27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

ಕೊಕ್ಕಡ : ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆಯು ಫೆ. 18 ರಂದು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಪಾದೆ ಕಚೇರಿಯಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ಅವರು ವಹಿಸಿದರು. ಭಾರತೀಯ ಯುವ ಜೆಸಿ ವಿಭಾಗದ ಪದಗ್ರಹಣವನ್ನು ನಡೆಸಲು ನಿರ್ಧರಿಸಲಾಯಿತು. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ನಿಕಟಪೂರ್ವ ಅಧ್ಯಕ್ಷೆ ಡಾ. ಶೋಭಾ ಪಿ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಕೋಶಾಧಿಕಾರಿಗಳಾದ ಪ್ರಜ್ವಲ್ ಲೋಬೊ ಅವರು ವಾರ್ಷಿಕ ಸದಸ್ಯತ್ವ ಶುಲ್ಕದ ಮಾಹಿತಿ ನೀಡಿದರು. ಪೂರ್ವಾಧ್ಯಕ್ಷರಾದ ಸಂತೋಷ್ ಜೈನ್ ಅವರನ್ನು ಯುವ ಜೆಸಿ ವಿಭಾಗದ ನಿರ್ದೇಶಕರನ್ನಾಗಿ ಆರಿಸಲಾಯಿತು. ಇತ್ತೀಚೆಗೆ ನಿಧನರಾದ ಖ್ಯಾತ ವೈದ್ಯ ಡಾ. ಟಿ. ವಿ. ಜೋಸೆಫ್ ಅವರ ಗೌರವಾರ್ಥ ಮೌನ ಪ್ರಾರ್ಥನೆಯನ್ನು ನಡೆಸಲಾಯಿತು.

ಮಾರ್ಚ್ ತಿಂಗಳಲ್ಲಿ ವಲಯ ಉಪಾಧ್ಯಕ್ಷರ ಅಧಿಕೃತ ಭೇಟಿಗೆ ತಯಾರಿ ನಡೆಸಲಾಯಿತು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ಆಯುಷ್ ಜೈನ್ ಅವರು ವಾಚಿಸಿದರು. ವಲಯ ಉಪಾಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ, ಜಸ್ವಂತ್ ಪಿರೇರಾ, ರೇಷ್ಮಾ ಡಿ ಅಲ್ಮೇಡಾ, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ, ದಕ್ಷಾ ಜೈನ್, ವಿಕ್ಟರ್ ಸುವಾರಿಸ್, ದೀಪಾ ವಿ., ಲೇಡಿ ಜೆಸಿ ಅಧ್ಯಕ್ಷರಾದ ರೇಶ್ಮಿ ಡಿಸೋಜ, ಯುವ ಜೆಸಿ ಅಧ್ಯಕ್ಷರಾದ ಆದ್ಯಾ ಜೈನ್, ಧನುಷ್ ಕುಮಾರ್ ಜೈನ್, ಅಕ್ಷತ್ ರೈ, ನಿತ್ಯಾನಂದ ರೈ, ವಿದ್ಯೇಂದ್ರ ಅವರು ಚರ್ಚೆಯಲ್ಲಿ ಭಾಗವಹಿಸಿದರು. ಕಾರ್ಯದರ್ಶಿಗಳಾದ ಜೋಯಲ್ ಪಿರೇರಾ ಅವರು ವಂದಿಸಿದರು.

Related posts

ಮಾಣಿಲ ಮಾತೃಭೂಮಿ ಯುವ ವೇದಿಕೆ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ವಿಶೇಷ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಬಿಲ್ಲವ ಸಂಘದಿಂದ ಶಿವಗಿರಿ ಮಠಕ್ಕೆ ಧಾರ್ಮಿಕ ಪ್ರವಾಸ

Suddi Udaya

ತಾಲೂಕು ಮಟ್ಟದ ಚದುರಂಗ ಸ್ಪರ್ಧೆ: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ: ಕುಂಟಿನಿ ಮದ್ರಸದ ವಿದ್ಯಾರ್ಥಿ ಶಾಝ್ಮಿ ಎಸ್.ಜೆ.ಎಮ್ ಉಜಿರೆ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ

Suddi Udaya

ಜ.2: ಉಜಿರೆ ಪೆರ್ಲ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಮತ್ತು ಶ್ರೀ ಪಂಜುರ್ಲಿ ದೈವದ ಪ್ರತಿಷ್ಠಾ ಮಹೋತ್ಸವ ಶ್ರೀ ಲಕ್ಷ್ಮೀ ಜನಾರ್ದನ ಮತ್ತು ಶ್ರೀ ಉಮಾಮಹೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಸೆ.22-ಅ.1: ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Suddi Udaya
error: Content is protected !!