23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಂಡಿಂಜೆ ನವೋದಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ಉಚಿತ ಸಾಮೂಹಿಕ ಉಪನಯನ

ಅಂಡಿಂಜೆ ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 28ನೇ ವರ್ಷದ ” ವಿಶ್ವಕರ್ಮ ಪೂಜೆ “ಯ ಸಂದರ್ಭ “ಉಚಿತ ಸಾಮೂಹಿಕ ಉಪನಯನ” ಕಾರ್ಯಕ್ರಮ ನಡೆಯಿತು.

ಶ್ರೀ ವೇಣೂರು ಪ್ರಕಾಶ ಪುರೋಹಿತರ ನೇತೃತ್ವ ,ಶ್ರೀ ವೇಲಾಪುರಿ ವಿಶ್ವನಾಥ ಶರ್ಮರ ಆಚಾರ್ಯತ್ವ ವಹಿಸಿದ್ದರು.
ಬಳಿಕ ಸಂಘದ ಅಧ್ಯಕ್ಷ ಪ್ರಭಾಕರ ಆಚಾರ್ಯರ ಅಧ್ಯಕ್ಷತೆಯಲ್ಲಿ ಸಭಾಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಮುಖ್ಯ ಅತಿಥಿಗಳಾಗಿ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು , ಜಿ.ಟಿ.ಆಚಾರ್ಯ ಮುಂಬೈ ,ಮೂಡಬಿದ್ರೆ ಗುರುಮಠ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಎಂ.ಕೆ.ಬಾಲಕೃಷ್ಣ ಆಚಾರ್ಯ ಉಳಿಯ, ಉಜಿರೆಯ ಸ್ವರ್ಣೋಧ್ಯಮಿ ಆನಂದ ಆಚಾರ್ಯರು ಆಗಮಿಸಿದ್ದರು. ಕೂಡುವಳಿಕೆ ಗ್ರಾಮ ಮೊಕ್ತೇಸರ ರಾಧಾಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಂಘದ ಸದಸ್ಯರ ಉತ್ತಮ ಅಂಕ ಗಳಿಕ ವಿದ್ಯಾರ್ಥಿಗಳನ್ನು ಮತ್ತು ಉಪನಯದ ವಟುಗಳಿಗೆ ಬೇಕಾಗಿರುವ ಸಾಹಿತ್ಯವನ್ನು ಸಂಪೂರ್ಣವಾಗಿ ಒದಗಿಸಿದ ನವೀನ ಆಚಾರ್ಯ, ಪಿಲಿಯೂರು ಇವರನ್ನು ಗೌರವಿಸಲಾಯಿತು.
ಡಿ.ಭಾಸ್ಕರ ಆಚಾರ್ಯರು ಪ್ರಾಸ್ತಾವನೆಯೊಂದಿಗೆ ಸ್ವಾಗತಿಸಿ , ಸೌಮ್ಯಾ ರಾಧಾಕೃಷ್ಣ ವಂದಿಸಿದರು.
ಕು.ಸಾನಿಧ್ಯ ಬಿ.ಕೆ.ಆಚಾರ್ಯ ನಿರೂಪಿಸಿದರು.

Related posts

ಶಿಬಾಜೆ: ಶ್ರೀ ಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಪ್ರಾರಂಭ

Suddi Udaya

ನಾರಾವಿ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಔಷಧಿ ವನ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ 93 ಒಕ್ಕೂಟಗಳ ಕೇಂದ್ರ ಒಕ್ಕೂಟದ ಸಭೆ

Suddi Udaya

“ನಮ್ಮೂರು ನಮ್ಮ ಕೆರೆ” ವಿಶಿಷ್ಟ ಸೇವೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿಜಯವಾಣಿ ವಿಜಯರತ್ನ ಅಂತರಾಷ್ಟ್ರೀಯ ಪ್ರಶಸ್ತಿ

Suddi Udaya

ಸುಲ್ಕೇರಿ ಗ್ರಾ.ಪಂ ನಲ್ಲಿ ವಿಶೇಷ ಚೇತನರ ಸಮನ್ವಯ ಸಭೆ

Suddi Udaya

ಚೋಳಮಂಡಲಮ್ ಇನ್ವೆಸ್ಟ್ ಮೆಂಟ್ ಮತ್ತು ಫೈನಾನ್ಸ್ ಕಂಪನಿ‌ ಬೆಳ್ತಂಗಡಿಯಲ್ಲಿ ಕಾರ್ಯಾರಂಭ

Suddi Udaya
error: Content is protected !!