ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.27: ವೇಣೂರು ಬಜಿರೆಯಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆಗಾಗಿ ಜಾಗೃತಿ ಸಭೆ

ಬೆಳ್ತಂಗಡಿ : ಪ್ರಸ್ತುತ ಹಿಂದೂ ಧರ್ಮದ ಮೇಲಾಗುತ್ತಿರುವ ಆಘಾತಗಳನ್ನು ತಡೆಯಲು ಮತ್ತು ಹಿಂದೂಗಳನ್ನು ಸಂಘಟಿಸಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಯನ್ನು ಆಯೋಜಿಸಲಾಗಿದೆ. ಈ ಸಭೆಯು ಬತ್ತಾರು ಬಜಿರೆಯ ಶ್ರೀ ವಿಶ್ವೇಶ್ವರ ಭಜನಾ ಮಂದಿರದ ವಠಾರದಲ್ಲಿ ಫೆ. 27, ರಂದು ಬೆಳಿಗ್ಗೆ 10:00 ಗಂಟೆಗೆ ಜರುಗಲಿದೆ.

ಕೇವಲ 65 ಲಕ್ಷ ಜನಸಂಖ್ಯೆ ಇರುವ ಇಸ್ರೇಲ್ ‘ಯಹೂದಿ ರಾಷ್ಟ್ರ’ವಾಗಲು ಸಾಧ್ಯವಿರುವಾಗ, 100 ಕೋಟಿ ಹಿಂದೂಗಳಿರುವ ಭಾರತವನ್ನು ಆದರ್ಶ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು ಪ್ರತಿಯೊಬ್ಬ ಹಿಂದೂವೂ ಜಾಗೃತಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಮಿತಿಯು ಈ ಮೂಲಕ ಕರೆ ನೀಡಿದೆ.

ದೇಶದಲ್ಲಿ ಹೆಚ್ಚುತ್ತಿರುವ ಗೋಹತ್ಯೆ, ಮತಾಂತರ, ಲವ್ ಜಿಹಾದ್ ಮತ್ತು ವಕ್ಸ್ ಕಾನೂನಿನಿಂದ ದೇವಸ್ಥಾನ ಹಾಗೂ ಹಿಂದೂಗಳ ಭೂಮಿಗೆ ಉಂಟಾಗುತ್ತಿರುವ ಆಪತ್ತುಗಳ ವಿರುದ್ಧ ಈ ಸಭೆಯಲ್ಲಿ ಧ್ವನಿ ಎತ್ತಲಾಗುವುದು. ಹಿಂದೂಗಳಿಗೆ ನ್ಯಾಯ ಸಿಗಲು ಮತ್ತು ದೇವಸ್ಥಾನಗಳ ಸಂಪತ್ತು ಹಿಂದೂ ಧರ್ಮ ಕಾರ್ಯಕ್ಕೆ ಬಳಕೆಯಾಗಲು ‘ಹಿಂದೂ ರಾಷ್ಟ್ರ’ವೇ ಏಕೈಕ ಪರ್ಯಾಯವಾಗಿದೆ. ಸ್ವಾತಂತ್ರ್ಯ ಪೂರ್ವದ ಹಿಂದೂ ರಾಷ್ಟ್ರವನ್ನು ಪುನಃ ಸ್ಥಾಪಿಸುವ ದಿಶೆಯಲ್ಲಿ, ಪ್ರತಿಯೊಬ್ಬ ಧರ್ಮಾಭಿಮಾನಿ ಹಿಂದೂಗಳು ಈ ಸಭೆಯಲ್ಲಿ ಉಪಸ್ಥಿತರಿರುವಂತೆ ತಿಳಿಸಲಾಗಿದೆ.

Related posts

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿ ಕಾಲಾವಕಾಶ ವಿಸ್ತರಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Suddi Udaya

ಎ.15: ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದೇವಿ ಮಹಿಳಾ ಕೇಂದ್ರದ 25 ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮ: ಏಕಾಹ ಭಜನಾ ಕಾರ್ಯಕ್ರಮ ಮತ್ತು 45 ಭಜನಾ ತಂಡಗಳಿಂದ ಭಜನಾ ಕಮ್ಮಟೋತ್ಸವ, ಸಾಧಕರಿಗೆ ಸನ್ಮಾನ

Suddi Udaya

ಮಾವಿನಕಟ್ಟೆ ಮೋನಪ್ಪ ಶೆಟ್ಟಿ ನಿಧನ

Suddi Udaya

ಮತದಾರರ ಪಟ್ಟಿ ಮ್ಯಾಪಿಂಗ್ ಮಾಡಿಸಿ-ಜಿಲ್ಲಾ ಚುನಾವಣಾಧಿಕಾರಿ

Suddi Udaya

ಎಸ್ ಡಿ ಎಂ ಶಿಕ್ಷಣ ಸಂಸ್ಥೆಯಿಂದ ರೂ. 2.50 ಕೋಟಿ ವಿದ್ಯಾರ್ಥಿವೇತನ ವಿತರಣೆ

Suddi Udaya
error: Content is protected !!