37.9 C
ಪುತ್ತೂರು, ಬೆಳ್ತಂಗಡಿ
March 6, 2026
ಅಭಿನಂದನೆಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿವರದಿಸಾಧಕರು

ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಕೆ. ಗೌಡರಿಗೆ ಕನ್ನಡಿಗ-2026 ಪ್ರಶಸ್ತಿ

ಬೆಳ್ತಂಗಡಿ: ನ್ಯೂಸ್ 18 ಕನ್ನಡ ಚಾನೆಲ್ ಅರ್ಪಿಸುವ ಈ ವರ್ಷದ ಕನ್ನಡಿಗ-2026 ಅವಾರ್ಡ್ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಪ್ರಗತಿಪರ ಸಾವಯವ ಕೃಷಿಕ ಬೆಳ್ತಂಗಡಿ ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಕೆ. ಗೌಡರಿಗೆ ಮಾ.3ರಂದು ಬೆಂಗಳೂರು ನಲ್ಲಿ ಕಂದಾಯ ಸಚಿವ ಕೃಷ್ಣಬೈರೇ ಗೌಡರವರು ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ನ್ಯೂಸ್ 18 ಕನ್ನಡ ಸಂಪಾದಕ ಹರಿಪ್ರಸಾದ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಸಿನಿಮಾ ತಾರೆಯರು, ಸಾಧಕರು ಉಪಸ್ಥಿತರಿದ್ದರು.

ಅಡಿಕೆ, ತೆಂಗು, ಕಾಳು ಮೆಣಸು, ಹಣ್ಣು ಹಂಪಲು, ಮೀನುಗಾರಿಕೆ, ಕೋಳಿಸಾಕಣೆ, ಹೈನುಗಾರಿಕೆ ಹಾಗೂ ವಿವಿಧ ರೀತಿಯ ಪ್ರಾಣಿ ಪಕ್ಷಿಗಳ ಸಾಕಣೆಯ ಜೊತೆಗೆ ಸುಸ್ಥಿರ ಮಾದರಿಯಲ್ಲಿ ಬೆಳೆಸುವ ಮಾದರಿ ಕೃಷಿಕರಾಗಿ ಸಮಗ್ರ ಕೃಷಿಯಲ್ಲಿ ಗುರುತಿಸಿಕೊಂಡಿದ್ದಾರೆ. ತಾಯಿ ಕುಸುಮ, ಪತ್ನಿ, ಮಕ್ಕಳು, ಸಹೋದರ ದಂಪತಿಗಳು ಇವರೆಲ್ಲರೂ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಾಳೆಕುದ್ರು ಮಠದ ಪೂಜ್ಯಶ್ರೀ ವಾಸುದೇವ ಸದಾಶಿವ ಆಶ್ರಮ ಮಹಾಸ್ವಾಮೀಜಿ ಭೇಟಿ

Suddi Udaya

ಕುಕ್ಕೇಡಿ : ಗುಲಾಬಿ ಶೆಟ್ಟಿ ನಿಧನ

Suddi Udaya

ಬಳಂಜ: ಬಿಲ್ಲವ ಸಂಘದಲ್ಲಿ ಮರಿಯಾಲಡೊಂಜಿ ಐತಾರ ವಿಶೇಷ ಕಾರ್ಯಕ್ರಮ: ಆಟಿಯ ವಿವಿಧ ತಿಂಡಿ ತಿನಸುಗಳ ಪ್ರದರ್ಶನ,ವಿವಿಧ ಮನೋರಂಜನಾ ಕಾರ್ಯಕ್ರಮ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಪದಾಧಿಕಾರಿಗಳ ಪದಪ್ರದಾನ

Suddi Udaya

ಡಿ.2 : ಕಾಪಿನಡ್ಕದಲ್ಲಿ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಸ.ಕಿ.ಪ್ರಾ.ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವ ಸಂಭ್ರಮ

Suddi Udaya

ಹುಣ್ಸೆಕಟ್ಟೆ: ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕರಿಯಪ್ಪ ಇವರಿಗೆ ಗೌರವಾರ್ಪಣೆ

Suddi Udaya
error: Content is protected !!