22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭಾರತೀಯ ಮಜ್ದೂರ್ ಸಂಘದಿಂದ ಪ್ರತಿಭಟನೆ ಮತ್ತು ಪ್ರಧಾನಮಂತ್ರಿಗೆ ಮನವಿ

ಬೆಳ್ತಂಗಡಿ: ಭಾರತೀಯ ಮಜ್ದೂರ್ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ವಿವಿಧ ಕಾರ್ಮಿಕರ ಬೇಡಿಕೆಗಳ ಈಡೇರಿಕಾಗಿ ಪ್ರತಿಭಟನೆ ಮತ್ತು ಮನವಿಯನ್ನು ದ.ಕ ಜಿಲ್ಲಾಧಿಕಾರಿಗಳ ಮತ್ತು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿಯಲ್ಲಿ ಪ್ರಧಾನಮಂತ್ರಿಗಳಿಗೆ, ಕೇಂದ್ರ ಕಾರ್ಮಿಕ ಸಚಿವರಿಗೆ, ರಾಜ್ಯದ ಮುಖ್ಯಮಂತ್ರಿಗೆ, ರಾಜ್ಯ ಕಾರ್ಮಿಕ ಸಚಿವರಿಗೆ ಕಾರ್ಮಿಕರ ದೀರ್ಘಕಾಲದ ಸಮಸ್ಯೆಗಳು ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ಮಾಡಲಾಯಿತು.

ಪ್ರತಿಭಟನೆ ಮತ್ತು ಮನವಿಯ ನೇತೃತ್ವವನ್ನು ಬಿಎಮ್‌ಎಸ್ ಜಿಲ್ಲಾ ಅಧ್ಯಕ್ಷ, ವಕೀಲರಾದ ಅನಿಲ್ ಕುಮಾರ್ ಯು. ವಹಿಸಿದ್ದರು. ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೊಸ ಕಾರ್ಮಿಕ ಸಂಹಿತೆಗಳ ಕುರಿತು ಸ್ವಾಗತ ವ್ಯಕ್ತಪಡಿಸಿದರೂ, ಹಲವು ಪ್ರಮುಖ ಕಾರ್ಮಿಕ ಸಮಸ್ಯೆಗಳು ಇಂದಿಗೂ ಬಾಕಿ ಉಳಿದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.


ಪ್ರತಿಭಟನೆಯ ಪ್ರಮುಖ ವಿಷಯಗಳು: EPS-95 ಕನಿಷ್ಠ ಪಿಂಚಣಿ ರೂ. ೭,೫೦೦ಕ್ಕೆ ಹೆಚ್ಚಳ ಮತ್ತು ದರ ಏರಿಕೆ ಭತ್ಯೆ ಜಾರಿ. ESI ಮತ್ತು EPF ವೇತನ ಮಿತಿ ಹೆಚ್ಚಳ. ಆಶಾ, ಅಂಗನವಾಡಿ, ಮಧ್ಯಾಹ್ನ ಊಟ ಹಾಗೂ NHM ಯೋಜನಾ ಕಾರ್ಮಿಕರ ಗೌರವಧನ ಹೆಚ್ಚಿಸಿ ನಿಯಮಿತಗೊಳಿಸುವುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ. ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಬಾಕಿ ವೇತನ ಪಾವತಿ. ಕರ್ನಾಟಕ ರಸ್ತೆ ಸಾರಿಗೆ ನೌಕರರ 38 ತಿಂಗಳ ಬಾಕಿ ವೇತನ ತಕ್ಷಣ ಪಾವತಿ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಭ್ರಷ್ಟಾಚಾರ ಕುರಿತು ತನಿಖಾ ಸಮಿತಿ ರಚನೆ. ಪ್ರತಿಭಟನೆಯಲ್ಲಿ ವಿಶೇಷವಾಗಿ Industrial Relations Code, 2020 ºÁUÀÆ Occupational Safety, Health and Working Conditions Code, 2020 ಕಾಯ್ದೆಗಳಲ್ಲಿನ ಕಾರ್ಮಿಕರ ಆತಂಕಗಳನ್ನು ತಿದ್ದುಪಡಿಸಲು ಒತ್ತಾಯಿಸಲಾಗಿದೆ. ಪ್ರತಿಭಟನೆಯಲ್ಲಿ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದು, ಇಲ್ಲವಾದಲ್ಲಿ ಕಾರ್ಮಿಕರ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವಾತ್ಮಕ ಹಾಗೂ ಕಾನೂನುಬದ್ಧ ಹೋರಾಟಗಳನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಲಾಯಿತು.

