ಬೆಳ್ತಂಗಡಿ: ಕೇರಳಂ (ಕೇರಳ) ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು ಭಾರತೀಯ ಜನತಾ ಪಾರ್ಟಿ ತಯಾರಿ ಆರಂಭಿಸಿದೆ.
ಕಾಸರಗೋಡು ಜಿಲ್ಲೆಯ ಕಾಸರಗೋಡು ಕ್ಷೇತ್ರಕ್ಕೆ ಪ್ರಭಾರಿಯಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಜೇಶ್ವರ ಕ್ಷೇತ್ರ ಪ್ರಭಾರಿಯಾಗಿ ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ, ,ಎರ್ನಾಕುಲಮ್ ಜಿಲ್ಲೆಯ ವೈಪಿನ್ ಕ್ಷೇತ್ರಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮಾಜಿ ಟ್ರಸ್ಟಿ, ಜಿಲ್ಲಾ ಬಿಜೆಪಿ ಪ್ರಕೋಷ್ಠ ಸಹ ಸಂಚಾಲಕ ಪ್ರಸನ್ನ ದರ್ಬೆಯವರನ್ನು ಬಿಜೆಪಿ ಚುನಾವಣೆ ಪ್ರಭಾರಿಯಾಗಿ ಬಿಜೆಪಿ ನೇಮಕಗೊಳಿಸಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇರಳ ರಾಜ್ಯ ಸಹ ಉಸ್ತುವಾರಿ ಮತ್ತು ಕಾಸರಗೋಡು ಜಿಲ್ಲೆಗೆ ನಳಿನ್ ಕುಮಾರ್ ಕಟೀಲ್‌ರನ್ನು ಚುನಾವಣೆ ಉಸ್ತುವಾರಿಯಾಗಿ ಈಗಾಗಲೇ ಪಕ್ಷ ಘೋಷಣೆ ಮಾಡಿರುತ್ತದೆ.











