22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

2024-25 ನೇ ಸಾಲಿನ ಬೆಳೆ ವಿಮೆಯನ್ನು ಕೃಷಿಕರಿಗೆ ನೀಡುವಂತೆ ಆಗ್ರಹಿಸಿ ಕೊಕ್ಕಡ ಕೃಷಿಕರಿಂದ ಬೆಂಗಳೂರು ಟಾಟಾ ಎಐಜಿ ಜನರಲ್ ವಿಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ

ಬೆಳ್ತಂಗಡಿ: 2024 – 25 ನೇ ಸಾಲಿನ ಫಸಲು ಭೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆಯನ್ನು ಕೃಷಿಕರಿಗೆ ನೀಡುವಂತೆ ಆಗ್ರಹಿಸಿ ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ. ರವರ ಮೂಲಕ ಬೆಂಗಳೂರು ಟಾಟಾ ಎಐಜಿ ಜನರಲ್ ವಿಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಕೊಕ್ಕಡ ಗ್ರಾಮದ ಕೃಷಿಕರಿಂದ ಫೆ.23ರಂದು ಮನವಿ ನೀಡಲಾಯಿತು.

ಕೊಕ್ಕಡ ಗ್ರಾಮದ ಕೃಷಿಕರು ಕೊಕ್ಕಡ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಮೂಲಕ ಟಾಟಾ ಐಜಿ ಎಂಬ ಸಂಸ್ಥೆಯಲ್ಲಿ ಬೆಳೆ ವಿಮೆ ಹಣವನ್ನು ಪಾವತಿಸಿದ್ದು 2025 ನೇ ವರ್ಷ ವಿಪರೀತ ಮಳೆಯಿಂದಾಗಿ ಅಪಾರ ಪ್ರಮಾಣದ ಕೃಷಿ ಹಾನಿಯಾಗಿದ್ದು, ಸೆಪ್ಟೆಂಬರ್/ ಅಕ್ಟೋಬರ್ ನಲ್ಲಿ ಬರಬೇಕಾಗಿದ್ದ ವಿಮಾ ಹಣ ಇನ್ನೂ ಕೂಡ ಬಂದಿರುವುದಿಲ್ಲ. ರೈತರು ತಮ್ಮ ಸಾಲ ಮರುಪಾವತಿಗಾಗಿ ಈ ಹಣವನ್ನು ನಂಬಿದ್ದು ಬೆಳೆ ವಿಮೆ ಬಾರದಿರುವುದರಿಂದ ಕೃಷಿಕರಿಗೆ ಆತ್ಮಹತ್ಯೆಯೇ ದಾರಿಯಂತಾಗಿದೆ. ತಾಲೂಕು ಹಂತದ ವಿಮಾ ಅಧಿಕಾರಿಗಳಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸರ್ಕಾರ ಬೆಳೆವಿಮೆ ಹಣವನ್ನು ತಡೆ ಹಿಡಿದಿದೆ ಎಂದು ಹೇಳುತ್ತಾರೆ. ಕೂಡಲೇ ಈ ಕುರಿತು ತಾವುಗಳು ಸೂಕ್ತ ಗಮನಹರಿಸಿ ಒಂದು ವಾರದೊಳಗೆ ಕೊಕ್ಕಡ ಗ್ರಾಮದ ಎಲ್ಲಾ ಕೃಷಿಕರ ಬೆಳೆವಿಮೆ ಯನ್ನು ನೀಡುವಂತೆ ಹಾಗೂ ಒಂದು ವೇಳೆ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮಾ.8 ರಂದು ಕೊಕ್ಕಡದಿಂದ ಹಾದು ಹೋಗುವ ಧರ್ಮಸ್ಥಳ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸ್ವಯಂ ಪ್ರೇರಿತವಾಗಿ ರಸ್ತೆ ತಡೆ ನಡೆಸಲಿದ್ದೇವೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

Related posts

ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಸಭಾ ಇದರ ಶ್ರೀ ವಿಶ್ವಕರ್ಮ ಯಜ್ಞ ಮತ್ತು ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಿಧನ

Suddi Udaya

ಬೆಳ್ತಂಗಡಿಯಲ್ಲಿ ಶ್ರೀ ಪಾರಿಜಾತ ರಿಯಲ್ ಎಸ್ಟೇಟ್ ಶುಭಾರಂಭ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾಗಿ ರಂಜಿತ್ ಹೆಚ್ ಡಿ ಬಳಂಜ

Suddi Udaya

ಕಲ್ಮಂಜ ಹಾಗೂ ಮುಂಡಾಜೆ ಗ್ರಾಮದಲ್ಲಿ ಗುಡ್ಡ ಕುಸಿದು ರಸ್ತೆಗೆ ಹಾನಿ

Suddi Udaya

ಆ.4: ಬೆಳ್ತಂಗಡಿಯಲ್ಲಿ ಆಧಾರ್‌ ನೋಂದಣಿ ಮತ್ತು ತಿದ್ದುಪಡಿ ಶಿಬಿರ

Suddi Udaya
error: Content is protected !!