September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ ರತ್ನಮಾನಸ : ಅಕ್ಷರ ಜ್ಞಾನ ಶಿಬಿರ ಸಂಪನ್ನ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ 6 ದಿನಗಳ ಅಕ್ಷರ ಜ್ಞಾನ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಉಜಿರೆಯ ಎಸ್.ಡಿ.ಎಂ ವಸತಿ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅತಿಥಿಗಳಾಗಿ ಉಪಸ್ಥಿತರಿದ್ದು, ರತ್ನಮಾನಸ ನಿಲಯದಲ್ಲಿ ಕಳೆದ ಅನುಭವವನ್ನು ಹಂಚಿಕೊಂಡರು. ಮಾತೃ ಭಾಷೆ ಮತ್ತು ಮಾತೃ ಸಂಸ್ಥೆಗೆ ವಿದ್ಯಾರ್ಥಿಗಳು ಮೊದಲ ಪ್ರಾಶಸ್ತ್ಯ ನೀಡಬೇಕು. ಕ್ರಿಯಾಶೀಲತೆಯ ಜೊತೆಗೆ ಸ್ವಂತಿಕೆಯನ್ನು ಬೆಳೆಸಿಕೊಂಡರೆ ಬದುಕಿನಲ್ಲಿ ಯಶಸ್ಸು ಸಾಧ್ಯ. ಕಲಿಕೆಯ ಎಂಬುದು ನಿರಂತರವಾಗಿ ಬೆಳೆಯಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಉಜಿರೆಯ ಸಾಹಿತಿ ಅರುಣಾ ಶ್ರೀನಿವಾಸ ಅರಿಪಾಡಿ ಮಾತನಾಡಿ, ಶೈಕ್ಷಣಿಕ ಬೆಳವಣಿಗೆಗೆ ಹಾಗೂ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಬೇಸಿಗೆ ಶಿಬಿರದಂತ ಕಾರ್ಯಕ್ರಮಗಳು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು. ಉಜಿರೆಯ‌ ಅನುಗ್ರಹ ಕಾಲೇಜಿನ ಹಿಂದಿ ಶಿಕ್ಷಕಿ ಗೀತಾ ಜೋಶಿ ಮಾತನಾಡಿ ಸಾಮಾಜಿಕ ವ್ಯವಹಾರಕ್ಕೆ ಬಹುಮುಖ ಭಾಷೆಗಳು ಅಗತ್ಯ. ಪ್ರತಿ ಭಾಷೆಗಳು ಭಾಷೆಯ ಸಂಸ್ಕೃತಿ ಆಚಾರ ವಿಚಾರಗಳನ್ನು ಪರಿಚಯಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರತ್ನಮಾನಸ ವಿದ್ಯಾರ್ಥಿ ನಿಲಯದ ಪಾಲಕ ಯತಿಶ್ ಕೆ ಬಳಂಜ ಮಾತನಾಡಿ ವಿದ್ಯಾರ್ಥಿಗಳಿಗೆ ರತ್ನಮಾನಸದ ವಿದ್ಯಾರ್ಥಿಗಳು ಅಗಾಧ ಜ್ಞಾನ ಮತ್ತು ಸಂಸ್ಕಾರದಿಂದ ಈ ಸಮಾಜದ ಆಸ್ತಿಗಳಾಗಿ ರೂಪುಗೊಳ್ಳಬೇಕು ಎಂದು ವಿದ್ಯಾರ್ಥಿ ಸಮೂಹಕ್ಕೆ ಶುಭ ಹಾರೈಸಿದರು.

ವಿದ್ಯಾರ್ಥಿ ನಿಲಯದಲ್ಲಿ ಶಾಲೆಯ 8 ಮತ್ತು 9 ನೇ ತರಗತಿ ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ಶಿಬಿರವನ್ನು 6 ದಿನಗಳ ಕಾಲ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಬರವಣಿಗೆ, ಇಂಗ್ಲೀಷ್ ಬರವಣಿಗೆ, ಕನ್ನಡ ಭಾಷಾ ಕಲಿಕೆ, ಹಿಂದಿ ಬರವಣಿಗೆ, ಕನ್ನಡ ಭಾಷಾ ಆಟಗಳು, ಅಭಿನಯ ಗೀತೆ
ಹಿಂದಿ ಅಭ್ಯಾಸ ಕ್ರಮ, ಕಥೆಗಳ ರಚನೆ, ಪದ ರಚನೆ ಮತ್ತು ಭಾಷಣ ಕಲೆ, ಕನ್ನಡ ಭಾಷಾ ಉಚ್ಚರಣಾ ದೋಷಗಳು, ಕವನ ರಚನೆ, ಭಜನಾ ತರಬೇತಿ ಇತ್ಯಾದಿ ವಿಷಯಗಳಗಳು ಕುರಿತು ನುರಿತ ಶಿಕ್ಷಕರಿಂದ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನಿಲಯದ ಪಾಲಕರಾದ ರವಿಚಂದ್ರ ,ಉದಯ ರಾಜ್ ,ದೀಪಕ್ ಮತ್ತು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.

ನಿಲಯದ ವಿದ್ಯಾರ್ಥಿಗಳಾದ ಪ್ರಥಮ್ ಕೆ, ರೋಹಿತ್ ಮತ್ತು ರಾಕೇಶ್ ಡಿ ಆರ್ ಪ್ರಾರ್ಥನೆ ಹಾಡಿದರು. ಗೌತಮ್ ಎನ್ ಸ್ವಾಗತಿಸಿ ಮಹಾತೆಂಶ್ ಧನ್ಯವಾದ ಸಲ್ಲಿಸಿದರು. ಸಮ್ಯಕ್ ಕಾರ್ಯಕ್ರವನ್ನು ನಿರೂಪಿಸಿದರು.

Related posts

ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ಬಳ್ಳಮಂಜ ಶ್ರೀ ವಿದ್ಯಾಸಾಗರ ಸಿಬಿಎಸ್ ಇ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್ ಶಿಪ್

Suddi Udaya

ಲಾಯಿಲ: ಶ್ರೀ ಉಳ್ಳಾಲ್ತಿ, ಮೈಸಂದಾಯ ಹಾಗೂ ಗುಳಿಗ ದೈವಗಳ ಸಾನಿಧ್ಯ ಪಿಲಿಪಂಜರ ಕ್ಷೇತ್ರ ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ನಿಡಿಗಲ್-ಕಲ್ಮಂಜ ಗೆಳೆಯರ ಬಳಗದ ಪದಾಧಿಕಾರಿಗಳ ಆಯ್ಕೆ

Suddi Udaya

ಸೇವಾಧಾಮದಿಂದ ಪುನಶ್ಚೇತನಗೊಂಡ ದಿವ್ಯಾಂಗರ ಮಾರಾಟ ಮಳಿಗೆ ಯೋಜನೆ

Suddi Udaya

ಉಜಿರೆಯಲ್ಲಿ ಸರಣಿ ಅಪಘಾತ: ಮೂವರಿಗೆ ಗಾಯ

Suddi Udaya

ಕಾಡಾನೆ ಹಾವಳಿ ಕುರಿತು ಧರ್ಮಸ್ಥಳದಲ್ಲಿ ಅರಣ್ಯಾಧಿಕಾರಿಗಳಿಗೆ ಮನವಿ

Suddi Udaya
error: Content is protected !!