September 6, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿ

ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಬೀಳ್ಕೊಡುಗೆ ಮತ್ತು ಗೌರವಾರ್ಪಣೆ

ಬಂದಾರು : 2021-26 ಸಾಲಿನವರೆಗೆ ಐದು ವರ್ಷಗಳ ಕಾಲ ಬಂದಾರು ಗ್ರಾಮ ಪoಚಾಯತ್ ಆಡಳಿತ ಮಂಡಳಿಯ ಅಭಿವೃದ್ಧಿ ಕಾರ್ಯದಲ್ಲಿ ಸಹಕರಿಸಿದ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರುಗಳನ್ನು ಗೌರವ ಪೂರ್ಣ ಅಭಿನಂದನೆ ಸಲ್ಲಿಸಿ, ಬೀಳ್ಕೊಡಲಾಯಿತು.

ಆಡಳಿತ ಮಂಡಳಿಗೆ ಸಹಕಾರ ನೀಡಿದ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಂಘ ಅಧ್ಯಕ್ಷ -ಉಪಾಧ್ಯಕ್ಷರು ,ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ವರ್ಗ, ಕಂದಾಯ ಇಲಾಖೆ, ಗ್ರಂಥಾಲಯ, ಸಂಜೀವಿನಿ ಒಕ್ಕೂಟ, ಆಶಾ ಕಾರ್ಯಕರ್ತೆಯರು, ವಾಹನ ಚಾಲಕ ಸಿಬ್ಬಂದಿ, ದಾದಿಯರು, ನಜಲ್ ಮಿತ್ರ, ಅಂಗನವಾಡಿ ಕಾರ್ಯಕರ್ತೆಯರು, ಇವರುಗಳನ್ನು ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ, ಖಂಡಿಗ, ಉಪಾಧ್ಯಕ್ಷೆ ಪುಷ್ಪಾವತಿ ಬರಮೇಲು, ಮಾಜಿ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಕೆ ಗೌಡ, ಪುಯಿಲ, ಉಪಾಧ್ಯಕ್ಷರಾದ ಗಂಗಾಧರ ಪೂಜಾರಿ ದoಬೆತ್ತಿಮಾರು, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಸದಸ್ಯರುಗಳಾದ ಬಾಲಕೃಷ್ಣ ಗೌಡ ಮುಗೇರಡ್ಕ, ಚೇತನ್ ಗೌಡ ಕೆಲೆಂಜಿಮಾರು, ಶಿವಣ್ಣ ಗೌಡ ಹೇವ, ಶಿವಪ್ರಸಾದ್ ಗೌಡ ಸುದೆಪ್ಪಿಲ, ಶ್ರೀಮತಿ ಸುಚಿತ್ರ ಮುರ್ತಾಜೆ, ಶ್ರೀಮತಿ ಅನಿತಾ ಕುರುಡಂಗೆ, ಶ್ರೀಮತಿ ಪವಿತ್ರ ಮುರ, ಶ್ರೀಮತಿ ವಿಮಲ ತಾರಿದಡಿ, ಶ್ರೀಮತಿ ಶಾಂತ, ಗ್ರಾಮ ಕರಣಿಕರಾದ ರಫೀಕ್ ಮುಲ್ಲಾ,ನರೇಗಾ ಯೋಜನೆಯ ಶರಣ್, ಪ್ರಾರ್ಥನಾ, ಬಂದಾರು ಅರೋಗ್ಯ ಇಲಾಖೆಯ ಸಿ ಎಚ್ ಓ ಜಗದೀಶ್, ಪಂಚಾಯತ್, ಕಂದಾಯ ಇಲಾಖೆ, ಗ್ರಂಥಾಲಯ, ಅರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು,ದಾದಿಯರು, ಸಂಜೀವಿನಿ ಒಕ್ಕೂಟ ಎಂ.ಬಿ.ಕೆ,ನಲ್ ಜಲ್ ಮಿತ್ರ, ನರೇಗಾ ಯೋಜನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಉಜಿರೆ: ಸಿಡಿಲು ಬಡಿದು ಮನೆ ವಿದ್ಯುತ್ ವಯರಿಂಗ್ ಹಾನಿ

Suddi Udaya

ಓಡೀಲು‌ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಪ್ರಯುಕ್ತ ವಿಶೇಷ ಪೂಜೆ

Suddi Udaya

ಬೆಳ್ತಂಗಡಿ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಕೃಷ್ಣ ವೇಷ ಸ್ಪರ್ಧೆ

Suddi Udaya

ಭೀಮಾ ಕೋರೆಗಾಂವ್ ವಿಜಯೋತ್ಸವದ ದಿನಾಚರಣೆ ಪ್ರಯುಕ್ತ ಸ್ವಾಭಿಮಾನಿ ದಿಗ್ವಿಜಯ ಹಾಗೂ ಬಿವಿಎಫ್ ಪದಗ್ರಹಣ

Suddi Udaya

ಭೀಕರ ಗಾಳಿ ಮಳೆ : ಹೊಸಂಗಡಿಯಲ್ಲಿ ಮನೆಗೆ ತೆಂಗಿನ ಮರ ಬಿದ್ದು ಹಾನಿ

Suddi Udaya

ಬೆದ್ರಬೆಟ್ಟು ಮರಿಯಾoಬಿಕ ಆಂ.ಮಾ. ಶಾಲೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಸ್ಪಾರ್ಕ್ -2024

Suddi Udaya
error: Content is protected !!