ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ

ಬೆಳಾಲು : ಅನಂತೇಶ್ವರ ಫ್ರೆಂಡ್ಸ್ ಅನಂತೋಡಿ ಇದರ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ 15 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಸಮಾರೋಪ ಸಮಾರಂಭ ಅ.26ರಂದು ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅನಂತೇಶ್ವರ ಫ್ರೆಂಡ್ಸ್ ಇದರ ಅಧ್ಯಕ್ಷ ಸಂತೋಷ್ ನಾಯ್ಕ ಕುದ್ದoಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೇತನ್ ಸಾಲ್ಯಾನ್ ” ಚೇತನ್ ಕನ್ಸ್ಟ್ರಕ್ಷನ್ ” ಮಾಚಾರು, ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬೆಳಾಲು ಇದರ ಗೌರವಾಧ್ಯಕ್ಷ ಶಿವಕುಮಾರ ಬಾರಿತ್ತಾಯ ಪಾರಲ, ಮುಖ್ಯ ತೀರ್ಪುಗಾರರಾದ ಧರ್ಮೇಂದ್ರ ಕುಮಾರ್, ಸಿಂಧೂರ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷೆ ಶ್ರೀಮತಿ ನಿಶಾಯಶವಂತ್ ಬನಂದೂರು, ಅನಂತೇಶ್ವರ ಫ್ರೆಂಡ್ಸ್ ಇದರ ಉಪಾಧ್ಯಕ್ಷ ರೂಪೇಶ್ ಪೂಜಾರಿ ಪೋಸೊಟ್ಟು ,ಅನಂತೇಶ್ವರ ಫ್ರೆಂಡ್ಸ್ ಇದರ ಕಾರ್ಯದರ್ಶಿಯಾದ ಹರ್ಷಿತ್ ಗೌಡ ಎರ್ಧೊಟ್ಟು ಉಪಸ್ಥಿತರಿದ್ದರು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಗೌಡ ಆರಿಕೋಡಿ ಇವರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಹರಿಪ್ರಸಾದ್ ಗೌಡ ಅರಣೆಮಾರು ಸ್ವಾಗತಿಸಿ, ಗಿರೀಶ್ ಗೌಡ ಮಂಜೋತ್ತು ಕಾರ್ಯಕ್ರಮ ನಿರೂಪಿಸಿದರು. ಯಶವಂತ್ ಗೌಡ ಬನಂದೂರು ವಂದಿಸಿದರು. ನಂತರ ಕೆಸರುಗದ್ದೆಯಲ್ಲಿ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿಜೇತರ ಪಟ್ಟಿಯನ್ನು ಕಿರಣ್ ಸುವರ್ಣ ಇರಂತ್ಯಾರು ವಾಚಿಸಿದರು.

Related posts

ಅರಸಿನಮಕ್ಕಿ ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಿ ತ್ಯಾಂಪಣ್ಣ ಶೆಟ್ಟಿಗಾರ್ ರವರಿಗೆ ಗೌರವಾರ್ಪಣೆ

Suddi Udaya

ವೇಣೂರು ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಮಹಿಳಾ ಮೀಸಲಾತಿಗೆ ತಡೆಯೊಡ್ಡಿದ ಕಾಂಗ್ರೆಸ್ ನ ಕೃತ್ಯ ಪ್ರಜಾಪ್ರಭುತ್ವಕ್ಕೆ ಮಸಿ ಬಳಿದಂತಾಗಿದೆ: ಹರೀಶ್ ಪೂಂಜ

Suddi Udaya

ಉಜಿರೆ ಅರಳಿ ಮಿತ್ರ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿಭಾ ಸಂಗಮ ಕಾರ್ಯಕ್ರಮ

Suddi Udaya

ವೇಣೂರು ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಶಿರ್ಲಾಲು ಯುವವಾಹಿನಿ ಸಂಚಲನ ಸಮಿತಿಯ ಪದಪ್ರದಾನ ಕಾರ್ಯಕ್ರಮ

Suddi Udaya
error: Content is protected !!