ಮಲವಂತಿಗೆ :ಮೈ ಭಾರತ್ ದಕ್ಷಿಣ ಕನ್ನಡ ಜಿಲ್ಲೆ ಮಿನಿಸ್ಟ್ರಿ ಆಫ್ ಯೂತ್ ಆಫಾರೀಶ್ ಆಂಡ್ ಸ್ಪೋರ್ಟ್ಸ್ ಗವನ೯ಮೆಂಟ್ ಆಫ್ ಇಂಡಿಯಾ ವತಿಯಿಂದ ನೇತ್ರಾವತಿ ಕಿನಾರೆ ಕ್ರೀಡಾ ಸಂಘ ಮಲವಂತಿಗೆ ದಿಡುಪೆ ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಮಲವಂತಿಗೆ ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ – 2026 ಮಲವಂತಿಗೆ ಶಾಲಾ ವಠಾರದಲ್ಲಿ ಫೆ.15 ರಂದು ನಡೆಯಿತು.

ಅಧ್ಯಕ್ಷತೆಯನ್ನು ರಾಜೇಶ್ ಕೆ ಕಲ್ಪೆಟ್ಟು ವಹಿಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಮಲವಂತಿಗೆ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಜೈನ್ ನೆರವೇರಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾಕೂಟಕ್ಕೆ ಶುಭ ನುಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ತಾಲೂಕಿನಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಪ್ರೋತ್ಸಾಹ ಮತ್ತು ಯುವಕರಿಗೆ ಶಕ್ತಿ ತುಂಬುವಂತೆ ಶುಭನುಡಿದರು.

ವೇದಿಕೆಯಲ್ಲಿ ಮೈ ಭಾರತ್ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ ಟಿ ಕೆ, ಮೈ ಭಾರತ್ ಆಡಳಿತ ಅಧಿಕಾರಿ ಜಗದೀಶ್. ಕೆ, ಮಲವಂತಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ, ಗ್ರಾ.ಪಂ. ಉಪಾಧ್ಯಕ್ಷೆ ರೋಹಿಣಿ ಜಯವರ್ಮ ಗೌಡ ಕಲ್ಬೆಟ್ಟು, ಬಂಗಾಡಿ ಸಿಎ ಬ್ಯಾಂಕ್ ನಿರ್ದೇಶಕ ಶೀನಪ್ಪ ಗೌಡ ನೇತ್ರಕೊಡಂಗೆ, ಮಂಗಳೂರು ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಪ್ರಭಾರ ಮಾರ್ಕೆಟಿಂಗ್ ಅಧಿಕಾರಿ ದಿಲೀಪ್ ಕುಮಾರ್ ಹಿರೇಬಂಡಾಡಿ, ಮಿತ್ತಬಾಗಿಲು ಗ್ರಾ.ಪಂ. ಸದಸ್ಯ ಚಂದ್ರಶೇಖರ ಗೌಡ ತಂಗಿತ್ತಿಪಾಲು, ದಿಡುಪೆ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಂತ ಹೆಗ್ಡೆ ಹೊಸತೋಟ ಉಪಸ್ಥಿತರಿದ್ದರು.


ಈ ವೇಳೆ ಸಮಾಜ ಸೇವಕರಾದ ಕೇಶವ ವಿ. ಫಡಕೆ ಹಾಗೂ ಸುಭಾಷ್ ಬಾಗ್ ಇವರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಮಂಗಳೂರು NMPT ಮೋಹನ್ ಗೌಡ ಕಾವೇಲಿ, ಕೇಶವ ಎಮ್.ಕೆ ಕೃಷಿಕರು ಕುದ್ಮಾನ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಜಯರಾಮ ಆಳಂಗಾರು, ಮಲವಂತಿಗೆ ಗ್ರಾ.ಪಂ. ಸದಸ್ಯ ದಿನೇಶ್ ಗೌಡ ಡಿ ಕಜಕ್ಕೆ, ಮಧುಸೂದನ್ ಮಲ್ಲ ಉದ್ಯಮಿ ದಿಡುಪೆ, ಮಲವಂತಿಗೆ ಹಾಲು ಉತ್ಪಾದಕರು ಸಹಕಾರಿ ಸಂಘ ಅಧ್ಯಕ್ಷ ಪುರಂದರ ಗೌಡ, ನೇತ್ರಾವತಿ ಕಿನಾರೆ ಕ್ರೀಡಾ ಸಂಘದ ಕಾರ್ಯದರ್ಶಿ ತೀಕ್ಷಿತ್ ಕೆ.ಕಲ್ಬೆಟ್ಟು, ನವಗ್ರಹ ದಿಡುಪೆ ಮಾಲಕರಾದ ಸಂತೋಷ್ ಮಂಟಮೆ, ಪಂಚಶ್ರೀ ಭಜನೆ ಮಂಡಳಿಯ ಸಂಚಾಲಕರಾದ ಗಣೇಶ್ ಗೌಡ ಪಗರೆ, ಮಲವಂತಿಗೆ ಕೂರ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿ ವರಲಕ್ಷ್ಮಿ , ರಮೇಶ್ ಗೌಡ ಹಾಗೂ ಶಿವರಾಮ ಗೌಡ ವಿದ್ಯಾನಗರ, ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮ್ಯಾನೇಜರ್ ಉಮೇಶ್ ಗೌಡ ಮೈರ್ನೋಡಿ, ಸಾಗರ್, ದಿನೇಶ್ ಗೌಡ ಕಾವೇಲಿ, ವೆಂಕಟೇಶ್ ಗೌಡ ಕಲ್ಬೆಟ್ಟು, ಅಡ್ಡಕೊಡಂಗೆ, ಯೋಗೀಶ್ ದರ್ಕಸ್, ಹೇಮಂತ್ ಗೌಡ ಮೈರ್ನೋಡಿ, ರಾಜೇಶ್ ಮಂಟಮೆ, ಯುವ ವಕೀಲರು ನಿಶಾಂತ್ ಗೌಡ ಪನಿಕ್ಕಲ್ ಉಪಸ್ಥಿತರಿದ್ದರು.
ಉಮೇಶ್ ಗೌಡ ಮೈರ್ನೋಡಿ, ರಮೇಶ್ ಗೌಡ ವಿದ್ಯಾನಗರ ಕಾರ್ಯಕ್ರಮ ನಿರೂಪಿಸಿ, ನೇತ್ರಾವತಿ ಕಿನಾರೆ ಕ್ರೀಡಾ ಸಂಘದ ಕಾರ್ಯದರ್ಶಿ ತೀಕ್ಷಿತ್ ಕೆ.ಕಲ್ಪೆಟ್ಟು ವಂದಿಸಿದರು.











