September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶುಭಾರಂಭ

ಬೆಳ್ತಂಗಡಿಯಲ್ಲಿ “ರಾಜಧಾನಿ ಗೋಲ್ಡ್&ಡೈಮಂಡ್” ವಿಸ್ತೃತ ಮಳಿಗೆ ಉದ್ಘಾಟನೆ

ಬೆಳ್ತಂಗಡಿ: ಇಲ್ಲಿನ ಡಿಸಿಸಿ ಬ್ಯಾಂಕ್ ಮುಂಭಾಗದ ಪೃಥ್ವಿ ಮಹಲ್ ಕಾಂಪ್ಲೆಕ್ಸ್ ನಲ್ಲಿರುವ “ರಾಜಧಾನಿ ಗೋಲ್ಡ್ ಏಂಡ್ ಡೈಮಂಡ್ ಸಂಸ್ಥೆಯು”ತನ್ನ ಯಶಸ್ವಿ 17 ವರ್ಷಕ್ಕೆ ಪಾದಾರ್ಪಣೆಯ ನಿಮಿತ್ತ ವಿಸ್ತೃತ ಮಳಿಗೆ ಹಾಗೂ ವಜ್ರಾಭರಣಗಳ‌ ಪ್ರತ್ಯೇಕ ವಿಭಾಗದೊಂದಿಗೆ ತೆರೆದುಕೊಂಡಿದ್ದು ಇದರ ಉದ್ಘಾಟನೆಯು ಏ.23 ರಂದು ಅದ್ದೂರಿಯಾಗಿ ನಡೆಯಿತು.

ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ದಾರುಸ್ಸಲಾಂ ಬೆಳ್ತಂಗಡಿ, ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಳ್ ಕಾಜೂರು, ಸಯ್ಯಿದ್ ಅಕ್ರಂ ತಂಙಳ್ ನೇತೃತ್ವದಲ್ಲಿ ದುಆ ಆಶೀರ್ವಚನ ನಡೆಯಿತು. ಸಂಸ್ಥೆಯ ಮಾಲಿಕರ ಮಾತೃಶ್ರೀ ಕುಂಜ್ಞಾಯಿಶಾ ವಯನಾಡ್ ಹೊಸ ಮಳಿಗೆಗೆ ಆಶೀರ್ವದಿಸಿದರು.

ಗಣ್ಯ ಅತಿಥಿಗಳ ಸಮ್ಮುಖ ರಿಬ್ಬನ್ ಅರಳಿಸುವ ಮೂಲಕ ನೂತನ ಮಳಿಗೆಯ ಉದ್ಘಾಟನೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀಯತುಲ್ ಫಲಾಹ್ ಪೂರ್ವ ಜಿಲ್ಲಾಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹೇಬ್, ಉಜಿರೆ ಸಂಧ್ಯಾ ಟ್ರೇಡರ್ಸ್ ಇದರ ವಿಸ್ತೃತ ಸಂಸ್ಥೆ “ಸಂಧ್ಯಾಫ್ರೆಶ್” ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರ್ಚನಾ ರಾಜೇಶ್ ಪೈ, ಡಿ.ಡಿ ಗ್ರೂಪ್ಸ್ ನ ಮಾಲಿಕ ಅಬ್ದುಲ್ ರಝಾಕ್ ಡಿ.ಡಿ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ರೈಡಿಂಗ್ ಜೋಡಿ ಯುಟ್ಯೂಬರ್ ಶ್ಯಾಂ ಪ್ರಸಾದ್ ಕಾಮತ್, ಬೆಳ್ತಂಗಡಿ ಖಿಲರ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಮೊದಲಾದವರು ಶುಭ ಹಾರೈಸಿದರು. ವೇದಿಕೆಯ‌ ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ಸಯ್ಯಿದ್ ಹುಸೈನ್ ಕೋಯ ತಂಙಳ್ ಕುಂಟಿನಿ, ಸಂಘಟಕ ಸಯ್ಯಿದ್ ಇಸ್ಮಾಯಿಲ್ ತಂಙಳ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುಹಮ್ಮದ್ ರಫಿ, ಪೃಥ್ವಿ ಮಹಲ್ ಕಾಂಪ್ಲೆಕ್ಸ್ ಮಾಲಕಿ ಉಮಾ ರಂಜನ್ ರಾವ್, ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕ ಮಂಜುನಾಥ ರೈ ನಂಜೆ, ಕೆಎಂಜೆ ರಾಜ್ಯ ಸಮಿತಿ ಸದಸ್ಯ ಅಬ್ಬೋನು ಮದ್ದಡ್ಕ, ಎಸ್‌ಎಂಎಸ್ ಶಾಮಿಯಾನ ಸಂಸ್ಥೆಯ ಹಾಜಿ ಅಬ್ದುಲ್ ಲೆತೀಫ್, ಗುರುವಾಯನಕೆರೆಯ ಉದ್ಯಮಿ ಉಮರ್ ಜಿ.ಕೆ, ಕಾಜೂರು ಮಸ್ಜಿದ್ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಡಿ.ವೈ ಉಮರ್, ಆಡಳಿತ ಮಂಡಳಿ ಸದಸ್ಯ ಹನೀಫ್ ಕಾಜೂರು, ಕೇಲ್ತಾಜೆ ಮಸ್ಜಿದ್ ಅಧ್ಯಕ್ಷ ಹನೀಫ್, ನಾವೂರು ಮಸ್ಜಿದ್ ಅಧ್ಯಕ್ಷ ಇಬ್ರಾಹಿಂ, ಉಜಿರೆ ಮಸ್ಜಿದ್ ಅಧ್ಯಕ್ಷ ಅಬೂಬಕ್ಕರ್, ಚಾರ್ಮಾಡಿ‌ ಮಸ್ಜಿದ್ ಅಧ್ಯಕ್ಷ ಸಿ ಅದ್ದು ಮೊದಲಾದವರು ಉಪಸ್ಥಿತರಿದ್ದರು.

