ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿಸಂಘ-ಸಂಸ್ಥೆಗಳು

ವೇಣೂರು: ಬಜಿರೆ ಬತ್ತಾರುನಲ್ಲಿ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಸಂಪನ್ನ

ಬೆಳ್ತಂಗಡಿ : ಲವ್ ಜಿಹಾದ್, ಮತಾಂತರ, ವಕ್ಫ್ ಕಾಯ್ದೆ ಮತ್ತು ದೇವಸ್ಥಾನಗಳ ಸರ್ಕಾರೀಕರಣದಂತಹ ಭೀಕರ ಆಪತ್ತುಗಳಿಂದ ಹಿಂದೂ ಸಮಾಜವನ್ನು ರಕ್ಷಿಸಲು ಭಾರತವನ್ನು ಸಂವಿಧಾನಬದ್ಧ ‘ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸುವುದೇ ಏಕೈಕ ಪರ್ಯಾಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಡಾ. ಪ್ರಣವ್ ಮಲ್ಯ ತಿಳಿಸಿದರು.

ಅವರು ಶ್ರೀ ವಿಘ್ನೇಶ್ವರ ಭಜನಾ ಮಂದಿರ ಬಜಿರೆ ಬತ್ತಾರು, ವೇಣೂರು ನಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಧರ್ಮಪ್ರೇಮಿಗಳು ಸಂಘಟಿತರಾಗುವ ಮೂಲಕ ರಾಷ್ಟ್ರ ಜಾಗೃತಿ ಸಭೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಂಖನಾದ ಮತ್ತು ವೇದಮಂತ್ರಗಳ ಸಾತ್ತ್ವಿಕ ಪರಿಸರದಲ್ಲಿ ನಡೆದ ಈ ಕಾರ್ಯಕ್ರಮವು ಹಿಂದೂ ಸಮಾಜದ ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿತು.

ಪ್ರಣವ್ ಮಲ್ಯ ಮಾತನಾಡಿ ಸಂವಿಧಾನವು ಹಿಂದೂಗಳಿಗೆ ಅಭಿಪ್ರಾಯಗಳನ್ನು ಮತ್ತು ಅವುಗಳ ಪ್ರಸಾರ ಮಾಡುವ ಅಧಿಕಾರವನ್ನು ನೀಡಿರುತ್ತದೆ. ಹಿಂದೂ ರಾಷ್ಟ್ರದ ಸಂಕಲ್ಪನೆಯ ಪ್ರಸಾರವನ್ನು ಮಾಡುವುದು ಹಿಂದುಗಳ ಸಂವಿಧಾನದತ್ತ ಅಧಿಕಾರವಾಗಿದೆ. ಹಿಂದೂ ರಾಷ್ಟ್ರ ಎಂದರೆ ಸತ್ವಗುಣಿ ಸಾತ್ತ್ವಿಕ ಜನರ ರಾಷ್ಟ್ರವಾಗಿದೆ; ಇದನ್ನು ವಿರೋಧಿಸುವುದು ಮತಾಂಧರ ನಿತ್ಯದ ಕೆಲಸವಾಗಿದೆ ಎಂದರು. ಸಮಿತಿಯು ಕಳೆದ 24 ವರ್ಷಗಳಿಂದ 2500ಕ್ಕೂ ಹೆಚ್ಚು ಸಭೆಗಳ ಮೂಲಕ ಲಕ್ಷಾಂತರ ಜನರಲ್ಲಿ ಧರ್ಮಜಾಗೃತಿ ಮೂಡಿಸುತ್ತಿದ್ದು, ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವಿ ಸ್ವರಾಜ್ಯ’ದ ಸಂಕಲ್ಪದೊಂದಿಗೆ ಪ್ರತಿಯೊಬ್ಬ ಹಿಂದೂ ಪ್ರತಿದಿನ ಒಂದು ಗಂಟೆ ಧರ್ಮ ಕಾರ್ಯಕ್ಕಾಗಿ ಸಮಯ ಮೀಸಲಿಡಬೇಕು ಎಂದು ಅವರು ಕರೆ ನೀಡಿದರು.

ಸನಾತನ ಸಂಸ್ಥೆಯ ತೀರ್ಥೇಶ್ ಮಾರ್ಗದರ್ಶನ ನೀಡುತ್ತಾ, ‘ಯತೋ ಧರ್ಮಸ್ತತೋ ಜಯಃ’ ಎಂಬಂತೆ ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯ ನಿಶ್ಚಿತ ಎಂದು ನುಡಿದರು. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದಕ್ಕಿಂತ ನಮ್ಮ ಪ್ರತಿಯೊಂದು ಕೃತಿ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು; ಪಾಶ್ಚಾತ್ಯ ಅಂಧಾನುಕರಣೆ ಬಿಟ್ಟು ಶಾಸ್ತ್ರಬದ್ಧವಾಗಿ ಧರ್ಮಾಚರಣೆ ಮಾಡಿದಾಗ ಮಾತ್ರ ಆತ್ಮಬಲ ವೃದ್ಧಿಯಾಗಿ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಸಂಸ್ಕೃತಿಯನ್ನು ಮರೆತ ಸಮಾಜಕ್ಕೆ ಭವಿಷ್ಯವಿಲ್ಲ, ಆದ್ದರಿಂದ ಪ್ರತಿಯೊಂದು ಹಬ್ಬ ಮತ್ತು ಸಂಪ್ರದಾಯಗಳ ಹಿಂದಿರುವ ವೈಜ್ಞಾನಿಕ ಧರ್ಮಶಾಸ್ತ್ರವನ್ನು ಅರಿತು ಶ್ರದ್ಧೆಯಿಂದ ಆಚರಿಸುವ ಮೂಲಕ ಕರ್ಮನಿಷ್ಠ ಹಿಂದೂಗಳಾಗೋಣ ಎಂದು ಅವರು ಉಪಸ್ಥಿತರಿಗೆ ಕರೆ ನೀಡಿದರು.

