ಬೆಳ್ತಂಗಡಿ : ಮೊಗ್ರು ಗ್ರಾಮದ ಮೂವರು ದೈವಗಳ ದೈವಸ್ಥಾನ ಮುಗೇರಡ್ಕದ ವತಿಯಿಂದ ಮೊಗ್ರು ಗ್ರಾಮದ ಅಲೆಕ್ಕಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ ಶಿಶು ಮಂದಿರದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ಎಂದು ರೂ. 50000 ದೇಣಿಗೆಯನ್ನು ನೀಡಲಾಯಿತು.
ಮುಗೇರಡ್ಕ ಜಾತ್ರೆಯು ಈ ವರ್ಷ ಜನವರಿ ತಿಂಗಳಲ್ಲಿ ನಡೆದು ಫೆಬ್ರವರಿ ತಿಂಗಳ ಸಂಕ್ರಮಣ ದಿನ ಸ್ವಯಂ ಸೇವಕರಿಗೆ ಅಭಿನಂದನೆ ಮತ್ತು ಲೆಕ್ಕಾಚಾರ ವರದಿ ಮಂಡನೆ ಸಂದರ್ಭದಲ್ಲಿ ಅಲೆಕ್ಕಿ ಶಿಶು ಮಂದಿರದ ಸೇವೆಯನ್ನು ಮನಗಂಡು ಇನ್ನೂ ಹೆಚ್ಚಿನ ಸನಾತನ ಹಿಂದೂ ಸಂಸ್ಕಾರ ಶಿಕ್ಷಣ ನೀಡಲು ಅನುಕೂಲವಾಗಲು ಈ ಮೊತ್ತವನ್ನು ದೈವದ ಪ್ರಸಾದ ಎಂದು ದೈವಸ್ಥಾನ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಗುತ್ತು ಮನೆ ದೇವಸ್ಯ ರಾಮಣ್ಣ ಗೌಡ ಅಂತರ ಮನೋಹರ್, ಸುಧಾಕರ್ ನ್ಯಾಮರ್, ಬಾಬು ಗೌಡ ಮುಗೇರಡ್ಕ, ಚಂದ್ರಹಾಸ ದೇವಸ್ಯ,ಎರ್ಮಲ ರಾಮಣ್ಣ ಗೌಡ,ಉಮೇಶ್ ಪರಕಜೆ, ಜಿನ್ನಪ್ಪ ಗೌಡತಿಗೆ, ಕೇಶವ ಜಾಲ್ನಡೆ, ಹಾಗು ಜೈ ಶ್ರೀರಾಮ ಶಿಶು ಮಂದಿರದ ಅಧ್ಯಕ್ಷರು ಆದ ಅಶೋಕ್ ಬಿ, ರಮೇಶ್ ನೆಕ್ಕರಾಜೆ ಭರತ್ ಜಾಲ್ನಡೆ, ವರುಣ್ ನೆಕ್ಕರಾಜೆ ಮೊದಲದವರು ಉಪಸ್ಥಿತರಿದ್ದರು.
ಅಲೆಕ್ಕಿ ಶಿಶು ಮಂದಿರದ ನಿರ್ಮಾಣ ಸಮಯದಲ್ಲಿ ಇದೇ ರೀತಿಯ ದೊಡ್ಡ ಮೊತ್ತದ ದೇಣಿಗೆ, ಶಿಶು ಮಂದಿರಕ್ಕೆ LED tv ಮತ್ತು DTH ಕೊಡುಗೆ ಹಾಗೇನೇ ಅನ್ನಯಜ್ಞ ಕ್ಕೆ ಪೂರಕವಾಗಿ ದೈವದ ಗದ್ದೆ ನೀಡಿದ ಮತ್ತು ಈ ವರ್ಷ ನೀಡಿದ ದೇಣಿಗೆಗೆ ದೈವಸ್ಥಾನ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ಅಶೋಕ್ ಬರುoಗುಡೆಲ್ ಅಧ್ಯಕ್ಷರು ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಅಲೆಕ್ಕಿ ಈ ಸಂದರ್ಭದಲ್ಲಿ ತಿಳಿಸಿದರು.











