32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ಹಾಗೂ ಚಿಂತನಾ ದಿನಾಚರಣೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ಮಂಜುನಾಥ ದಳದ ಕಬ್ಸ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಸಂಸ್ಥಾಪಕರ ದಿನಾಚರಣೆ ಹಾಗೂ ಚಿಂತನಾ ದಿನಾಚರಣೆಯನ್ನು ಆಚರಿಸಲಾಯಿತು. ಸರ್ವಧರ್ಮ ಪ್ರಾರ್ಥನೆಯನ್ನು ದಳದ ವತಿಯಿಂದ ಹಮ್ಮಿಕೊಳ್ಳಲಾಯಿತು.

ಬುಲ್ ಬುಲ್ ವಿದ್ಯಾರ್ಥಿ ಧಾತ್ರಿ ಸಂಸ್ಥಾಪಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಅಲ್ಲದೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಪ್ರಮೀಳಾ ಪೂಜಾರಿ ದಿನದ ಮಹತ್ವ ಹಾಗೂ ಸ್ಕೌಟ್ ಗೈಡ್ಸ್ ನ ಉಗಮ ಹೇಗಾಯಿತು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಬ್ ಬುಲ್ ಬುಲ್, ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಬೆಂಕಿ ಇಲ್ಲದ ಅಡುಗೆಯನ್ನು ತಯಾರಿಸಿದರು. ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಪ್ರಮೀಳಾ ಪೂಜಾರಿ ಸಂಘಟಿಸಿದರು.
ಸ್ಕೌಟ್ ಗೈಡ್ ಶಿಕ್ಷಕರಾದ ಕಾರುಣ್ಯ, ಮಂಜುನಾಥ್, ರಮ್ಯಾ ಬಿ ಎಸ್, ನೀತಾ ಕೆ ಎಸ್, ಸೌಮ್ಯ ಪಿ, ಪುಷ್ಪಲತಾ, ಮೋಹಿನಿ, ಜಯಲಕ್ಷ್ಮಿ, ಗೀತ ಪಿ, ಅಮಿತ ಸಹಕರಿಸಿದರು. ಶಾಲಾ ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Related posts

ಸೆ.6-7-8 : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ತಾಲೂಕು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ 27ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ

Suddi Udaya

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಇಗ್ನೈಟ್ ವಿಜ್ಞಾನ ವಸ್ತು ಪ್ರದರ್ಶನ

Suddi Udaya

ನಡ – ಕನ್ಯಾಡಿ ಶಕ್ತಿ ಕೇಂದ್ರ ಕಾರ್ಯಾಗಾರ

Suddi Udaya

ಮೇಲಂತಬೆಟ್ಟು: ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ವರ್ಷಾವಧಿ ಜಾತ್ರೆ

Suddi Udaya

ಶಿರ್ಲಾಲು: ವಿದ್ಯುತ್ ಅವಘಡದಿಂದ ಹಿತ್ತಿಲು ಪರಿಸರದಲ್ಲಿ ಬೆಂಕಿ

Suddi Udaya

ಕಲ್ಮಂಜ ಗ್ರಾ.ಪಂ. ನಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya
error: Content is protected !!