September 6, 2026
ವರದಿಶಿಕ್ಷಣ ಸಂಸ್ಥೆ

ಬೆಳ್ತಂಗಡಿ: ವಾಣಿ ಕಾಲೇಜಿನಲ್ಲಿ ತುಳು ಸಂಸ್ಕೃತಿ ಕುರಿತ ‘ಐಸಿರ’ ಕಾರ್ಯಕ್ರಮ

ಬೆಳ್ತಂಗಡಿ: ವಿಶೇಷವಾದ ಭೌಗೋಳಿಕ ಹಿನ್ನೆಲೆಯುಳ್ಳ ತುಳುನಾಡಿನ ಜೀವನ ಪದ್ಧತಿ, ಆಚರಣೆಗಳು ಬಲು ವಿಶಿಷ್ಟವಾಗಿದ್ದು ವಿಶ್ವ ಮಾನ್ಯತೆಯನ್ನು ಪಡೆದಿದೆ ಎಂದು ಹಿರಿಯ ಯಕ್ಷಗಾನ ಕಲಾವಿದ ಕೋಳ್ತಿಗೆ ನಾರಾಯಣಗೌಡ ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನ ಪರಂಪರ ವೇದಿಕೆಯ ಆಶ್ರಯದಲ್ಲಿ ನಡೆದ ತುಳು ಸಂಸ್ಕೃತಿಯ ಅನಾವರಣ ‘ಐಸಿರ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಯುವಜನರು ಹೊಸತ್ತನ್ನು ಪಡೆದುಕೊಳ್ಳುವ ಭರದಲ್ಲಿ ಹಳೆಯ ಸಂಸ್ಕೃತಿಯನ್ನು ಮರೆಯದೆ ಜೀವನದಲ್ಲಿ ಅಳವಡಿಸಿ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ರೂಪಿಸುವಂತವರಾಗಬೇಕು ಎಂದರು.

ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ಪರಂಪರ ವೇದಿಕೆಯ ಸಂಯೋಜಕಿ ಶ್ರೀಮತಿ ಕಿಶೋರಿ ಎಸ್. ರಾವ್, ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರವಂತ್, ಕು. ಅಭಿಜ್ಞಾ ಉಪಸಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಸ್ವಾಗತಿಸಿದರು. ಪರಂಪರ ವೇದಿಕೆಯ ಸಂಯೋಜಕ ರವಿಶಂಕರ್ ಧನ್ಯವಾದವಿತ್ತರು. ಕು. ಆರುಫಾ ಸುಹಾನ ಕಾರ್ಯಕ್ರಮ ನಿರೂಪಿಸಿದರು.

Related posts

ಕುಕ್ಕೇಡಿ ಗ್ರಾಮ ಪಂಚಾಯತ್ ವತಿಯಿಂದ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಭಾರತ ಮತ್ತು ನ್ಯೂಜಿಲೆಂಡ್ ಏಕದಿನ ಕ್ರಿಕೆಟ್ ಪಂದ್ಯ: ಪಂದ್ಯಕ್ಕೆ ಉದ್ಯಮಿ ಶಶಿಧರ್ ಶೆಟ್ಟಿ ನವಶಕ್ತಿಯವರ ಶಶಿ ಕ್ಯಾಟರಿಂಗ್ ಸರ್ವಿಸಸ್ ಫುಡ್ ಪಾರ್ಟ್ನರ್

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಅವಹೇಳನಕಾರಿ, ಆಧಾರ ರಹಿತ ವಿಡಿಯೋ ಪೋಸ್ಟ್ ಗೆ ಕೋರ್ಟ್ ತಡೆಯಾಜ್ಞೆ – ಡಿಲೀಟ್ ಗೆ ಸೂಚನೆ

Suddi Udaya

ವೇಣೂರು ಸರಕಾರಿ ಜಾಗದಲ್ಲಿ ಚಿರತೆಯ ಮೃತದೇಹ ಪತ್ತೆ

Suddi Udaya

ರೆಂಕೆದ ಗುತ್ತಿನಲ್ಲಿ ಗೆಜ್ಜೆಗಿರಿಯ ಆಮಂತ್ರಣ ಪತ್ರಿಕೆ ವಿತರಣೆ

Suddi Udaya

ಖ್ಯಾತ ನೋಟರಿ ನ್ಯಾಯವಾದಿ ಸೇವಿಯರ್ ಪಾಲೇಲಿ ಕಾಂಗ್ರೆಸ್ ಸೇರ್ಪಡೆ

Suddi Udaya
error: Content is protected !!