September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಕುರಿತಾದ “ನಾ…ರವಿ” ಬ್ರಹ್ಮಾಂಡದೊಡೆಯಗೆ ಭಕ್ತಿ ಪ್ರಜ್ವಲನೆ ಕನ್ನಡ ಆಲ್ಬಂ ಸಾಂಗ್ ಬಿಡುಗಡೆ

ಬೆಳ್ತಂಗಡಿ : ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಕುರಿತಾದ “ನಾ…ರವಿ” ಬ್ರಹ್ಮಾಂಡದೊಡೆಯಗೆ ಭಕ್ತಿ ಪ್ರಜ್ವಲನೆ ಕನ್ನಡ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮ ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಫೆ.15ರಂದು ನಡೆಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಹಾವೀರ ಜೈನ್, ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ ಹಂಬಡ, ಶಶಿಕಾಂತ ಜೈನ್,ಎನ್ ದಿವಾಕರ ಭಂಡಾರಿ, ಮುನಿರಾಜ ಜೈನ್ ಹಾಗೂ ಇತರ ಪದಾಧಿಕಾರಿಗಳು, ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರು ಮತ್ತು ಟಿ ಎನ್ ಪ್ರೊಡಕ್ಷನ್ಸ್ ಇದರ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಸುರೇಂದ್ರ ಜೈನ್ ನಾರಾವಿ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಆಲ್ಬಂ ಸಾಂಗ್ ಗೆ ಪಾರ್ಶ್ವನಾಥ ಜೈನ್‌ ಕಕ್ಯಪದವು ಸಾಹಿತ್ಯ ರಚಿಸಿ ರಾಗ ಸಂಯೋಜಿಸಿದ್ದು, ಭಗೀರಥ್‌ ಕುಮುಟಾ ಮತ್ತು ಜಯಶ್ರೀ ಬೆಳ್ತಂಗಡಿ ಹಾಡಿದ್ದಾರೆ. ಗಣೇಶ್‌ ಹೆಗ್ಡೆ ನಾರಾವಿ ಮತ್ತು ಸುರಭಿ ಶೆಟ್ಟಿ ಕೊಕ್ರಾಡಿ ಅಭಿನಯಿಸಿದ್ದಾರೆ. ಅಶ್ವಿನ್ ಪುತ್ತೂರು ಸಂಗೀತ ನೀಡಿದ್ದಾರೆ.ಮುನಿರಾಜ ಜೈನ್ ನಾರಾವಿ ಸಂಯೋಜನೆ ಮಾಡಿದ್ದಾರೆ.ಪ್ರಸ್ತುತ ಹಾಡು ಟಿ ಎನ್ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಲಭ್ಯವಿದೆ.

Related posts

ವಂದೇ ಮಾತರಂ’ ನನ್ನ ಸೇವೆ ದೇಶಕ್ಕಾಗಿ.. ನೇತ್ರಾವತಿ ನದಿ ಸ್ವಚ್ಛತಾ ಕಾರ್ಯಕ್ರಮ ಆರಂಭ : ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಸೇರಿದಂತೆ ಹಲವು ಸಂಘಟನೆಗಳ ಸಾಥ್

Suddi Udaya

ಸೆ.28: ಬಳಂಜದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಸಾರ್ವಜನಿಕ ಶ್ರೀ ಶಾರದೋತ್ಸವ

Suddi Udaya

ಮಾ.4-6: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ- ಹರೀಶ್ ಪೂಂಜ ಪತ್ರಿಕಾಗೋಷ್ಠಿ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಮೋಡ್ ಚೇರ್ ವಿತರಣೆ

Suddi Udaya

ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಗೆ ಎಸ್‌ಡಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆ

Suddi Udaya

ಬೆಳ್ತಂಗಡಿಯಲ್ಲಿ “ರಾಜಧಾನಿ ಗೋಲ್ಡ್&ಡೈಮಂಡ್” ವಿಸ್ತೃತ ಮಳಿಗೆ ಉದ್ಘಾಟನೆ

Suddi Udaya
error: Content is protected !!