37.9 C
ಪುತ್ತೂರು, ಬೆಳ್ತಂಗಡಿ
March 6, 2026
ಧಾರ್ಮಿಕ

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ದೈವಗಳಿಗೆ ಪಂಚಪರ್ವ- ಕೋಟಿ ಚೆನ್ನಯರ ದರುಶನ ಸೇವೆ

ಮುಂಡೂರು: ಮುಂಡೂರು ಗ್ರಾಮದ ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ಫೆ.21ರಂದು ಗಣಪತಿ ಹೋಮ, ದೈವಗಳಿಗೆ ಪಂಚಪರ್ವ, ಶ್ರೀ ಸತ್ಯನಾರಾಯಣ ಪೂಜೆ ಸಂಜೆ ಬ್ರಹ್ಮಬೈದರ್ಲು ಕೋಟಿ ಚೆನ್ನಯರ ದರುಶನ ಸೇವೆ ನೆರವೇರಿತು.
ಫೆ.21 ಶನಿವಾರ ಬೆಳಿಗ್ಗೆ 8 ಕ್ಕೆ ಪಾಪಿನಡೆ ಗುತ್ತಿನ ಕುಟುಂಬಸ್ಥರ ಧರ್ಮ ಚಾವಡಿಯಲ್ಲಿ ಗಣಹೋಮ, ಮೂಲನಾಗ ಬನದಲ್ಲಿ ನಾಗಬ್ರಹ್ಮದೇವರಿಗೆ ತನು ತಂಬಿಲ ಸೇವೆ, ಧರ್ಮ ದೈವಗಳಿಗೆ ಪಂಚಪರ್ವ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಮುಡಿಪು ಶುದ್ಧಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಗಂಟೆ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಕಾಶಿ ಮಠ ವಾರಣಾಸಿ ಇವರ ಕ್ಷೇತ್ರಕ್ಕೆ ಆಗಮಿಸಿದ್ದು, ಅವರನ್ನು ಭವ್ಯವಾದ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
ಬಳಿಕ ಬ್ರಹ್ಮಬೈದೆರ್ಲು ಕೋಟಿ ಚೆನ್ನಯರ ದರುಶನ ಸೇವೆ, ಪ್ರಸಾದ ವಿತರಣೆ ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ ನಡೆಯಿತು. ಫೆ.22 ಆದಿತ್ಯವಾರ ಬೆಳಿಗ್ಗೆ ಗಂಟೆ 10 ರಿಂದ ದೈವಗಳಿಗೆ ಆಗೇಲು ಸೇವೆ ಸಂಜೆ ಗಂಟೆ 6 ಕ್ಕೆ ಕುಪ್ಪೆಟ್ಟಿ ದೈವಗಳಿಗೆ ಪಂಚಪರ್ವ ಆಗೇಲು ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಮಂಗಳಗಿರಿಯ ಧರ್ಮದರ್ಶಿ ಹಾಗೂ ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಇದರ ಅಧ್ಯಕ್ಷ ರಾಜೀವ, ಉಪಾಧ್ಯಕ್ಷ ಡಾ.ಚಂದ್ರಾವತಿ ನೂಜೇಲು, ಕಾರ್ಯದರ್ಶಿ ಚೇತನ್ ಗೇರುಕಟ್ಟೆ, ಕೋಶಾಧಿಕಾರಿ ಬ್ರಿಜೇಶ್ ಜೆ. ಕೋಟ್ಯಾನ್, ಜತೆ ಕಾರ್ಯದರ್ಶಿ ಜಗನ್ನಾಥ ಅಂತ್ರಂಗೆ ಗೌರವ ಸಲಹೆಗಾರರಾದ ಆನಂದ ಸುವರ್ಣ ಮಂಗಳೂರು, ಜಗನ್ನಾಥ ಪಾಪಿನಡೆ, ನಿತಿನ್ ಗೇರುಕಟ್ಟೆ, ಜಗನ್ನಾಥ ಪೂಜಾಫಲ, ಶಶಿಧರ ಬೆಳ್ಳಾರಿ, ಶುಭಕರ ಸುಳ್ಳೋಡಿ, ಹೇಮಾವತಿ ಕೊಡಿಬಾಳೆ, ಅರುಣ್ ಕೆಳಗಿನಬೆಟ್ಟು, ಸುಕೇಶ್ ಹಿಬರೋಡಿ, ಸಂತೋಷ್ ಕುಮಾರ್ ಮೇಗಿನ ಕಿನಿಂಜೆ, ಉಮೇಶ್ ನಾವರ, ಹರ್ಷಿತ್ ಕರಂಬಾರು,ನೋಣಯ್ಯ ಹಿಬರೋಡಿ, ಜಯಾನಂದ ಕುಮಟ, ನವೀನ ಹಿಮರಡ್ಡ, ಸುಧಾಕರ ಮಾಡಾವು
ಪುನೀತ್ ಶಿರ್ಲಾಲು, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು, ಗಗನ್ ಮಡಿಕೇರಿ, ಕಾರ್ತಿಕ್ ಮಂಗಳೂರು, ಕಶ್ಯಪ್ ಕುದ್ರೋಳಿ, ಸುದೀಪ್ ರಾಜ್ ನೂಜೇಲು, ಶ್ರೀಕಾಂತ್ ಕಡಿಗೇರುಬೆಟ್ಟು, ಚಿದಾನಂದ ಮಾನರೊಟ್ಟು, ಬಾಬು ಪೂಜಾರಿ ಪರನೀರು
, ಸೋಮಪ್ಪ ಪೂಜಾರಿ ಮಾನ್ಯರಬೆಟ್ಟು ಹಾಗೂ ಮುಂಡೂರು, ಮೇಲಂತಬೆಟ್ಟು, ಸವಣಾಲು, ಕರಂಬಾರು ಗುತ್ತಿನ ಮನೆಯವರು ಬರ್ಕೆಯವರು, ಗ್ರಾಮಸ್ಥರು ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Related posts

ಅರಸಿನಮಕ್ಕಿ: ಅರಿಕೇಗುಡ್ಡೆ ಶ್ರೀ ವನದುರ್ಗ ಕ್ಷೇತ್ರದಲ್ಲಿ ವಿಷ್ಣು ಸಹಸ್ರನಾಮ ಪಠಣ ಪ್ರಾರಂಭ

Suddi Udaya

ಅಳದಂಗಡಿ ಶ್ರೀ‌ ಸತ್ಯಸಾರಮುಪ್ಪಣ್ಯ ದೈವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ

Suddi Udaya

ಜೂ.11: ಅಳದಂಗಡಿ ಸತ್ಯದೇವತೆ ದೈವಸ್ಥಾನದ ವತಿಯಿಂದ ಉಚಿತ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಕಲಿಕಾ ಆಟಿಕೆಗಳ ಹಸ್ತಾಂತರ ಕಾರ್ಯಕ್ರಮ

Suddi Udaya

ಕೊಯ್ಯೂರಿನ ಮಾವಿನಕಟ್ಟೆಯಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya
error: Content is protected !!