ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ಮಹಾ ಶಿವರಾತ್ರಿ ಉತ್ಸವ ಆಚರಣೆ

ಇಂದಬೆಟ್ಟು: ಬಂಗಾಡಿ ಸೀಮೆಯ ಇತಿಹಾಸ ಪ್ರಸಿದ್ಧ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವವು ಫೆ.15 ರಂದು ದೇವಸ್ಥಾನದ ಪ್ರಧಾನ ಅರ್ಚಕ ಆನಂದ ಭಟ್ ರವರು ದೀಪ ಪ್ರಜ್ವಲಿಸಿ ಮಾರ್ಗದರ್ಶಕರಾದ ಡಾ| ಪ್ರದೀಪ್ ಎ ರವರು ಶಿವ ಸಹಸ್ರನಾಮವನ್ನು ಭಕ್ತಾದಿಗಳು ಪಠಿಸಿದರು.

ಯಾಮದ ಪೂಜೆಯೊಂದಿಗೆ ಉತ್ಸವವು ಆರಂಭವಾಗಿ ಶ್ರೀ ಅರ್ಧನಾರೀಶ್ವರ ಸ್ವಾಮಿಗೆ ಒಟ್ಟು 9 ಯಾಮದ ಪೂಜೆ, ರುದ್ರ ಪಠಣ ದೊಂದಿಗೆ ಶತರುದ್ರಾಭಿಷೇಕ, ಮಧ್ಯಾಹ್ನ ಪ್ರಸಾದ ಭೋಜನ, ಸಂಜೆ ಇಂದಬೆಟ್ಟು, ನಾವೂರು, ನಡ ಕನ್ಯಾಡಿ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ ಗ್ರಾಮದಿಂದ ಹಾಗೂ ತಾಲೂಕಿನ ವಿವಿಧ ಭಾಗದ ಭಕ್ತರಿಂದ ಶಿವನಾಮ ಸಂಕೀರ್ತನೆಯೊಂದಿಗೆ ಕ್ಷೇತ್ರಕ್ಕೆ ಪಾದಯಾತ್ರೆ, ವಿವಿಧ ಭಜನಾ ತಂಡಗಳಿಂದ ಭಕ್ತಿ ಗಾಯನ ಕಮ್ಮಟ ಭಜನೆ, ರಂಗಪೂಜೆ, ಉಪಹಾರ ಹಾಗೂ ಭಕ್ತರಿಂದ ಪ್ರಾತಃ ಕಾಲದ ಯಾಮದ ಪೂಜೆ ವರೆಗೆ ಜಾಗರಣೆ ನಡೆದು ಸಾವಿರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿಂದ ನಡೆದು ಮಹಾ ಶಿವರಾತ್ರಿ ಉತ್ಸವವು ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಕಮ್ಮಟ ಭಜನೆ ದೀಪ ಪ್ರಜ್ವಲನೆಯನ್ನು ಗ್ರಾಮದ ಹಿರಿಯರು ಕರ್ನಾಟಕ ಸರ್ಕಾರದ ಮಾಜಿ ಸಚಿವ ಕೆ. ಗಂಗಾಧರ ಗೌಡ ನೆರವೇರಿಸಿದರು., ಎಂ.ಎಲ್.ಸಿ ಪ್ರತಾಪ್ ಸಿಂಹ ನಾಯಕ್ ದಂಪತಿಗಳು, ಮಾರ್ಗದರ್ಶಕರಾದ ಡಾ| ಪ್ರದೀಪ್ ಎ ರವರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ, ಸಮಿತಿಯ ಪದಾಧಿಕಾರಿಗಳು, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಇಂದಬೆಟ್ಟು ಗುತ್ತುವಿನ ಅಜಿತ್ ಕುಮಾರ್ ಜೈನ್, ಊರಿನ ಗಣ್ಯರು, ಹಿರಿಯರು ಕಿರಿಯರು ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ಅರ್ಧನಾರೀಶ್ವರ ಸ್ವಾಮಿಯ ಅನುಗ್ರಹಕ್ಕೆ ಪಾತ್ರರಾದರು.

Related posts

ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ಸಿ ರವರನ್ನು ಭೇಟಿ ಮಾಡಿದ ಬೆಳ್ತಂಗಡಿ ಪ.ಪಂ. ಹಾಗೂ ಗ್ರಾ.ಪಂ. ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು

Suddi Udaya

ಇಕೋಫ್ರೆಶ್ ಎಂಟರ್ಪ್ರೈಸಸ್ ಮಾಲಕ ರಾಕೇಶ್ ಹೆಗ್ಡೆಯವರಿಂದ ರೈತರತ್ನ ಪ್ರಶಸ್ತಿ ಪುರಸ್ಕೃತ ಕುತ್ಲೂರು ಶಾಲೆಗೆ ಕಳೆಕೊಚ್ಚುವ ಯಂತ್ರ ಕೊಡುಗೆ

Suddi Udaya

ಬೆಳ್ತಂಗಡಿ ರಾಜಕೇಸರಿ ಸೇವಾ ಟ್ರಸ್ಟ್ ನ 585 ಸೇವಾ ಯೋಜನೆಯ ಬೃಹತ್ ಉಚಿತ ಹೃದಯ ತಪಾಸಣೆ ಶಿಬಿರ

Suddi Udaya

ತಿಮರೋಡಿ ಗಡಿಪಾರು ಪ್ರಕರಣ; ಬಂಟ್ವಾಳ ಡಿ.ವೈ.ಎಸ್.ಪಿ‌ ವಿರುದ್ದ ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ ಹಾಗೂ ಸರಕಾರಕ್ಕೆ ಜಯಂತ್ ಟಿ‌ ದೂರು

Suddi Udaya

ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿರುವ ಪ್ರಶಾಂತ್ ಅಡ್ಡರ್ ಎ.ಎಸ್.ಐ ಆಗಿ ಪದೋನ್ನತಿ

Suddi Udaya

ಭಗವದ್ಗೀತಾ ಭಾಷಣ ಸ್ಪರ್ಧೆ: ಉಜಿರೆ ಶ್ರೀ ಧ.ಮಂ.ಪ.ಪೂ. ಕಾಲೇಜಿನ ಹಂಸಿನಿ ಭಿಡೆ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!