September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬ್ರಹ್ಮಕಲಶೋತ್ಸವದ ಪರ್ವ ಕಾಲದಲ್ಲಿ ಬೆಳ್ತಂಗಡಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ, ನಾರಾವಿ ಶ್ರೀ ಸೂರ್ಯನಾರಾಯಣ, ಉರುವಾಲು ಮಲೆಗಂಲ್ಲು ಶ್ರೀ ಉಮಾಮಹೇಶ್ವರ, ಉಜಿರೆ ಶ್ರೀ ಜರ್ನಾದನ , ಕರಾಯ ಶ್ರೀ ಮಹಾಲಿಂಗೇಶ್ವರ ಹಾಗೂ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಾಲಯಗಳಲ್ಲಿ ಮಾರ್ಚ್ ಮತ್ತು ಎಪ್ರಿಲ್ ತಿಂಗಳಿನಲ್ಲಿ ಬ್ರಹ್ಮಕಲಶೋತ್ಸವದ ವೈಭವಕ್ಕೆ ಈ ಕ್ಷೇತ್ರಗಳು ಅಣಿಯಾಗಲಿದ್ದು ತಾಲೂಕಿನಲ್ಲಿ ಬ್ರಹ್ಮಕಲಶೋತ್ಸವದ ಪರ್ವ ಕಾಲ ಆರಂಭಗೊಂಡಿದೆ.

ನಾಡಿನ ಪ್ರಸಿದ್ಧ ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಪರ್ಯಂತ ಬ್ರಹ್ಮಶ್ರೀ ಎಡಪದವು ರಾಧಕೃಷ್ಣ ತಂತ್ರಿಯವರ ಅಮೃತ ಹಸ್ತದಿಂದ ನಾರಾವಿ ಶ್ರೀ ಸೂರ್ಯನಾರಾಯಣ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ ಫೆ.28ರಿಂದ ಮಾರ್ಚ್ 9ರವರೆಗೆ ನಡೆಯಲಿದೆ.

300 ವರ್ಷಗಳ ಇತಿಹಾಸವುಳ್ಳ 500 ಅಡಿ ಎತ್ತರದ ಎಕಶಿಲೆ ಮೇಲೆ ನೆಲೆಸಿ ಭಕರ ಅಭೀಷ್ಟಗಳನ್ನು ಈಡೇರಿಸುವ ಬೆಳ್ತಂಗಡಿ ತಾಲೂಕಿನ ಪದ್ಮುಂಜದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಾ1ರಿಂದ6ರವರೆಗೆ ನಡೆಯಲಿದೆ.

ಒಂದು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವುಳ್ಳ ಬಂಗಾಡಿ ಸೀಮೆಯ ಪ್ರಧಾನ ವಿಷ್ಣು ಕ್ಷೇತ್ರವಾಗಿರುವ ಪ್ರಸಿದ್ಧ ಉಜಿರೆ ಶ್ರೀ ಜರ್ನಾದನ ಸ್ವಾಮಿ ದೇವಸ್ಥಾನದ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಮಾ.೩ರಿಂದ ಮಾ.೧೧ರ ವರೆಗೆ ನಡೆಯಲಿದೆ.

ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವ ಎಡಪದವು ಶ್ರೀ ಗಣೇಶ ತಂತ್ರಿ ಅವರ ನೇತೃತ್ವದಲ್ಲಿ ಹಾಗೂ ಶ್ರೀ ಮಂಜುನಾಸ ಭಟ್ ಅಂತರ ಮಾರ್ಗದರ್ಶನದಲ್ಲಿ ಮಾ. ೪ರಿಂದ ೬ ರವರೆಗೆ ನಡೆಯಲಿದೆ.

ಮಾರ್ಚ್ ಅಂತ್ಯಕ್ಕೆ ಮಾ.29ರಿಂದ ಏ.6ರವರೆಗೆ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿದೆ. ಏಪ್ರಿಲ್ 15ರಿಂದ ಏ. 24 ರ ವರೆಗೆ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿಯೂ ಬ್ರಹ್ಮಕಲಶೋತ್ಸವ ನಡೆಯಲಿದ್ದು ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದೆ. ಈ ಎಲ್ಲಾ ಕ್ಷೇತ್ರದ ಉತ್ಸವಗಳು ವೈಧಿಕ-ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಈ ಸುಂದರ ಐತಿಹಾಸಿಕ ಕ್ಷಣಗಳಿಗೆ ಬೆಳ್ತಂಗಡಿ ಈ ಪವಿತ್ರ ಕ್ಷೇತ್ರಗಳು ಅಣಿಯಾಗಲಿದೆ.

Related posts

ಭಾರತೀಯ ರೆಡ್ ಕ್ರಾಸ್ ಸೊಸೈಟಿಯಿಂದ ರಾಮಣ್ಣ ಗೌಡ ರವರಿಗೆ ವಾಟರ್ ಬೆಡ್ ಹಸ್ತಾಂತರ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ತುಳು ಸಂಸ್ಕೃತಿ ಕುರಿತ ‘ಐಸಿರ’ ಕಾರ್ಯಕ್ರಮ

Suddi Udaya

ಪಡಂಗಡಿ : ತಿಮ್ಮಪ್ಪ ಜೆ ಪೂಜಾರಿ ನಿಧನ

Suddi Udaya

ಕೊಕ್ಕಡ: ಬಲಿಪಗುಡ್ಡೆ ಶ್ರೀಮತಿ ಸುಶೀಲ ಅವರ ಮನೆಯ ಮೇಲ್ಛಾವಣಿ ಸಂಪೂರ್ಣ ಹಾನಿ: ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ: ಶೀಘ್ರವಾಗಿ ಮನೆಯವರನ್ನು ಸ್ಥಳಾಂತರಿಸುವಂತೆ ಸೂಚನೆ

Suddi Udaya

ಅಳದಂಗಡಿ ಶ್ರೀ ಕ್ಷೇ ಧ. ಗ್ರಾ. ಯೋಜನೆಯ ಜನಜಾಗೃತಿ ಗ್ರಾಮಸಮಿತಿ ಸಭೆ

Suddi Udaya

ಮಿತ್ತಬಾಗಿಲು: ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!