37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಉಜಿರೆ: ವಾಸದ ಮನೆ ಕೆಡವಿ ಮನೆ ಸೊತ್ತು ಬೀದಿಗೆಸೆದ ವಿಲಕ್ಷಣ ಘಟನೆ: ವೀಡಿಯೋ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಗೆ ಜೀವ ಬೆದರಿಕೆ

ಬೆಳ್ತಂಗಡಿ; ತಾಲೂಕು ಉಜಿರೆ ಗ್ರಾಮದ ಸ.ನಂಬ್ರ 406/1 ರ ಸರಕಾರಿ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದ ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ವೆಂಕಪ್ಪ ಅವರ ಪತ್ನಿ ರಾಜೀವಿ ಎಂಬವರ ಮನೆಯನ್ನು ಸ್ಥಳೀಯ ಓಡಲ ನಿವಾಸಿ ರಫೀಕ್ ಎಂಬವರು ಸಂಪೂರ್ಣ ಕೆಡವಿ ಮನೆಯ ಸೊತ್ತುಗಳನ್ನು ಬೀದಿಗೆಸೆದ ವಿಲಕ್ಷಣಕಾರಿ ಘಟನೆ ನಡೆದಿದೆ.

ರಾಜೀವಿಯವರು ಸದ್ರಿ ಮನೆಯಲ್ಲಿ ಪತಿ‌ ಹಾಗೂ ಮಗಳೊಂದಿಗೆ ವಾಸವಾಗಿದ್ದರು. ಅಲ್ಲದೆ ಇದೇ ಸ್ಥಿರಾಸ್ತಿಯಲ್ಲಿ ಅಡಿಕೆ ಮತ್ತು ತೆಂಗು ಕೃಷಿಯನ್ನೂ ಮಾಡಿರುತ್ತಾರೆ. ಹೀಗಿರುವಲ್ಲಿ 11.00 ಗಂಟೆಗೆ ರಾಜೀವಿ ಮತ್ತು ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರಫೀಕ್ ಎಂಬವರು ನಮ್ಮ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿರುತ್ತಾರೆ. ಅಲ್ಲದೇ ಮನೆಯಲ್ಲಿದ್ದ ಟಿ.ವಿ. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣಗಳು, ಬಟ್ಟೆ ಬರೆ, ದಿನಸಿ ಸಾಮಾನು ಇನ್ನಿತ್ಯಾದಿ ಎಲ್ಲಾ ವಸ್ತುಗಳನ್ನು ಮನೆಯಿಂದ ತೆಗೆದು ಬೀದಿಗೆ ಎಸೆದಿದ್ದಾರೆ.

ಈ ಕೃತ್ಯದ ಬಗ್ಗೆ ದಂಪತಿಯ ಅಪ್ರಾಪ್ತ ಪ್ರಾಯದ ಮಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಎದುರುದಾರರ ಈ ಅಕ್ರಮ ಕೆಲಸವನ್ನು ವಿಡಿಯೋ ರೆಕಾರ್ಡಿಂಗ್ ಮಾಡಲು ಹೋದಾಗ, ಎದುರುದಾರರು “ನೀನು ಏನಾದರೂ ದೂರನ್ನು ನೀಡಿದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಲಾಗಿದೆ. ಭಯಗೊಂಡ ಅಪ್ರಾಪ್ತ ಬಾಲಕಿ ಜೋರಾಗಿ ಅಳುತ್ತಿದ್ದ ಸಂದರ್ಭದಲ್ಲಿ ನೆರೆಕರೆಯವರಾದ ತ್ಯಾಗರಾಜ್ ಮತ್ತು ಜಯ ಇವರು ಸ್ಥಳಕ್ಕೆ ಧಾವಿಸಿ ಎದುರುದಾರರ ಕೃತ್ಯವನ್ನು ಪ್ರಶ್ನಿಸಿದಾಗ ಎದುರುದಾರರು ಸದ್ರಿ ತ್ಯಾಗರಾಜ್ ಮತ್ತು ಜಯ ಇವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ‘ತನ್ನ ವಿಷಯಕ್ಕೆ ಬಂದಲ್ಲಿ ನಿಮ್ಮಿಬ್ಬರ ಮನೆಯನ್ನು ಕೂಡಾ ಒಡೆದುಹಾಕುತ್ತೇನೆ” ಎಂದು ಬೆದರಿಕೆಯನ್ನು ಹಾಕಿದ್ದಾರೆ ಎಂದು ದೂರು ಕೇಳಿಬಂದಿದೆ.

ಇದೀಗ ಇಡೀ ಘಟನೆಯ ದೃಷ್ಯಾವಳಿಗಳೂ ಸಹಿತ ಫೋಟೋ ಹೊಂದಿರುವ ಪೆನ್‌ಡ್ರೈವನ್ನು ದೂರಿನ ಜೊತೆಗೆ ಲಗತ್ತಿಸಿ ಪೊಲೀಸ್ ಇಲಾಖೆಗೆ ಸಲ್ಲಿಸಿದ್ದಾರೆ.ಇದರಿಂದಾಗಿ ನಮಗೆ 10 ಲಕ್ಷ ರೂ. ಗಳಷ್ಟು ನಷ್ಟ ಉಂಟಾಗಿದೆ ಎಂದು ಅಲವತ್ತುಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಮುಂದಿನ ಕ್ರಮಕ್ಕೆ ಅಣಿಯಾಗಿದ್ದಾರೆ.

Related posts

ಚೈನೈ: ಶಾಸ್ತ್ರೀಯ ಸಂಗೀತ ಆಕಾಶ್ ಕೃಷ್ಣ ದ್ವಿತೀಯ

Suddi Udaya

ಹಾಡುಹಗಲೇ ಚಾರ್ಮಾಡಿ ಘಾಟಿಯಲ್ಲಿ ಸಂಚರಿಸಿ ಆತಂಕ ಸೃಷ್ಟಿದ ಕಾಡಾನೆ: ಬೈಕ್ ಸವಾರ ಅಪಾಯದಿಂದ ಪಾರು

Suddi Udaya

ಲಾಯಿಲ ಕನ್ನಾಜೆ ನಿವಾಸಿ ಸೇಸಪ್ಪ ಸಪಲ್ಯ ನಿಧನ

Suddi Udaya

ಭಾರಿ ಮಳೆಗೆ: ಪುತ್ತಿಲ ನಡುಕೇರ್ಯದಲ್ಲಿ ಬರೆ ಕುಸಿತ

Suddi Udaya

ನಿಟ್ಟಡೆ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿನಲ್ಲಿ ಯೋಗ ದಿನಾಚರಣೆ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋ. ಬಿಸಿ ಟ್ರಸ್ಟ್ ಗುರುವಾಯನಕೆರೆ-ಕಣಿಯೂರು ವಲಯ ಒಕ್ಕೂಟದ ಪದಗ್ರಹಣ ಸಮಾರಂಭ

Suddi Udaya
error: Content is protected !!