32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಕಾಲೇಜು : ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗಿಯಾದ ಕೆಡೆಟ್ ಗಳಿಗೆ ಅಭಿನಂದನಾ ಸಮಾರಂಭ

ಉಜಿರೆ: ಇತ್ತೀಚೆಗೆ ದೆಹಲಿಯ ಕೆಂಪುಕೋಟೆಯಲ್ಲಿ ನಡೆದ 77 ನೇ ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆ ಕೊಂಡು ಗಾರ್ಡ್ ಆಫ್ ಆನರ್ ಮತ್ತು ಪಿಎಂ ರಾಲಿಯಲ್ಲಿ ಸಕ್ರೀಯವಾಗಿ ಭಾಗಿಯಾಗಿದ್ದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಎನ್.ಸಿ.ಸಿ ವಿಭಾಗದ 7 ಜನ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ವತಿಯಿಂದ ಕಾಲೇಜಿನ ಸಮ್ಯಕ್ ದರ್ಶನ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಸಂಸ್ಥೆಯ ಸಹಕಾರ, ಪೋಷಕರ ಪ್ರೋತ್ಸಾಹ, ಸಿಬ್ಬಂದಿಗಳ ತರಬೇತಿ, ಹಿರಿಯ ಕೆಡೆಟ್ ಗಳ ಮಾರ್ಗದರ್ಶನದ ಜೊತೆಗೆ ವಿದ್ಯಾರ್ಥಿಗಳ ನಿರಂತರವಾದ ಪ್ರಯತ್ನ, ದೃಢತೆ ಮತ್ತು ದೂರದೃಷ್ಟಿತ್ವ ಅಡಗಿದೆ. ಇಂತಹ ಸಾಧನೆ ನಿಜಕ್ಕೂ ಶ್ಲಾಘನೀಯ ಮತ್ತು ಪ್ರೇರಣಾ ದಾಯಕ. ಎನ್.ಸಿ.ಸಿ ಯ ಶಿಸ್ತು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡಾಗ ವಿದ್ಯಾರ್ಥಿಗಳ ವ್ಯಕ್ತಿತ್ವ ಬಹು ಎತ್ತರಕ್ಕೆ ಬೆಳೆಯುತ್ತದೆ ಮತ್ತು ಉಜ್ವಲ ಭವಿಷ್ಯ ನಿರ್ಮಾಣವಾಗುತ್ತದೆ ಎಂದರು.

ಕಾಲೇಜಿನ ಆಡಳಿತ ಕುಲ ಸಚಿವ ಡಾ. ಶ್ರೀಧರ್ ಎನ್ ಭಟ್ ಮಾತನಾಡಿ, ನಾನು ಮೂರು ವರ್ಷಗಳ ಹಿಂದೆ ಎನ್.ಸಿ.ಸಿಯ ನೇವಿ ಆಫೀಸರ್ ಆಗಿದ್ದೆ. ವಿದ್ಯಾರ್ಥಿಗಳು ಆರ್‌ಡಿಸಿ ಫೈನಲ್ ಹಂತವನ್ನು ತಲುಪುವುದು ಸರಳದ ವಿಷಯವಲ್ಲ. ಸರಿ ಸುಮಾರು ಎಂಟು ತಿಂಗಳು ನಡೆಯುವ ಈ ಕ್ಯಾಂಪ್, ಒಂದು ಕ್ಯಾಂಪ್ ಕನಿಷ್ಠ ಹತ್ತು ದಿನ ನಡೆಯುತ್ತದೆ. ಒಟ್ಟು 9 ಕ್ಯಾಂಪ್ ಗಳನ್ನು ದಾಟಿದರೆ ಮಾತ್ರ ಕೆಡೆಟ್ ಗಳು ದೆಹಲಿಯನ್ನು ತಲುಪುತ್ತಾರೆ. ಇಂತಹ ವೇದಿಕೆಗೆ ಏಳು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಅತ್ಯಂತ ಸಂತಸದ ಮತ್ತು ಸಂಭ್ರಮಿಸುವ ವಿಚಾರ ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ನಂದ ಕುಮಾರಿ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ಕಾಲೇಜಿನ ಆರ್ಮಿ ಎನ್‌.ಸಿ.ಸಿ ಘಟಕದ ಎ.ಎನ್.ಓ. ಡಾ. ಭಾನುಪ್ರಕಾಶ್ ಬಿ.ಇ. ಮಾತನಾಡಿ ಎಸ್.ಡಿ.ಎಮ್ ಎನ್ ಸಿ.ಸಿ ಇತಿಹಾಸದಲ್ಲೆ ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಏಳು ಕೆಡೆಟ್ ಗಳು ಎಸ್.ಡಿ.ಎಂ ಒಂದೇ ಕಾಲೇಜಿನಿಂದ ಆಯ್ಕೆಯಾಗುವ ಅವಕಾಶ ದಕ್ಕಿರುವುದು ಸಂಸ್ಥೆಗೆ ಮತ್ತು ಕಾಲೇಜಿನ ಎನ್.ಸಿ.ಸಿ ವಿಭಾಗಕ್ಕೆ ಹೆಮ್ಮೆಯ ಸಂಗತಿ ಎಂದರು.

