ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

ಬೆಳ್ತಂಗಡಿ: ಪದ್ಮುಂಜ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಪ್ರಯುಕ್ತ ಮಾ.೪ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಕೊಲ್ಲೊಟ್ಟು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ಬಾಲವಾಗ್ಮಿ ಹಾರಿಕಾ ಮಂಜುನಾಥ್ ಧಾರ್ಮಿಕ ಉಪನ್ಯಾಸ ನೀಡಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್,ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಬಂಗೇರ ಬ್ರಿಗೇಡ್ ಅಧ್ಯಕ್ಷೆ ಬಿನುತಾ ಬಂಗೇರ, ಗುರುವಾಯನಕೆರೆ ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಶ್ರೀಕ್ಷೇತ್ರ  ಧ. ಗ್ರಾ. ಯೋ. ನಿವೃತ್ತ ಪ್ರಾದೇಶಿಕ ನಿದೇರ್ಶಕ ದುಗ್ಗೇ ಗೌಡ, ದ. ಕ. ಮತ್ತು. ಉಡುಪಿ ಜಿಲ್ಲಾ ಕಲ್ಲು ಗಣಿಗಾರಿಕಾ ಸಂಘ ಅಧ್ಯಕ್ಷ ಮನೋಜ್ ಶೆಟ್ಟಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸೀತಾರಾಮ ಮಡಿವಾಳ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ  ರಾಧಕೃಷ್ಣ ರೖ ಬೂಡಿಯಾರ್, ಇಚ್ಚೂರು ಬಾಲಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಆರ್ಚಕ ಸುರೇಶ್ ಪುತ್ತುರಾಯ, ಮುಂಡೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಆನಂದ ಗೌಡ, ಆಡಳಿತ ಮಂಡಳಿ ಅಧ್ಯಕ್ಷ  ಸದಾನಂದ ಮೇಲಾಂಟ ಮೊಗರೋಡಿ ಹಾಗೂಜೀರ್ಣೋದ್ದಾರ ಸಮಿತಿ ಅಧ್ಯಕ್ಷ  ಶಿವಶಂಕರ್ ನಾಯಕ್ ಮಾರುತಿಪುರ ಉಪಸ್ಥಿತರಿದ್ದರು.

ವಿಲಾಸ್ ಪ್ರಾರ್ಥಿಸಿದರು. ಆಡಳಿತ ಮಂಡಳಿ ಕೋಶಾಧಿಕಾರಿ ರಕ್ಷಿತ್ ಶೆಟ್ಟಿ ಪಣೆಕ್ಕರ ಸ್ವಾಗತಿಸಿದರು.

ವೈಧಿಕ ಕಾರ್ಯಕ್ರಮಗಳು, ಭಜನೆ ಕಾರ್ಯಕ್ರಮಗಳು ನಡೆಯಿತು. ಮೈಸೂರು ರಾಮಚಂದ್ರ ಆಚಾರ್ ಅವರಿಂದ ದಾಸವಾಣಿ ಮತ್ತು ಭಕ್ತಿಗೀತೆ. ಮಂಗಳೂರು ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘದಿAದ ಭಕ್ತಿ ರಸಮಂಜರಿ. ಕಣಿಯೂರು ಪಿಲಿಗೂಡು ಅಂಗನವಾಡಿ ಕೇಂದ್ರ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ, ಪಿಲಿಗೂಡು ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ, ಕಣಿಯೂರು ಕಸಬಾ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಗಮನ ಸೆಳೆಯಿತು.

Related posts

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶಕ್ಕೆ ಅರ್ಜಿ ಆಹ್ವಾನ

Suddi Udaya

ಜಮೀಯ್ಯತುಲ್ ಪಲಾಹ್ ಬೆಳ್ತಂಗಡಿ ವತಿಯಿಂದ ಪ್ರತಿಭಾ ಪುರಸ್ಕಾರ, ರೂ. 3 ಲಕ್ಷ‌ ವಿದ್ಯಾರ್ಥಿವೇತನ ವಿತರಣೆ

Suddi Udaya

ಕೊಕ್ಕಡ: ಕಲಾಯಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಸತೀಶ್ ರವರ ಮನೆಗೆ ಮರ ಬಿದ್ದು ಹಾನಿ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ನಾಯಕರ ಶೃಂಗಸಭೆ ಕಾರ್ಯಕ್ರಮ

Suddi Udaya

ತಣ್ಣೀರುಪಂಥ ವಲಯದ ಪುತ್ತಿಲ ಕಾರ್ಯಕ್ಷೇತ್ರದ ಒಕ್ಕೂಟದ ಸದಸ್ಯರಿಂದ ಶ್ರೀ ಮಹಾ ವಿಷ್ಣು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಅಳದಂಗಡಿ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ

Suddi Udaya
error: Content is protected !!