
ಹೊಸಪಟ್ಣ: ಬಜಿರೆ ಗ್ರಾಮದ ಹೊಸಪಟ್ಣ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಶೋಕ್ ಪೂಜಾರಿ ಕಜಿಪಟ್ಟ ಹಾಗೂ ಉಪಾಧ್ಯಕ್ಷರಾಗಿ ಮೋಹನಂದ ಪೂಜಾರಿ ಕುಡ್ಮೇರು ಆಯ್ಕೆಯಾದರು.
ನಿರ್ದೇಶಕರುಗಳಾಗಿ ಗೋಪಾಲ ಟೈಲರ್ ಹೊಸಪಟ್ಣ, ಪ್ರವೀಣ್ ಹೆಚ್. ಹೊಸಪಟ್ಣ, ಸುರೇಶ್ ಪೂಜಾರಿ ಪರಾರಿ, ರವಿ ಪೂಜಾರಿ ತಿಮರಡ್ಡ, ಯೋಗೀಶ್ ಪೂಜಾರಿ ನಾರ‍್ಮೇರು, ಮೋನಪ್ಪ ಗೌಡ ಜೋಗಿಲಬೆಟ್ಟು, ಹೇಮಾವತಿ ಬಾಡಾರು, ರೇವತಿ ಬ್ರಾಣಿಗೇರಿ, ಮಾಲತಿ ಅಂಗರದಡ್ಡು, ರಾಜೀವಿ ಹೊಸಪಟ್ಣ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ನಾಗೇಂದ್ರ ಬಿ. ಭಾಗವಹಿಸಿದ್ದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ರಂಜಿತ್ ವಿ.ಎಸ್., ಹಾಲು ಪರೀಕ್ಷಕ ವಿಕಾಸ್ ಪೂಜಾರಿ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.