ವಿದ್ಯಾರ್ಥಿಗಳಿಗೆ ಕಾಲೇಜಿನ ಆರ್ಮಿ ಎನ್‌.ಸಿ.ಸಿ ಘಟಕದ ಎ.ಎನ್.ಓ. ಡಾ. ಭಾನುಪ್ರಕಾಶ್ ಬಿ.ಇ., ನೇವಿ ಎನ್‌.ಸಿ.ಸಿ ಘಟಕದ ಸಿ.ಟಿ.ಓ ಶ್ರೀ ಹರೀಶ್ ಶೆಟ್ಟಿ, ಹಾಗೂ ಕಾಲೇಜಿನ ಆರ್ಮಿ ಮತ್ತು ನೇವಿ ವಿಭಾಗದ ಹಿರಿಯ ಕ್ಯಾಡೆಟ್‌ಗಳ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಿರುತ್ತಾರೆ. ಜೊತೆಗೆ 18 ಕರ್ನಾಟಕ ಬ್ಯಾಟಲಿಯನ್ ಆರ್ಮಿ ಮತ್ತು 5 ಕರ್ನಾಟಕ ನೇವಿ ಅಧಿಕಾರಿಗಳು ಈ ಸಾಧನೆಗೆ ನಿರಂತರ ಪ್ರೋತ್ಸಾಹ ನೀಡಿರುತ್ತಾರೆ.

ಕಾರ್ಯಕ್ರಮದಲ್ಲಿ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಐಕ್ಯುಎಸ್ ಸಂಯೋಜಕ ಗಜಾನನ ಆರ್ ಭಟ್ , ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರತ್ನವತಿ ಕೆ, ಬಿಬಿಎ ವಿಭಾಗದ ಮುಖ್ಯಸ್ಥೆ ಶಕುಂತಲ, ಉಪನ್ಯಾಸಕ ಡಾ. ಮಹೇಶ್ ಶೆಟ್ಟಿ, ಶರಶ್ಚಂದ್ರ ಕೆ ಎಸ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಸನ್ಮಾನ ಸ್ವೀಕರಿಸಿದ ಕೆಡೆಟ್‌ಗಳ ವಿವರ :

ಆರ್ಮಿ ವಿಭಾಗದಿಂದ ಗಾರ್ಡ್ ಆಫ್ ಆನರ್‌ನಲ್ಲಿ ದೀಪ್ತಿ ಆಚಾರ್ಯ ಪಿ., ಪ್ರಧಾನಮಂತ್ರಿ ರ್ಯಾಲಿಯಲ್ಲಿ ವಿಷ್ಣು ಎಸ್.ಕೆ., ಚಿರಂಜೀವಿ, ಪ್ರಥಮ್ ಕೆ.ಎಂ., ಹಾಗು ನೌಕಸೇನೆ ವಿಭಾಗದಿಂದ ಗಾರ್ಡ್ ಆಫ್ ಆನರ್ ಪಿಒ ಕ್ಯಾಡೆಟ್ ನಿಶ್ಚಿತ್ ಶೆಟ್ಟಿ ಬಿ.ಸಿ., ಗಾರ್ಡ್ ಆಫ್ ಆನರ್ ಲೀಡಿಂಗ್ ಕ್ಯಾಡೆಟ್ ಮೋಹನ್ ಬಿ.ಆರ್., ಕರ್ತವ್ಯ ಪಥಲೀಡಿಂಗ್ ಕ್ಯಾಡೆಟ್ ವರ್ಷಿಣಿ ಆರ್.ಟಿ. ಸನ್ಮಾನ ಸ್ವೀಕರಿಸಿದರು.

Related posts

ಕೊಕ್ಕಡ: ದಿ| ಸುಹಾಸ್ ಶೆಟ್ಟಿ ಹುಟ್ಟು ಹಬ್ಬದ ಪ್ರಯುಕ್ತ ಕಳೆಂಜ ನಂದಗೋಕುಲ ಗೋಶಾಲೆಗೆ ಮೇವು ಸಮರ್ಪಣೆ

Suddi Udaya

ಉಜಿರೆ : ಹಳೆಪೇಟೆ ಬಳಿ ಸಂಚರಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ: ಬೈಕ್ ಸವಾರ ಪ್ರಾಣಾಪಾಯದಿಂದ ಪಾರು

Suddi Udaya

ಕೊಕ್ಕಡ: ಹೊನ್ನಮ್ಮ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ: ಜೈನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಉಚಿತ ಯೋಗ ಶಿಬಿರ

Suddi Udaya

ಪಟ್ರಮೆ: ಪಾದೆಯಲ್ಲಿ ಧರೆ ಕುಸಿತ: ಮನೆಗೆ ಹಾನಿ

Suddi Udaya
error: Content is protected !!