ಬೆಳ್ತಂಗಡಿ: ಎಮರ್ಜೆನ್ಸಿ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ದ.ಕ, ಟೀಮ್ ದೇವನಾರಿ ಇಂದಬೆಟ್ಟು ಮತ್ತು ಮನಾರುಲ್ ಹುದಾ ಯಂಗ್‌ಮೆನ್ಸ್ ಇಂದಬೆಟ್ಟು ಇದರ ಸಹಕಾರದೊಂದಿಗೆ ಮಹೂಂ೯ ಇಬ್ರಾಹಿಂ (ಕಾರ್ ಮೋನಾಕ) ಇಂದಬೆಟ್ಟು ಹಾಗೂ ಮಹೂಂ೯ ಮುಹಮ್ಮದ್ ಸಾಝಿನ್ ಬಿನ್ ಸಲೀಂ ಮುರ ಇವರ ಸ್ಮರಣಾರ್ಥ ಸ.ಹಿ.ಪ್ರಾ. ಶಾಲೆ ದೇವನಾರಿ ಯಲ್ಲಿ
ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಫೆ.15 ರಂದು ಜರುಗಿತು.
ಅಧ್ಯಕ್ಷತೆಯನ್ನು ಎಮರ್ಜೆನ್ಸಿ ಹೆಲ್ಪ್ ಲೈನ್ ಇದರ ಅಧ್ಯಕ್ಷ ಶೌಕತ್ ಅಲಿ ಇಂದಬೆಟ್ಟು ವಹಿಸಿದ್ದರು. ಇಂದಬೆಟ್ಟು ಗ್ರಾ.ಪಂ ನಿಕಟಪೂರ್ವಾಧ್ಯಕ್ಷೆ ಆಶಾಲತಾ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಎಮರ್ಜೆನ್ಸಿ ಹೆಲ್ಪ್ ಲೈನ್ ಬೆಳ್ತಂಗಡಿ ವಲಯದ ಅಧ್ಯಕ್ಷ ಶರೀಫ್ ಬೆಳಾಲು ಪ್ರಸ್ತಾವನೆಗೈದರು. ಅಶ್ರಫ್ ಚಾರ್ಮಾಡಿ ಸಂಘಟನೆಯ ಪರಿಚಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಖಿಲ್‌ರ್ ಜುಮಾ ಮಸೀದಿ ಬೆಳ್ತಂಗಡಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಎಂ.ಜೆ.ಎಂ ಇಂದಬೆಟ್ಟು ಖತೀಬ್ ಸತ್ತಾರ್ ಸಖಾಫಿ, ಸ್ಟಾರ್‌ಲೈನ್ ಶಿಕ್ಷಣ ಸಂಸ್ಥೆಯ ಚೇರ್ಮೆನ್ ಹಾಜಿ ಸಯ್ಯಿದ್ ಹಬೀಬ್ ಸಾಹೇಬ್, ಆರೋಗ್ಯ ಕ್ಲಿನಿಕ್ ನಾವೂರಿನ
ಡಾ. ಪ್ರದೀಪ್ ಆಟಿಕುಕ್ಕೆ, ಇಂದಬೆಟ್ಟು ಮಸ್ಜಿದ್ ಅಧ್ಯಕ್ಷ ಅಬ್ದುಲ್ ಮುತ್ತಲಿಬ್, ಮುರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಎನ್.ಕೆ ಹಸೈನಾರ್, ಎಸ್ಸೆಸ್ಸೆಫ್ ಇಂದಬೆಟ್ಟು ಶಾಖೆ ಅಧ್ಯಕ್ಷ ಶಾ ಕಮಾಲ್, ಇಂದಬೆಟ್ಟು ಸರಕಾರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಟಿ, ನಾವೂರು ಶಾಲಾ ಸಹಶಿಕ್ಷಕಿ ಶುಭ ಎಂ, ಆನ್ಸಾರಿಯಾ ಹೆಲ್ಸ್ ಲೈನ್ ಮುರ-ನಾವೂರು ಉಪಾಧ್ಯಕ್ಷ ಅಬ್ಬಾಸ್ ಸಖಾಫಿ, ಸಮಾಜ ಸೇವಕ ರೋಷನ್, ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಚೆಲ್ಲಪಾಂಡ್ಯ, ಡಾ. ಝೆನಿಕಾ ಮತ್ತು ಡಾ. ಆಕೃತಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಉರ್ದು ಭಾಷಣದಲ್ಲಿ ಸತತ ಮೂರು ಬಾರಿ ರಾಷ್ಟ್ರಮಟ್ಟದ ಸಾಧನೆ ಮೆರೆದ ಯುವ ಪ್ರತಿಭೆ ಸಯ್ಯಿದ್ ಉವೈಸ್ ಮಂಜೊಟ್ಟಿ, ದೇಶ ಸೇವೆ ಮಾಡಿ ನಿವೃತ್ತರಾದ ಮಾಜಿ ಯೋಧ ಮುಹಮ್ಮದ್ ರಫಿ ಇವರನ್ನು ಸನ್ಮಾನಿಸಲಾಯಿತು.
ಎಮರ್ಜೆನ್ಸಿ ಹೆಲ್ಪ್ ಲೈನ್ ಬೆಳ್ತಂಗಡಿ ವಲಯದ ಪ್ರ. ಕಾರ್ಯದರ್ಶಿ ಝಮೀರ್ ಸಅದಿ ಸ್ವಾಗತಿಸಿದರು.
ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಸಲೀಂ ಮುರ ವಂದಿಸಿದರು.