ಇಬ್ಬುವಾಕ ಬೆಳ್ತಂಗಡಿ, ಮುಹ್ಯುದ್ದೀನ್ ಉಜಿರೆ, ಖಾಲಿದ್ ಉಜಿರೆ, ಹಿರಿಯ ನ್ಯಾಯವಾದಿ ಮುಹಮ್ಮದ್ ಹನೀಫ್, ರಾಜಧಾನಿ ಗ್ರೂಪ್ಸ್‌ನ ಮೇನೆಂಜಿಂಗ್ ಪಾರ್ಟ್‌ನರ್ ಗಳಾದ ಶೌಕತ್ ಮೂಡಿಗೆರೆ, ಆಲಿ ಒ.ಪಿ, ರಝಾಕ್ ಸುಳ್ಯ, ಶಾಕಿರ್ ಪುತ್ತೂರು ಇವರುಗಳು ಭಾಗಿಯಾಗಿದ್ದರು.

ಆಹ್ವಾನಿತ ಎಲ್ಲಾ ಗಣ್ಯರನ್ನು ರಾಜಧಾನಿ ಸಂಸ್ಥೆಯ ಬೆಳ್ತಂಗಡಿಯ ಮಾಲಿಕ, ಹಾಗೂ ಮೇನೇಜಿಂಗ್ ಪಾರ್ಟ್‌ನರ್ ಶಕೀರ್ ವಯನಾಡ್ ಮತ್ತು ಪತ್ನಿ ಹಾಗೂ ಮಕ್ಕಳು ಬರಮಾಡಿಕೊಂಡು ಗೌರವಿಸಿದರು.

ಡೈಮಂಡ್ ರಿಂಗ್ ವಿಜೇತರಿಗೆ ಸ್ಥಳದಲ್ಲೇ ಬಹುಮಾನ ವಿತರಣೆ: ಸಂಸ್ಥೆ ಪ್ರಕಟಿಸಿದ್ದಂತೆ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗುವ ಅದೃಷ್ಟವಂತ ಗ್ರಾಹಕರಿಗೆ ಡೈಮಂಡ್ ರಿಂಗ್ ಬಹುಮಾನ ದಂತೆ ಅದೃಷ್ಟ ಚೀಟಿ ಎತ್ತುವ ವೇಳೆ ಇಝ್ಮಾ ಫಾತಿಮಾ ವಾಮದಪದವು ಅವರು ವಿಜೇತರಾಗಿದ್ದು, ಅವರಿಗೆ ವಜ್ರದ ಉಂಗುರವನ್ನು ಸ್ಥಳದಲ್ಲೇ ವಿತರಿಸಲಾಯಿತು. ಬಳಿಕ ಪ್ರತೀ 3 ಗಂಟೆಗಳಿಗೊಮ್ಮೆ ಅದೃಷ್ಟವಂತರ ಆಯ್ಕೆ ನಡೆಸಿ‌ ಬಹುಮಾನಗಳನ್ನು ವಿತರಿಸಲಾಯಿತು.

