
ನಾವೂರು: ಗ್ರಾಮ ದೈವ ಶ್ರೀ ಕೊಡಮಣಿತ್ತಾಯ, ಗುತ್ತುಭಾಮ ದೈವ ಶ್ರೀ ಜುಮಾಧಿ ಹಾಗೂ ಸಹಪರಿವಾರ ದೈವಗಳ ದೈವಸ್ಥಾನ ಬಡೆಕ್ಕಾವು ಗುತ್ತುವಿನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ದೈವ ಕ್ಷೇತ್ರ ಬಡೆಕ್ಕಾವು ಗುತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾವೂರು ಗ್ರಾಮದ 2024-25ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಪುಸ್ತಕ ವಿತರಣೆ ಕಾರ್ಯಕ್ರಮವು ಫೆ.22ರಂದು ನಡೆಯಿತು.


ಈ ಸಂದರ್ಭದಲ್ಲಿ ಬಡೆಕ್ಕಾವು ಗುತ್ತು ಮನೆಯವರು, ಅರ್ಚಕರು, ಊರಿನ ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು, ಪರವೂರಿನವರು ಮತ್ತು ನಾವೂರು ಗ್ರಾಮದ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.











