ಕುವೆಟ್ಟು: ಜೀರ್ಣೋದ್ಧಾರವಾಗುತ್ತಿರುವ ಮದ್ದಡ್ಕ ತಾಯಿ ರಕ್ತೇಶ್ವರಿ ದೈವ ಹಾಗೂ ಪಿಲಿಚಾಮುಂಡಿ ದೈವಸ್ಥಾನದ ದಾರಂದ ಮುಹೂರ್ತ ಕಾರ್ಯಕ್ರಮ ಫೆ.20 ರoದು ಅರ್ಚಕರಾದ ರಾಘವೇಂದ್ರ ಭಟ್ ಮಠ ಇವರ ವೈದಿಕ ವಿಧಿ ವಿಧಾನಗಳೊಂದಿಗೆ ಜರಗಿತು.

ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದೀಪ್ ಶೆಟ್ಟಿ ಮೂಡೈಲು, ಕಾರ್ಯದರ್ಶಿ ಗೋಪಾಲ ಶೆಟ್ಟಿ ಕೋರ್ಯಾರು, ಕೋಶಾಧಿಕಾರಿ ರಾಜ್ ಪ್ರಕಾಶ್ ಶೆಟ್ಟಿ ಪಡ್ಡೈಲು , ಮತ್ತಿತರರು ಉಪಸ್ಥಿತರಿದ್ದರು