ಎಲ್ಲಾ ಖರೀದಿದಾರರಿಗೆ ಆಕ್ಟಿವಾ ಸ್ಕೂಟರ್ ಬಂಪರ್ ಬಹುಮಾನ: ಅಲ್ಲದೆ ಮುಂದಿನ ನಿಗದಿತ ದಿನಗಳಲ್ಲಿ ಎಲ್ಲಾ ಖರೀದಿದಾರರಿಗೆ ಲಕ್ಕೀ ಕೂಪನ್ ಯೋಜನೆ ಇದ್ದು, ಮುಂದಕ್ಕೆ ಡ್ರಾ ನಡೆದು ಅದರಲ್ಲಿ ವಿಜೇತರಿಗೆ ಹೋಂಡಾ ಆಕ್ಟಿವಾ ಸ್ಕೂಟರ್ ಬಂಪರ್ ಬಹುಮಾನ ಗೆಲ್ಲಬಹುದು.

ಕರ್ನಾಟಕ, ಕೇರಳ ರಾಜ್ಯಗಳಲ್ಲಿ 40 ರಷ್ಟು ರಾಜಧಾನಿ ಸಂಸ್ಥೆಗಳು: ರಾಜಧಾನಿ ಸಂಸ್ಥೆಯನ್ನು ವಯನಾಡ್‌ನ ನಾಸಿರ್ ಹಾಜಿ‌ ಮತ್ತು ಶುಕೂರ್‌ ಹಾಜಿ ಯವರು ಹುಟ್ಟುಹಾಕಿದ್ದು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ 40 ರಷ್ಟು ಔಟ್‌ಲೆಟ್ ಗಳನ್ನು ಹೊಂದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಪರ್‌ ಮಾರ್ಕೆಟ್‌ಗಳೂ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ‌ ಹೂಡಿಕೆ ಕೂಡ ಹೊಂದಿದೆ. ವ್ಯಾಪಾರದ ಲಾಭದಲ್ಲಿ ಶೆ.2.5 ಅನ್ನು ಅರ್ಹರಿಗೆ ‘ಝಕಾತ್’ (ದಾನ‌ಧರ್ಮ) ಕೂಡ ನೀಡುತ್ತಿದೆ.‌

Related posts

ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ: ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 24 ಅಭ್ಯರ್ಥಿಗಳ ಚಿಹ್ನೆ

Suddi Udaya

ಬೆಳ್ತಂಗಡಿ ತಾಲೂಕು ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಮ್ಯಾನ್ಯುವಲ್ ದಾಖಲಾತಿ ಪ್ರಕ್ರಿಯೆ ಆರಂಭ

Suddi Udaya

ಬೆಳ್ತಂಗಡಿ ಅಖಿಲ ಭಾರತ ಬ್ಯಾರಿ ಮಹಾಸಭಾ ಪ್ರತಿನಿಧಿ ಸಭೆಯ ಪೂರ್ವಭಾವಿ ಸಭೆ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ಕೊಕ್ರಾಡಿ: ಅಕ್ರಮ ಮರಳು ಸಾಗಟ: ವೇಣೂರು ಪೊಲೀಸರಿಂದ ದಾಳಿ: ಆರೋಪಿ ಸಹಿತ ಟಿಪ್ಪರ್ ಲಾರಿ ವಶ

Suddi Udaya

ಮುಂಡೂರು: ವಿಶ್ವನಾಥ ಪೂಜಾರಿ ನಿಧನ

Suddi Udaya
error: Content is protected !!