26.5 C
ಪುತ್ತೂರು, ಬೆಳ್ತಂಗಡಿ
September 20, 2026
ಅಭಿನಂದನೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಕಾಲೇಜಿನ ತಾಂತ್ರಿಕ ವಿದ್ಯಾಲಯದ ಗ್ರಂಥಪಾಲಕಿ ಡಾ. ರಜತಾ ಪಿ ಶೆಟ್ಟಿ ಪ್ರಬಂಧಕ್ಕೆ ಅಂತರಾಷ್ಟ ಮಟ್ಟದ ಅತ್ಯುತ್ತಮ ಪ್ರಬಂಧ ಪ್ರಶಸ್ತಿ

ಉಜಿರೆ: ರಾಜ್ಯ ಗ್ರಂಥಾಲಯ ಸಂಘ, ತುಮಕೂರು ವಿಶ್ವವಿದ್ಯಾಲಯ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ, ಬೆಂಗಳೂರಿನ ಎಲ್‌ಐಎಸ್ ಅಕಾಡೆಮಿ, ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ಮೂರು ದಿನಗಳಿಂದ ನಡೆದ “ರೀಡರ್ಸ್ ಆರ್ ಲೀಡರ್ಸ್’ ಘೋಷವಾಕ್ಯದ ಅಂತಾರಾಷ್ಟ್ರೀಯ ಗ್ರಂಥಪಾಲಕರ ಸಮ್ಮೇಳನದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ವಿದ್ಯಾಲಯದ ಗ್ರಂಥಪಾಲಕಿ ಡಾ. ರಜತಾ ಪಿ ಶೆಟ್ಟಿ ಮಂಡಿಸಿದ ಪ್ರಬಂಧಕ್ಕೆ ಅಂತರರಾಷ್ಟ ಮಟ್ಟದ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ಲಭಿಸಿದೆ.

ಇವರು ‘Empowering Readers as Leaders: The Role of Academic Libraries in Bridging Information Literacy Gaps’ ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಬಂಧದಲ್ಲಿ ಉನ್ನತ ಶಿಕ್ಷಣದಲ್ಲಿ ಮಾಹಿತಿ ಸಾಕ್ಷರತೆ (Information Literacy) ಅಂತರವನ್ನು ಕಡಿಮೆ ಮಾಡುವಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ, ಸಂಶೋಧನಾ ಸಾಮರ್ಥ್ಯ ಮತ್ತು ಜೀವನಪರ್ಯಂತ ಕಲಿಕೆಯ ಕೌಶಲ್ಯಗಳನ್ನು ಬೆಳೆಸುವಲ್ಲಿ ಶೈಕ್ಷಣಿಕ ಗ್ರಂಥಾಲಯಗಳ ಪರಿವರ್ತನಾತ್ಮಕ ಪಾತ್ರವನ್ನು ವಿವರಿಸಲಾಗಿದೆ.

ರೀಡರ್ಸ್ ಆರ್ ಲೀಡರ್ಸ್ ಘೋಷವಾಕ್ಯದ ಅಂತಾರಾಷ್ಟ್ರೀಯ ಗ್ರಂಥಪಾಲಕರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಜಿ. ಶೋಭಾ ಅತ್ಯುತ್ತಮ ಪ್ರಬಂಧ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಾಧನೆಗೆ ಎಸ್.ಡಿ.ಎಂ ಸಂಸ್ಥೆಯ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಎಸ್.ಡಿ.ಎಂ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಅಶೋಕ್ ಟಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗವರು ಅಭಿನಂದಿಸಿರುತ್ತಾರೆ. ಈ ಸಾಧನೆ ಉಜಿರೆಯ ಎಸ್.ಡಿ.ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗರಿಮೆಯನ್ನು ಹೆಚ್ಚಿದ್ದು, ಶೈಕ್ಷಣಿಕ ಶ್ರೇಷ್ಠತೆ ಹಾಗೂ ಗ್ರಂಥಾಲಯ ಸೇವೆಗಳ ನವೀನತೆಗೆ ಸಂಸ್ಥೆಯ ಬದ್ಧತೆಯನ್ನು ಪ್ರತಿಬಿಂಬಿಸಿದೆ.

Related posts

ದ.ಕ ಸ.ಹಾ.ಉ. ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಎಚ್. ಪ್ರಭಾಕರ ಹುಲಿಮೇರು ರವರಿಗೆ ಸಿದ್ದಕಟ್ಟೆ ಕೃ.ಪ.ಸ. ಸಂಘದ ಆಡಳಿತ ಮಂಡಳಿಯಿಂದ ಸನ್ಮಾನ

Suddi Udaya

ವೇಣೂರು: ಭಾರತೀಯ ಜೈನ್ ಮಿಲನ್ ವತಿಯಿಂದ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್‌ರವರಿಗೆ ಅಭಿನಂದನೆ

Suddi Udaya

ಗುರುವಾಯನಕೆರೆ: ನಿಸರ್ಗ ಕರ್ಟನ್ & ವಾಲ್ ಪೇಪರ್ ಮಳಿಗೆಯಲ್ಲಿ ದೀಪಾವಳಿ ಪ್ರಯುಕ್ತ ಗ್ರಾಹಕರಿಗೆ ಸ್ಪೆಷಲ್ ಡಿಸ್ಕೌಂಟ್ ಸೇಲ್

Suddi Udaya

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಭಾರತೀಯ ಸೈನ್ಯದ ಅಭ್ಯುದಯಕ್ಕಾಗಿ ಸೀಯಾಳಭಿಷೇಕದ ಮೂಲಕ ವಿಶೇಷ ಪ್ರಾರ್ಥನೆ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Suddi Udaya

ತಾರತಮ್ಯವಿಲ್ಲದೆ ಎಲ್ಲಾ ಅರ್ಹರಿಗೂ ಸರಕಾರದ ಸೌಲಭ್ಯ ತಲುಪಬೇಕು ಎಂಬುದು ಕೇಂದ್ರದ ಬಜೆಟ್‌ನಲ್ಲಿರುವುದು ಸುಸ್ಪಷ್ಟ: ಪ್ರತಾಪಸಿಂಹ ನಾಯಕ್

Suddi Udaya
error: Content is protected !!