32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಜನಾರ್ದನ ಸ್ವಾಮಿಯ ಬ್ರಹ್ಮಕಲಶೋತ್ಸವ: ಮಾ.2ರಂದು ಹೊರೆಕಾಣಿಕೆಯಲ್ಲಿ ಲಾಯಿಲದಿಂದ “ಒಂದು ಸಾವಿರ” ತೆಂಗಿನಕಾಯಿ, ಸಮರ್ಪಣೆ; ಬಿ.ಕೆ ಧನಂಜಯ್ ರಾವ್

ಉಜಿರೆ ಶ್ರೀ ಜನಾರ್ಧನ ಸ್ವಾಮಿಯ. ಬ್ರಹ್ಮಕಲಶೋತ್ಸವ ಮಾರ್ಚ್ 3ರಿಂದ ಮಾರ್ಚ್ 11ರವರೆಗೆ ಭಕ್ತಿ ಸಡಗರ ಸಂಭ್ರಮ ವಿಜೃಂಭಣೆಯಿಂದ ನಡೆಯಲಿದ್ದು, ವಿಜಯ ಗೋಪುರ ಲೋಕಾರ್ಪಣೆ, ನೂತನ ಬ್ರಹ್ಮರಥ ಮತ್ತು ಪುಷ್ಪರಥ ಸಮರ್ಪಣೆಯ ಮಹಾ ವೈಭವ ನಡೆಯಲಿದ್ದು, ಮಾ.,2ರಂದು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಲಾಯಿಲ ಗ್ರಾಮದ ಗಣ್ಯರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರು ಹಾಗೂ ಊರವರ ಸಂಪೂರ್ಣವಾದ ಸಾಕಾರದೊಂದಿಗೆ 1000 ತೆಂಗಿನಕಾಯಿ, ಅಕ್ಕಿ, ತರಕಾರಿಗಳು, ಬಾಳೆಗೊನೆ, ಸೀಯಾಳ, ಬೆಲ್ಲ, ಸಕ್ಕರೆ, ವೀಳ್ಯದೆಲೆ, ಮಾವಿನ ಮಿಡಿ ,ಹಲಸಿನಕಾಯಿಯನ್ನು ಹೊರೆಕಾಣಿಕೆಯಲ್ಲಿ ಭಕ್ತರೊಂದಿಗೆ ಸೇರಿಕೊಂಡು ಲಾಯಿಲದಿಂದ ಉಜಿರೆಯವರೆಗೆ ಭಕ್ತರ ಒಂದುಗೂಡುವಿಕೆಯಲ್ಲಿ ಕೊರೆಕಾಣಿಕೆ ಸಾಗಿ ಬರಲಿದೆ ಎಂದು ಬೆಳ್ತಂಗಡಿ ತಾಲೂಕಿನ ಹಿರಿಯ ವಕೀಲರಾದ ಬಿ ಕೆ ಧನಂಜಯ್ ರಾವ್ ರವರು ತಿಳಿಸಿದರು.

ಈ ಸಂದರ್ಭ ಲಾಯಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಿರೀಶ್ ಡೋಂಗ್ರೆ, ಪಿಲಿಪಂಜರ ದೈವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಬರಮೇಲು , ಲಾಯಿಲ ಗ್ರಾಮ ಪಂಚಾಯಿತ ಮಾಜಿ ಉಪಾಧ್ಯಕ್ಷ ಗಣೇಶ್ ಆರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಬಿ.ಎಲ್. , ಲಾಯಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಆಶಾ ಸಲ್ದಾನ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಆರ್, ಲಾಯಿಲ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸದಸ್ಯ ಗುರು ಅಜೆಕಲ್, ಪಿಲಿಪಂಜರ ದೈವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಅನಿಲ್ ಕಾಶಿಬೆಟ್ಟು, ಮೇಲ್ವಿಚಾರಕರಾದ ರಾಮ್ ಕುಮಾರ್ ಮತ್ತು ಸುಶಾಂತ್, ಸೇವಾಪ್ರತಿನಿಧಿ ಗೀತಾ, ಗ್ರಾಮಸ್ಥರು ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.

Related posts

ವಿ.ಹಿ.ಪ ಬಜರಂಗದಳ ಚಾರ್ಮಾಡಿ ಘಟಕದ ವತಿಯಿಂದ ದತ್ತಮಾಲಧಾರಣೆಗೆ ಚಾಲನೆ

Suddi Udaya

ದ.ಕ. ಜಿಲ್ಲೆಯಲ್ಲಿ ಅಡಿಕೆ ಕೋಕೋ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯ ಕಲ್ಪಿಸಲು ಇದುವರೆಗೂ ಯಾವುದೇ ಕ್ರಮವಹಿಸದೆ ಇರುವುದರ ಕುರಿತು ಮುಖ್ಯಮಂತ್ರಿಗಳ ಹಾಗೂ ತೋಟಗಾರಿಕ ಸಚಿವರ ಗಮನ ಸೆಳೆದ ವಿ.ಪ ಸದಸ್ಯ ಪ್ರತಾಪ್ ಸಿಂಹ ನಾಯಕ್

Suddi Udaya

ಬಂದಾರು ಗ್ರಾ.ಪಂ. ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ

Suddi Udaya

ಪಟ್ರಮೆ: ಕುಶಾಲಪ್ಪ ನಾಯ್ಕ್ ರ ಮನೆಗೆ ತೆಂಗಿನ ಮರ ಬಿದ್ದು, ಹಾನಿ

Suddi Udaya

ಮಲವಂತಿಗೆ : 38ನೇ ವರ್ಷದ ಶ್ರೀವಿದ್ಯಾ ಗಣಪತಿ ಪೂಜ್ಯೋತ್ಸವದ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!