ಬೆಳ್ತಂಗಡಿ: ಮಂಗಳೂರಿನ ನಾಟ್ಯಾರಾಧನಾ ಕಲಾ ಕೇಂದ್ರದ ನಿರ್ದೇಶಕಿ ಗುರು ವಿದುಷಿ ಸುಮಂಗಲಾ ರತ್ನಾಕರ್‌ರಾವ್ ಅವರ ವಿದ್ಯಾರ್ಥಿಗಳಾದ ಧರಿತ್ರಿ ಭಿಡೆ ಹಾಗೂ ಹಂಸಿನಿ ಭಿಡೆ ಇವರ ಭರತನಾಟ್ಯ ರಂಗಪ್ರವೇಶವು ಫೆ. 21ರಂದು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಭಿನವ ಡಾನ್ಸ್ ಕಂಪೆನಿಯ ನಿರುಪಮಾ ಮತ್ತು ರಾಜೇಂದ್ರ ಟಿ.ಡಿ, ನಾಟ್ಯಾಂಜಲಿ ಕಲಾ ಅಕಾಡಮಿ ಸುರತ್ಕಲ್‌ನ ವಿದ್ವಾನ್ ಚಂದ್ರಶೇಖರ ನಾವಡ, ಎಸ್.ಡಿ.ಎಂ. ಸೊಸೈ ಟಿಯ ಕಾರ್ಯದರ್ಶಿಗಳಾದ ಸತೀಶ್ಚಂದ್ರ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿರುವ ಶರತ್ ಕೃಷ್ಣ ಪಡ್ಡೆಟ್ನಾಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಧರಿತ್ರಿ ಮತ್ತು ಹಂಸಿನಿ ಬೆಳ್ತಂಗಡಿಯ ಕಲ್ಮಂಜ ನಿವಾಸಿ, ಸುದ್ದಿ ಉದಯ ಪತ್ರಿಕಾ ವಿತರಕರಾದ ಧನಂಜಯ ಭಿಡೆ ಹಾಗೂ ಚಿತ್ರಾ ಭಿಡೆ ದಂಪತಿಯ ಪುತ್ರಿಯರು.