ಧರ್ಮ ಪ್ರೇಮಿ ರಾಜೇಂದ್ರ ಕುಮಾರ್ ಜೈನ್ ಮಾತನಾಡಿಇತರ ಪಂಥದವರಲ್ಲಿ ಚಿಕ್ಕಂದಿನಿಂದಲೇ ಅವರ ಧರ್ಮದ ಶಿಕ್ಷಣ, ಅವರ ಧಾರ್ಮಿಕ ಗ್ರಂಥಗಳ ಅಭ್ಯಾಸಗಳು ಸಿಕ್ಕಿರುತ್ತವೆ. ಸಾಧಾರಣ 16 ವರ್ಷ ತುಂಬುವಾಗ ಅವರು ಅವರಲ್ಲಿನ ಧಾರ್ಮಿಕ ಶಿಕ್ಷಣ ಹಾಗೂ ಆಚರಣೆಯನ್ನು ಕಲಿತಿರುತ್ತಾರೆ.ಆದರೆ ನಮ್ಮ ಹಿಂದೂ ಧರ್ಮದಲ್ಲಿ ಇಂತಹ ವ್ಯವಸ್ಥೆಗಳು ಇಲ್ಲದಿರುವುದರಿಂದ ನಾವು ಅದಪತನದತ್ತ ಸಾಗುತ್ತಿದ್ದೇವೆ.ಆದುದರಿಂದ ಇನ್ನು ಮುಂದೆ ನಮ್ಮಲ್ಲಿ ಕೂಡ ಇಂತಹ ವ್ಯವಸ್ಥೆಗಳು ಆಗುವುದು ಅನಿವಾರ್ಯವಾಗಿದೆ. ಇಂತಹ ಕಾರ್ಯಕ್ರಮದಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ಕೊಟ್ಟರು.

ಈ ಸಂದರ್ಭದಲ್ಲಿ ಜಯ ಶಂಕರ ಹೆಗ್ಡೆ, ಸುನಿಲ್ ಪೂಜಾರಿ, ಸಂದೀಪ್ ಹೆಗ್ಡೆ, ಪ್ರವೀಣ್ ಆಂಕರ್ಜಾಲ್, ಕಾಶಿನಾಥ ಹೆಗ್ಡೆ, ಗಿರೀಶ್ ಕುಲಾಲ್, ವಿಶ್ವನಾಥ ಆಚಾರ್ಯ, ಪ್ರಶಾಂತ್ ಹೆಗ್ಡೆ, ಗೋಪಾಲ್ ಆಚಾರ್ಯ, ಶಶಿಕುಮಾರ್ ಇಂದ್ರ, ಸುರೇಶ್ ಕುಮಾರ್ ಆರಿಗ ಪೆರ್ಮಾನು ಗುತ್ತು, ಮಲ್ಲಿಕಾ ಕಾಶಿನಾಥ್, ಸುಚಿತ್ರ, ಲೀಲಾವತಿ, ಚಂದ್ರಶೇಖರ ಭಟ್ ಅರ್ಕಲು, ವಿಜಯ್ ಹೆಗ್ಡೆ, ವಿಜಯಕುಮಾರ್ ಕೆರೆ ಕೋಡಿ, ಹರೀಶ್ ಶೆಟ್ಟಿ, ಮೋನಪ್ಪ ಗೌಡ, ಶಿವಾನಂದ ಗೌಡ, ರಘು ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Related posts

ಗೇರುಕಟ್ಟೆ ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ವತಿಯಿಂದ ಕೃಷ್ಣ ಜನ್ಮಾಷ್ಠಮಿ

Suddi Udaya

ವೇಣೂರು ತುಳುನಾಡ ಜವನೆರ್ ಹೆಚ್.ಪಿ.ಎಲ್ ಸೀಸನ್ -7 ರ ಪದಾಧಿಕಾರಿಗಳ ಆಯ್ಕೆ

Suddi Udaya

ಇಂದಬೆಟ್ಟು ಗ್ರಾ.ಪಂ. ನಲ್ಲಿ ಮಹಿಳಾ ಹಾಗೂ ಮಕ್ಕಳ ಗ್ರಾಮ ಸಭೆ

Suddi Udaya

ಚಿಕ್ಕಮಗಳೂರಿನ ವಕೀಲ ಪ್ರೀತಮ್ ರವರ ಮೇಲಿನ ಪೊಲೀಸ್ ಹಲ್ಲೆಗೆ ತಾಲೂಕು ವಕೀಲರ ಸಂಘದಿಂದ ಖಂಡನೆ: ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹಿಸಿ ತಹಶೀಲ್ದಾ‌ರ್ ಮೂಲಕ ಮುಖ್ಯಮಂತ್ರಿಗೆ ಮನವಿ

Suddi Udaya

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ 100 ನೇ ಕಾರಿನ ಕೀ ಹಸ್ತಾಂತರ ಕಾರ್ಯಕ್ರಮ

Suddi Udaya

ಹುಣ್ಸೆಕಟ್ಟೆ ಸಮುದಾಯ ಭವನದಲ್ಲಿ ಸರ್ಪಸಂಸ್ಕಾರ ಮತ್ತು ಆಶ್ಲೇಷಾ ಬಲಿ ಪೂಜೆ

Suddi Udaya
error: Content is protected !!