September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಎಕ್ಸೆಲ್ ಕಾಲೇಜಿನ ಜೆಇಇ ಸಾಧಕರಿಗೆ ಗೌರವಾರ್ಪಣೆ, ನಗದು ಬಹುಮಾನ ಹಸ್ತಾಂತರ

ಬೆಳ್ತಂಗಡಿ: ರಾಷ್ಟ್ರ ಮಟ್ಟದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್ ಐಐಟಿ, ಐಐಐಟಿ ಪ್ರವೇಶಾತಿಗಾಗಿ ನಡೆಯುವ ಜೆಇಇ ಮೈನ್ಸ್ ಫೇಸ್ ಒನ್ ಫಲಿತಾಂಶದಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ

ಮೌರ್ಯ ವೈ ಡಿ – ಒಟ್ಟು 99.6691 ಪರ್ಸೆಂಟೈಲ್ ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅಗ್ರಸ್ಥಾನಿಯಾಗಿದ್ದಾರೆ.ಸ್ವಸ್ತಿಕ್ ಎಂ ಜೈನ್ – 99.4965,ಕೆಮಿಸ್ಟ್ರಿ :991497,ಫಿಸಿಕ್ಸ್: 99.6651,ಮ್ಯಾಥ್ಸ್ : 98.2471, ಅಕ್ಷಯ್ ಎ – 99.3081,ಕೆಮಿಸ್ಟ್ರಿ :97.6736,ಫಿಸಿಕ್ಸ್ : 99.8666,ಮ್ಯಾಥ್ಸ್ : 93.8141, ಪರ್ಸೆಂಟೈಲ್ ಪಡೆದು ಕೊಂಡು ದೊಡ್ಡ ಮಟ್ಟದ ಸಾಧನೆ ಮಾಡಿದ್ದು ಇವರಿಗೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರು ತಲಾ 1.00 ಲಕ್ಷ ನಗದು ಬಹುಮಾನ ನೀಡಿ ಗೌರವಿಸಿದರು.

ಅಭಿನವ ಕೆ ಮಯ್ಯ 98.6487,ತೇಜಲ್ ವಿ ವಾಂಟಕರ್ – 98.5584, ಸಮ್ಯಕ್ ವಿನಯ್ – 98.5468,ಶಮಿತ್ ಗೌಡ ಎ ಎಸ್ 98.4138,ಕೆ ಕೆ ಸಾರ್ವಿಕಾ – 98.3106, ಶಶಾಂಕ್ ಗೌಡ ಆರ್ – 98.1685, ಯಶಸ್ ಗೌಡ ಎನ್ – 98.1685,
ಯಶಸ್ ಜಿ ಎಸ್ – 98.1172,ಗಗನ್ ದೀಪ್ 97.99,ಹರ್ಷಿತ್ ಪಿ ಗೌಡ 97.76,ಉಲ್ಲಾಸ್ ಎಂ.ವಿ 97.61,ಲೋಕೇಶ್ ಶೆಟ್ಟಿ 97.14 ಪರ್ಸಂಟೈಲ್ ಪಡೆದುಕೊಂಡಿದ್ದಾರೆ. ಇವರಿಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.ಹಾಗೂ ಸಾಧನೆ ಮಾಡಿದ ಅನೇಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿ ಎಕ್ಸೆಲ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುವ ಕೇಂದ್ರವಾಗಿದೆ.ಕಾಲೇಜಿನಲ್ಲಿ ನಿರಂತರವಾಗಿ ತರಗತಿ,ಕೋಚಿಂಗ್ ,ಸ್ಟಡಿ ಅವರ್,ಟೆಸ್ಟ್,ಆನ್ ಲೈನ್ ಟೆಸ್ಟಗಳನ್ನು ನಡೆಸಿದ ಕಾರಣ ಅತ್ಯುತ್ತಮ ಫಲಿತಾಂಶ ಬಂದಿದೆ.
ಹತ್ತನೆಯ ತರಗತಿಯಲ್ಲಿ ಸಾಮಾನ್ಯ ಅಂಕ ಪಡೆದುಕೊಂಡ ಕೆಲವು ವಿದ್ಯಾರ್ಥಿಗಳು ಕೂಡಾ ಎಕ್ಸೆಲ್ ನಲ್ಲಿ ಓದಿ, ಜೆಇಇಯಲ್ಲಿ ಅತ್ಯುತ್ತಮ ಅಂಕ ಪಡೆದುಕೊಂಡಿರುವುದು ವಿಶೇಷ. ಸಾಧಿಸುವ ಛಲ, ನಿರಂತರ ಅಭ್ಯಾಸ, ಪರಿಣಿತ ಉಪನ್ಯಾಸಕರ ಮಾರ್ಗದರ್ಶನ, ನಿಯಮಿತವಾಗಿ ಬರೆಯುವ ಅಣಕು ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜಯಿಗಳನ್ನಾಗಿಸುತ್ತದೆ ಎನ್ನುವ ಬಲ್ಲವರ ಅಭಿಮತಕ್ಕೆ ಎಕ್ಸೆಲ್ ವಿದ್ಯಾರ್ಥಿಗಳು ತಾಜಾ ಉದಾಹರಣೆಯಾಗಿದ್ದಾರೆ‌ ಎಂದರು.

ವೇದಿಕೆಯಲ್ಲಿ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ,ಡಾ.ಪ್ರಜ್ವಲ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಬೋಧಕ ಹಾಗೂ ಭೋದಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು ಸಹಕರಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಗೆ ಅಯೋದ್ಯೆ ಶ್ರೀರಾಮ ಮಂದಿರದ ಆಮಂತ್ರಣ ಪತ್ರಿಕೆ ಹಸ್ತಾಂತರ

Suddi Udaya

ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆ: ಉಜಿರೆಯ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಶರತ್ ಮಡಿವಾಳ ಸ್ಮಾರಕಕ್ಕೆ ಪುಷ್ಪ ನಮನ

Suddi Udaya

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಬಂದಾರು ಗ್ರಾಮದ ಖಂಡಿಗ ನಿವಾಸಿ ವಾಸಪ್ಪ ಗೌಡರ ಶಸ್ತ್ರಚಿಕಿತ್ಸೆಗೆ ನೆರವಾಗಿ

Suddi Udaya

ಭೀಕರ ಗಾಳಿ ಮಳೆ: ಕುವೆಟ್ಟು ವರಕಬೆ ಬಳಿ ರಸ್ತೆಗೆ ಬಿದ್ದ ಮರ: ಸಂಚಾರಕ್ಕೆ ಅಡಚಣೆ

Suddi Udaya
error: Content is protected !!