ಮೊಗ್ರು : ಜೈ ಶ್ರೀ ರಾಮ್ ಸೇವಾ ಟ್ರಸ್ಟ್ ಅಲೆಕ್ಕಿ -ಮುಗೇರಡ್ಕ ಮೊಗ್ರು,ಶ್ರೀ ರಾಮ ಶಿಶು ಮಂದಿರದ ನಾಲ್ಕನೇ ವರ್ಷದ ವಾರ್ಷಿಕೋತ್ಸವ, ಭಾರತ್ ಮಾತಾ ಪೂಜಾನ ಕಾರ್ಯಕ್ರಮ ಮತ್ತು ಮಾತೃ ಪಾದಪೂಜೆ, ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಫೆ 13 ರಂದು ನೆರವೇರಿತು.

ಶಿಶು ಮಂದಿರದ ಚಿಣ್ಣರು ತಮ್ಮ ತಾಯಂದಿರ ಪಾದ ಪೂಜೆ ಸಲ್ಲಿಸಿದ ಕ್ಷಣ ರಮಣೀಯವಾಗಿತ್ತು. ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಿಸಲಾಯಿತು. ವಿಶೇಷವಾಗಿ ಸಂಸ್ಥೆಯ ಸದಸ್ಯರು ಮಾತೃ ಪಾದಪೂಜೆಯನ್ನು ಮಾಡಿದಾಗ ನೆರೆದ ಜನಸಮೂಹ ಮೂಕ ಪ್ರೇಕ್ಷಕರಾಗಿ ಆನಂದ ಬಾಷ್ಪ ಸುರಿಸಿದ ಕ್ಷಣ ಬಹಳಷ್ಟು ಪ್ರೇರಣೆಯಾಗಿತ್ತು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಿವೇಕಾನಂದ ವಿದ್ಯಾವರ್ಧಕದ ಸಂಘದ ಎ.ಸಿ.ಇ.ಓ, ವೆಂಕಟರಮಣ ರಾವ್ ಮಾತನಾಡಿ ಶಿಶು ಮಂದಿರದ ಶಿಕ್ಷಣದ ಅಗತ್ಯತೆಯ ಬಗ್ಗೆ ತಿಳಿಸಿದರು. ಪದ್ಮುಂಜ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಸಂಸ್ಥೆಯ ಸದಸ್ಯರ ಶ್ರಮ, ಪ್ರಯತ್ನ ಹಾಗೂ ಈ ಧರ್ಮ ರಾಷ್ಟ್ರೀಯ ಸೇವೆಯ ಕಾರ್ಯವನ್ನು ಶ್ಲಾಘಿಸಿದರು.
ಶಿಶು ಮಂದಿರದ ಮಹಾ ಪೋಷಕರಾದ ಪುತ್ತೂರು ದೇವರಾತ ಭಟ್ ಮಾತಾಜಿಯವರ ಪೋಷಕರ ಕಾಳಜಿಯ ಬಗ್ಗೆ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾಧ್ಯಕ್ಷ ಸಂಚಾಲಕರು ನೇಮಿಚಂದ್ರ ಮುಗೇರಡ್ಕ ಸಂಸ್ಥೆಯ ಸದಸ್ಯರು ಮಾಡಿದ ಪಾದ ಪೂಜೆ ಪ್ರದರ್ಶನವಲ್ಲ ಇದು ಸಮಾಜಕ್ಕೆ ಬದಲಾವಣೆಯ ನಿದರ್ಶನ ಹಾಗೆಯೇ ಸಂಘಟನೆಯನ್ನು ಕಟ್ಟಿ ಸಮಾಜವನ್ನು ಬದಲಾಯಿಸೋಣ ಎಂದು ಹೊರಟ ಸದಸ್ಯರು, ಬದಲಾವಣೆ ನಮ್ಮಿಂದಲೇ ಆಗಲಿ ಎನ್ನುವ ಮಾತಿನೊಂದಿಗೆ ತಮ್ಮ ತಾಯಂದಿರ ಪಾದಪೂಜೆಯನ್ನು ಸಲ್ಲಿಸಿದರು.

ಅಶ್ವಿತ್ ಕೆ ಪ್ರಾಸ್ತಾವಿಕ ಭಾಷಣ ಮಾಡಿದರು, ಶಿಶು ಮಂದಿರದ ಮಾತಾಜಿಯಾದ ಪುಷ್ಪಲತ ಸ್ವಾಗತಿಸಿ, ಅಧ್ಯಕ್ಷ ಅಶೋಕ್ ಬಿ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಉದಯ ಭಟ್ ಕೊಳಬ್ಬೆ, ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಬಾಲಕೃಷ್ಣ ಗೌಡ ಮುಗೇರಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ಶಿಶು ಮಂದಿರದ ಮಾತಾಜಿಯವರು, ಜೈ ಶ್ರೀ ರಾಮ್ ಮಹಿಳಾ ಮಂಡಳಿಯವರು, ಮಾತೃ ಮಂಡಳಿಯವರು, ಪೋಷಕರು, ಊರ ಪರವೂರ ಶಿಶು ಮಂದಿರದ ಅಭಿಮಾನಿಗಳು ಭಾಗವಹಿಸಿದ್ದರು.
ಶಿಶು ಮಂದಿರದ ಮಕ್ಕಳಿಂದ ಮಾತೃ ಮಂಡಳಿ ಮಹಿಳಾ ಮಂಡಳಿ ಸದಸ್ಯರಿಂದ, ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.











