂ.ಪ. ಘಟಕದ ವತಿಯಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ಸ್ವಚ್ಛತಾ ಕಾರ್ಯ

Suddi Udaya

ಎಳನೀರಿನಲ್ಲಿ ಮೊಟ್ಟಮೊದಲ ಸಾಹಿತ್ಯ ಕಾರ್ಯಕ್ರಮ: ಸಾಹಿತ್ಯ ಮತ್ತು ಬದುಕು ವಿಷಯದ ಕುರಿತು ಕಾರ್ಯಕ್ರಮ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿ ನೂತನ ಜಮಾತ್ ಕಮಿಟಿ ರಚನೆ: ನವಾಝ್ ಶರೀಫ್ ಕಟ್ಟೆ 3 ನೇ ಬಾರಿಗೆ ಅಧ್ಯಕ್ಷರಾಗಿ ಪುನರಾಯ್ಕೆ

Suddi Udaya

ಬೆಳ್ತಂಗಡಿ ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ ಹಾಗೂ ಶ್ರೀ ಬಲರಾಮರ ಜಯಂತಿ ಆಚರಣೆ

Suddi Udaya

ಮೂಡಿಗೆರೆ ಪಟ್ಟಣದಲ್ಲಿ ಮಾದಕ ವಸ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ಬೆಳ್ತಂಗಡಿಯ ಇಬ್ಬರು ಯುವಕರ ಬಂಧನ

Suddi Udaya
error: Content is protected !!