September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಿಸಿಲ ಝಳಕ್ಕೆ ತಂಪೆರೆದ ವರುಣ


ಬೆಳ್ತಂಗಡಿ: ಹಗಲಿನಲ್ಲಿ ಸೂರ್ಯನ ತಾಪಕ್ಕೆ ಕಾದಿದ್ದ ಭೂಮಿಗೆ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆ ಫೆ.21ರಂದು ವರುಣನ ಆಗಮನದಿಂದ ತಂಪಿನ ಸ್ಪರ್ಶ ನೀಡಿತು.

ನಾರಾವಿ, ಕಾಶಿಪಟ್ಣ, ಕಡಿರುದ್ಯಾವರ, ನಡ, ಕಕ್ಕಿಂಜೆ, ನೆರಿಯ, ನಿಡ್ಲೆ ,ಅರಸಿನಮಕ್ಕಿ, ಚಾರ್ಮಾಡಿಯಲ್ಲಿ ಗುಡುಗು ಸಹಿತ ಮಳೆ ಆಗಿದೆ ,ಮಿತ್ತಬಾಗಿಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಾವು ಮತ್ತು ಕಾಜೂರು ಧರ್ಮಸ್ಥಳ, ಬಳಂಜ ಪರಿಸರದಲ್ಲಿ ತುಂತುರು ಸಾಧರಣ ಮಳೆಯಾಗಿದೆ. ಗುರುವಾಯನಕೆರೆ, ಮಡಂತ್ಯಾರು, ಬೆಳ್ತಂಗಡಿ ಸಹಿತ ನಾನಾ ಭಾಗದಲ್ಲಿ ಗುಡುಗು ಸಹಿತ ಮೋಡ ಕವಿದ ವಾತವಾರಣವಿದೆ. ಮನೆ ಅಂಗಳದಲ್ಲಿ ಒಣಗಲು ಹಾಕಿದ ಅಡಕೆಗಳನ್ನು ರಭರಭಸನೆ ತುಂಬಿಸುವ ದೃಶ್ಯಗಳು ಕಂಡು ಬಂದವು.

ಕಕ್ಕಿಂಜೆ ಬಸ್ತಿ ಸಮಿಪ ಗಾಳಿ ಮಳೆಗೆ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಬಿಸಿಲ ಝಳಕ್ಕೆ ವರುಣ ತಂಪೆರೆದಿದೆ.

Related posts

ಉಜಿರೆ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ

Suddi Udaya

ಬಳಂಜ: ಬೊಳ್ಳಾಜೆ- ಡೆಂಜೋಲಿ ರಸ್ತೆ ಮದ್ಯೆ ವಿದ್ಯುತ್ ತಂತಿ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿದ ಸಾರ್ವಜನಿಕರು: ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಬಳಂಜ ಗ್ರಾ‌.ಪಂ ಹಾಗೂ ಅರಣ್ಯ ಇಲಾಖೆಗೆ ಮನವಿ

Suddi Udaya

ಉಜಿರೆಯ ಮೂರು ಅಂಗಡಿಗಳಿಗೆ ಕನ್ನ ಶಟ‌ರ್ ಬೀಗ ಮುರಿದು ನಗದು ಕಳ್ಳತನ

Suddi Udaya

ಕನ್ಯಾಡಿ: ನೇರೋಳ್ ಪಲ್ಕೆ ಕೇಸರಿ ಗೆಳೆಯರ ಬಳಗದಿಂದ 11ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

Suddi Udaya

ಬಹುನಿರೀಕ್ಷಿತ ರಾನಿ ಚಲನಚಿತ್ರದ ನಾಯಕ ನಟ ಗಂಭೀರ ಗಾಯ: ಕಾರ್ಯಕಾರಿ ನಿರ್ಮಾಪಕ ಕೊಕ್ರಾಡಿಯ ಗಿರೀಶ್ ಹೆಗ್ಡೆ ಅದೃಷ್ಟವಶಾತ್ ಪಾರು

Suddi Udaya

ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ರವರ 17ನೇ ವಷ೯ದ ಪಟ್ಟಾಭಿಷೇಕ ವರ್ಧಂತಿ

Suddi Udaya
error: Content is protected !!