September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡಿಗಲ್ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿ: ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

ಉಜಿರೆ: ಕಲ್ಮಂಜ ಗ್ರಾಮದ ನಿಡಿಗಲ್ ಅಂಗನವಾಡಿ ಕೇಂದ್ರದ ರೂ.17ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡ ಕಾಮಗಾರಿಯ ಶಿಲಾನ್ಯಾಸವನ್ನು ಶಾಸಕ ಹರೀಶ್ ಪೂಂಜರವರು ಫೆ.23ರಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ, ಕಾರ್ಯದರ್ಶಿ ಸರೋಜಿನಿ, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜನಾರ್ದನ ಕೆಬಿ, ಇಂಜಿನಿಯರ್ ಸಂದೀಪ್ ಶೆಟ್ಟಿ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಗುತ್ತಿಗೆದಾರರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಪಂಚಾಯತ್ ಮಾಜಿ ಸದಸ್ಯರುಗಳು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಶಶಿಧರ್ ಕಲ್ಮಂಜ, ಕಲ್ಮಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಧರ್, ಗ್ರಾಮಸ್ಥರಾದ ಶ್ರೀಧರ್ ಎಂ ಪಿಲಾತಬೆಟ್ಟು, ಹರೀಶ್ ದೇವಾಡಿಗ ನಿಡಿಗಲ್, ಸತ್ಯನಾರಾಯಣ ಭಜನಾ ಮಂಡಳಿಯ ಸಂತೋಷ್ ಹೆಗ್ಡೆ, ಹಿರಿಯರಾದ ಮೋನಪ್ಪ ಗೌಡ, ಮೋನಪ್ಪ ಟಿ, ಧರ್ಮಪ್ಪ, ಕಿರಣ್ ಟಿ, ಸಚಿನ್, ಪೂರ್ಣಿಮಾ, ರಾಘವೇಂದ್ರ, ಹರೀಶ್, ಸುಧೀರ್, ಭದ್ರಯ್ಯ, ಪಂಚಾಯತ್ ಸಿಬ್ಬಂದಿ ವರ್ಗದವರು, ಅಂಗನವಾಡಿ ಸಹಾಯಕಿ ಲಕ್ಷ್ಮೀ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ನಳಿನಾಕ್ಷಿ ಸ್ವಾಗತಿಸಿ, ವಂದಿಸಿದರು.

Related posts

ಪಡಂಗಡಿ- ಸೋಣಂದೂರು- ಮಾಲಾಡಿ ಬಿಜೆಪಿ ಗ್ರಾಮ ಸಮಿತಿಯಿಂದ ನಡೆದಗರ್ಡಾಡಿ-ಸೋಣಂದೂರು – ಮಾಲಾಡಿ ಕೊಲ್ಪೆದಬೈಲು ಸಂಪರ್ಕ ರಸ್ತೆ ಸ್ವಚ್ಛತಾ ಕಾರ್ಯದಲ್ಲಿ ಜೊತೆಗೂಡಿ ನಡೆಸಲಾದ ಶ್ರಮದಾನದಲ್ಲಿ ಶಾಸಕ ಹರೀಶ್ ಪೂಂಜ

Suddi Udaya

ನಿಡಿಗಲ್ ನುಸ್ರತುಲ್ ಇಸ್ಲಾಂ ಯಂಗ್ ಮೆನ್ಸ್ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ‘ಸಂಪನ್ನಮ್–2026’ ಬೀಳ್ಕೊಡುಗೆ ಸಮಾರಂಭ

Suddi Udaya

ಪಣಕಜೆ ಬಳಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ವೇಣೂರು: ‘ಮಿನ್ಹಾಜುಲ್ ಹುದಾ’ ವತಿಯಿಂದ ಉಚಿತ ವಿವಾಹ

Suddi Udaya

ಮಾ.27: ಮುಳಿಯದಲ್ಲಿ ಡೈಮಂಡ್ ಫೆಸ್ಟ್-50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್

Suddi Udaya
error: Content is protected !!