23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ವಿದ್ವತ್ ಜೆಇಇ ಸಾಧಕರಿಗೆ ಕಾಲೇಜು ವತಿಯಿಂದ ಅಭಿನಂದನೆ: 35 ವಿದ್ಯಾರ್ಥಿಗಳ ಪೈಕಿ 21 ಮಂದಿ ಶೇ.90 ಅಧಿಕ ಪರ್ಸೆಂಟೈಲ್ ಪಡೆದ ದಾಖಲೆ

ಬೆಳ್ತಂಗಡಿ: ಭಾರತೀಯ ಪ್ರತಿಷ್ಠಿತ ಸಂಸ್ಥೆಗಳಾದ ಎನ್‌ಐಟಿ ಹಾಗೂ ಐಐಐಟಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಜೆಇಇ (ಮೇನ್ಸ್)- 2026 ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ತೋರಿದ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಹಾಗೂ ಪ್ರತೀಕ್ ವಿ.ಎಸ್. ಅವರನ್ನು ವಿದ್ವತ್ ಕಾಲೇಜು ಪ್ರತಿಷ್ಠಾನದಿಂದ ಫೆ.17 ರಂದು ಗೌರವಿಸಲಾಯಿತು.

ಚಿನ್ಮಯ್ ಜಿ.ಕೆ. ಶೇ.99.6465 ಫಲಿತಾಂಶ ದಾಖಲಿಸಿದ್ದು, ಪ್ರತೀಕ್ ವಿ.ಎಸ್. ಶೇ.99.5473 ಪರ್ಸೆಂಟೈಲ್ ಪಡೆದಿರುವ ಹಿನ್ನೆಲೆ ವಿದ್ಯಾರ್ಥಿಗಳ ಸಾಧನೆಯನ್ನು ಪರಿಗಣಿಸಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಶ್ರೀ ಪ್ರಜ್ವಲ್ ರೈ ಮನೆಗೆ ತೆರಳಿ ಅಭಿನಂದಿಸಿ ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಹಾರೈಸಿದರು. ಈ ವೇಳೆ ಚಿನ್ಮಯ್ ಜಿ.ಕೆ. ಪೋಷಕರಾದ ಗಣೇಶ್ ಭಟ್, ಮಾಲಿನಿ ಹೆಗಡೆ, ಪ್ರತೀಕ್ ವಿ.ಎಸ್. ಪೋಷಕರಾದ ವಸಂತ್ ಶೆಟ್ಟಿ, ಶಾಲಿನಿ ವಿ.ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ಈ ವೇಳೆ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಗಂಗಾಧರ ಮಂಡಗಳಲೆ, ಆಡಳಿತಾಧಿಕಾರಿ ಅಶೋಕ ಕುಮಾರ್ ಶೆಟ್ಟಿ, ಪ್ರಾಂಶುಪಾಲರಾದ ಹರೀಶ್ ಕೆ.ಆರ್., ಉಪನ್ಯಾಸಕರಾದ ಪ್ರತಾಪ್ ದೊಡ್ಡಮನೆ, ರಂಗನಾಥ್ ಆರ್., ಪಿ.ಆರ್‌.ಒ ಚೈತ್ರೇಶ್ ಸಿ. ಉಪಸ್ಥಿತರಿದ್ದರು.

ಚೊಚ್ಚಲ ಪ್ರಯತ್ನದಲ್ಲಿ ಸಾಧನೆ: ವಿದ್ವತ್ ಕಾಲೇಜಿಂದ ಪ್ರಥಮ ಬಾರಿಗೆ ಜೆಇಇ ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳ ಪೈಕಿ ಚಿನ್ಮಯ್ ಜಿ.ಕೆ., ಹಾಗೂ ಪ್ರತೀಕ್ ವಿ.ಎಸ್. ಶೇ.99 ಪರ್ಸೆಂಟೈಲ್ ಪಡೆದು ರಾಜ್ಯದಲ್ಲೇ ಗರಿಷ್ಠ ಸಾಧನೆ ತೋರಿದ್ದು,ಉಳಿದಂತೆ 21 ಮಂದಿ ಶೇ.90 ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆಯುವ ಮೂಲಕ ಚೊಚ್ಚಲ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ ರಾಜ್ಯದ ಏಕೈಕ ಕಾಲೇಜೆಂಬ ಹೆಗ್ಗಳಿಕೆ ಪಾತ್ರವಾಗಿದೆ.

Related posts

ಕೊಕ್ಕಡ ಕೇಸರಿ ಟೈಗರ್ಸ್ ವತಿಯಿಂದ ನಗರ ಭಜನಾ ಸಪ್ತಾಹದ ಪ್ರಯುಕ್ತ ಪಿಲಿ- ನಲಿಕೆ

Suddi Udaya

ಬೆಳ್ತಂಗಡಿ ತಾಲೂಕು ಪಂಚಾಯತ್ ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ 134 ನೇ ಜನ್ಮದಿನಾಚರಣೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Suddi Udaya

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಆಡಳಿತ ಪಕ್ಷ ರಾಜ್ಯಪಾಲರಿಂದ ಮಾಡಿಸಿರುವ ಭಾಷಣ ಕೇವಲ ಸಾಹಿತ್ಯಿಕವಾಗಿ ರಂಜನೀಯವಾಗಿತ್ತೇ ಹೊರತು ಅಭಿವೃದ್ಧಿಯ ಚಿಂತನೆ ಇಲ್ಲದೆ ನೀರಸವಾಗಿತ್ತು: ಎಂ.ಎಲ್‌.ಸಿ ಪ್ರತಾಪಸಿಂಹ ನಾಯಕ್

Suddi Udaya

ವೇಣೂರು: ಮಜಲಡ್ಡ ನಿವಾಸಿ ಚೆನ್ನಪ್ಪ ಪೂಜಾರಿ ನಿಧನ

Suddi Udaya
error: Content is protected !!