ಪ್ರತಿಭಟನೆಯ ನಂತರ ಮನವಿಯನ್ನು ಅಪರ ಜಿಲ್ಲಾಧಿಕಾರಿ ರಾಜು ಕೆ. ಹಾಗೂ ಪ್ರಾದೇಶಿಕ ಭವಿಷ್ಯ ನಿಧಿ ಉಪ ಆಯುಕ್ತರಾದ ಅಂಕಿತ್ ಸಿಂಗ್‌ರವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಎಂಎಸ್ ಸಮಿತಿಯ ಪದಾಧಿಕಾರಿಗಳಾದ ಅನಿಲ್ ಕುಮಾರ್ ಯು ಸತೀಶ್ ಶೆಟ್ಟಿ, ಜಯರಾಜ್ ಸಾಲ್ಯಾನ್, ವಿಜಯಲಕ್ಷ್ಮಿ, ಗೋಪಾಲಕೃಷ್ಣ, ರೋಹಿತಾಶ್ವ, ಉದಯ ಕುಮಾರ್, ವಿಗ್ನೇಶ್, ವೈ. ಸುದಿಂದ್ರ, ನಿತ್ಯಾನಂದ ಪೈ, ರಂಜನ್, ಶಶಿಧರ್, ಉದಯ, ರವೀಂದ್ರ, ದಿಲಾಕ್ಷಿ, ಉಷಾ ರೂಪೇಶ್, ರಘುಪತಿ, ಹರೀಶ್ ಜಿ.ಕೆ. ಹಾಗೂ ವಿವಿಧ ವಲಯಗಳ ಕಾರ್ಮಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಇಂದು ಕಾಶಿ ಬೆಟ್ಟು ನಲ್ಲಿ ಸಂಸದ ಬ್ರಿಜೇಶ್ ಚೌಟ ಹಾಗೂ ಶಾಸಕ ಹರೀಶ್ ಪೂಂಜರಿಂದ ಚಾಲನೆ

Suddi Udaya

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಜೋಶ್ ಅಲುಕಾಸ್ ಸಂಸ್ಥೆಯಿಂದ ಉದ್ಯೋಗ ಮೇಳ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಪ್ರತಿನಿಧಿಸಿದ ತಂಡ ರಾಷ್ಟ್ರಮಟ್ಟದಲ್ಲಿ ಪ್ರಥಮ

Suddi Udaya

ಶಿರ್ಲಾಲು: ವಿದ್ಯುತ್ ಅವಘಡದಿಂದ ಹಿತ್ತಿಲು ಪರಿಸರದಲ್ಲಿ ಬೆಂಕಿ

Suddi Udaya

ಬೆಳ್ತಂಗಡಿ: ಲಯನ್ಸ್ ಜಿಲ್ಲಾ ರಾಜ್ಯಪಾಲ, ಖ್ಯಾತ ಉದ್ಯಮಿ ಸಂಜೀತ್ ಶೆಟ್ಟಿ ರವರ ಅಧಿಕೃತ ಭೇಟಿ ಹಾಗೂ ಸ್ಥಾಪಕರ ದಿನಾಚರಣೆ

Suddi Udaya

‘ದಸ್ಕತ್’ ತುಳು ಸಿನೆಮಾದ ಮೋಷನ್ ಪೋಸ್ಟರ್ ಗೆ ಫಿದಾ ಆದ ತುಳುನಾಡಿನ ದಿಗ್ಗಜರು

Suddi Udaya
error: Content is protected !!